Advertisement

ಮಿಜೋರಾಂ: ವಿದೇಶಕ್ಕೆ ಕಳ್ಳಸಾಗಾಣಿಕೆಯಾಗುತ್ತಿದ್ದ 468 ವನ್ಯಜೀವಿಗಳ ರಕ್ಷಣೆ

07:59 PM May 28, 2022 | Team Udayavani |

ಐಜ್ವಾಲ್: ಮಿಜೋರಾಂ ಪೊಲೀಸರು ಮ್ಯಾನ್ಮಾರ್‌ನಿಂದ ಕಳ್ಳಸಾಗಣೆಯಾಗಬಹುದೆಂದು ಶಂಕಿಸಲಾದ 468 ವಿದೇಶಿ ಪ್ರಾಣಿಗಳನ್ನು ಚಂಫೈ ಜಿಲ್ಲೆಯಲ್ಲಿ ರಕ್ಷಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ನಿರ್ದಿಷ್ಟ ಮಾಹಿತಿ ಮೇರೆಗೆ, ಪೊಲೀಸರು ಮ್ಯಾನ್ಮಾರ್ ಗಡಿಯಲ್ಲಿರುವ ಚಂಫೈ ಜಿಲ್ಲೆಯ ಖವ್ಕಾವ್ನ್ ಚೆಕ್ ಗೇಟ್‌ನಲ್ಲಿ ಪ್ರಾಣಿಗಳನ್ನು ರಕ್ಷಿಸಿದರು ಮತ್ತು ವನ್ಯಜೀವಿ ಪ್ರಾಣಿಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಐದು ಜನರನ್ನು ಬಂಧಿಸಿದ್ದಾರೆ.

ರಕ್ಷಿಸಲಾದ ಪ್ರಾಣಿಗಳಲ್ಲಿ ನಾಲ್ಕು ಆಮೆಗಳು, 11 ಹಾವುಗಳು, 442 ಹಲ್ಲಿಗಳು, ಕಾಡು ಬೆಕ್ಕುಗಳು ಸೇರಿ ಇತರ ವನ್ಯ ಪ್ರಾಣಿಗಳಿವೆ ಎಂದು ಅಧಿಕಾರಿ ಗುರುವಾರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next