Advertisement
Related Articles
Advertisement
ಈ ಶಾಲೆಯ ವೈಶಿಷ್ಟé ಏನೆಂದರೆ, ಮೊದಲ ಮೂರು ತಿಂಗಳ ಕಾಲ ವಿದ್ಯಾರ್ಥಿಗೆ ಡ್ರಾಯಿಂಗ್ ತರಬೇತಿ ಕೊಡಲಾಗುತ್ತದೆ. ಬೇಲೂರು, ಹಂಪಿ ಶಿಲ್ಪಗಳನ್ನು ತೋರಿಸಿ, ಅದರ ಪ್ರತಿಯೊಂದನ್ನೂ ವಿವರಿಸಲಾಗುತ್ತದೆ. ಪ್ರತಿಮೆಯ ತಲೆಯಿಂದ ಪಾದದ ತನಕ ಅನುಸರಿಸಬೇಕಾದ ಅಳತೆ, ಪ್ರಮಾಣಗಳನ್ನು ಮನದಟ್ಟು ಮಾಡಲಾಗುತ್ತದೆ. ಚಿತ್ರವನ್ನು ಅವರೇ ಬರೆಯಬೇಕು. ಬಳಿಕ ಅರ್ಧ ದಿನ ಡ್ರಾಯಿಂಗ್, ಅರ್ಧ ದಿನ ಕೆಲಸ. ಒಂದೂವರೆ ತಿಂಗಳಲ್ಲಿ ಅವರು ತಮಗಿಷ್ಟವಾದ ಪ್ರತಿಮೆಗಳನ್ನು ಕಡೆಯಬಹುದು. ಹೀಗೆ ಕಲ್ಲಿನ, ಮರದ ಕೆತ್ತನೆಯ ವಿಧಾನ ಕೈವಶವಾದ ಮೇಲೆ ನಿರ್ದಿಷ್ಟವಾದ ಶಿಲ್ಪಕೃತಿಗಳ ರಚನೆಗೆ ಮಾರ್ಗದರ್ಶನ ಮಾಡುವ ಕೆಲಸ ಆರಂಭವಾಗುತ್ತದೆ. ಕೆತ್ತಬೇಕಾದ ಕಲೆಯ ಚಿತ್ರವನ್ನು ಮುಂದಿರಿಸಿಕೊಂಡು ಸೂಕ್ಷ್ಮವಾಗಿ ವಿಗ್ರಹವೊಂದನ್ನು ರೂಪಿಸುವ ಕಾಯಕಕ್ಕೆ ತಿಂಗಳುಗಳೇ ಬೇಕಾಗುತ್ತವೆ. “ಎರಡು ವರ್ಷಗಳು ಮುಗಿಯುವ ವೇಳೆಗೆ, ವಿದ್ಯಾರ್ಥಿಯಾಗಿ ಸೇರಿದ್ದವರ ಅವರ ಬೆರಳ ತುದಿಯಲ್ಲಿ ಕಲ್ಲು, ಮರಗಳು ಕಲೆಯಾಗಿ ಅರಳುವ ಕೌಶಲ ನೆಲೆಯಾಗಿರುತ್ತದೆ’ ಎನ್ನುತ್ತಾರೆ ಶಿಕ್ಷಕ ಗುಣವಂತೇಶ್ವರ ಭಟ್ಟರು. ಹೀಗೆ ವಿದ್ಯಾರ್ಥಿಗಳು ಇಷ್ಟವಾದ ರೀತಿಯಲ್ಲಿ ರಚಿಸಿದ ಸಾವಿರ ಸಾವಿರ ಶಿಲ್ಪಗಳು, ಕಾಷ್ಠ ರಚನೆಗಳು, ಲೋಹದ ಅಚ್ಚಿನಲ್ಲಿ ಸಿದ್ಧವಾದ ಕಲಾಕೃತಿಗಳು ಕಲಾಶಾಲೆಯ ಶೋಕೇಸುಗಳಲ್ಲಿ ವಿರಾಜಮಾನವಾಗಿ ಕಣ್ಮನ ಸೆಳೆಯುತ್ತವೆ. ಬೇಲೂರಿನ ಶಿಲಾ ಬಾಲಿಕೆಯರು, ಬುದ್ಧ, ಮಹಾವೀರರು, ದೇವಾನುದೇವತೆಗಳು, ಮಹಾಭಾರತ, ರಾಮಾಯಣದ ಸನ್ನಿವೇಶಗಳು, ಗಾಂಧಿ, ವಿಶ್ವೇಶ್ವರಯ್ಯನವರಂಥ ಮಹಾಪುರುಷರು, ನಿಸರ್ಗ ನೋಟಗಳು, ವಿವಿಧ ವನ್ಯಜೀವಿಗಳ ಚಿತ್ರಗಳು…ಎಲ್ಲವೂ ಇಲ್ಲಿವೆ. ಯಾವುದೋ ಭಗ್ನ ಶಿಲ್ಪದ ಅವಶೇಷದಂತೆ ಭಾಸವಾಗುವ ರಚನೆಗಳೂ ಇವೆ. ಮರದಿಂದ ನಿರ್ಮಿಸಿದ ರಥ ಅದ್ಬುತವಾಗಿದೆ. ಕುಂಬಾರಿಕೆಯ ಕಲಾತ್ಮಕ ಮಡಕೆಗಳನ್ನು ಮಾಡಿದ್ದಾರೆ. ನಿರುಪಯುಕ್ತ ಮರದ ಹಲಗೆಗಳ ಮೇಲೊಂದು ಕಲೆಯನ್ನು ಮೂಡಿಸಿ ಸದ್ಬಳಕೆ ಮಾಡಿದ ನೈಪುಣ್ಯವೂ ಇದೆ. ಪರಿಪಕ್ವವಾದ ಕಲಾರಚನೆಗಳೂ ವಿಪುಲವಾಗಿವೆ. ಕೆತ್ತನೆಗೆ ಬಳಕೆ ಏನು?
ಇಲ್ಲೇ ಹತ್ತಿರವಿರುವ ನೆಲ್ಲಿಕಾರಿನ ಗುಣಮಟ್ಟದ ಕರಿಯ ಶಿಲೆಯನ್ನು ಇಲ್ಲಿನ ವಿದ್ಯಾರ್ಥಿಗಳು ಕೆತ್ತನೆಗೆ ಬಳಸುತ್ತಾರೆ. ಕೊಡೆ ಕಡ್ಡಿಯಿಂದ ತಯಾರಿಸಿದ ಚಾಣದಿಂದ ಕೆಲಸ ಆರಂಭ. ಶಿಲೆಯು ಶಿಲ್ಪವಾಗುವ ವಿವಿಧ ಹಂತಗಳಲ್ಲಿ ಕಡಿವೆ ಚಾಣ, ಕೊಳವೆ ಚಾಣ, ರೇಖಾ ಚಾಣ, ಹಲ್ಲಿನ ಚಾಣ ಮುಂತಾದ ಹನ್ನೆರಡು ವಿಧದ ಚಾಣಗಳ ಬಳಕೆ ನಡೆಯುತ್ತದೆ. ಪೂರ್ಣಗೊಂಡ ಗ್ರಹಕ್ಕೆ ಪಾಲಿಷ್ ಮಾಡಿ ಎಣ್ಣೆ ಲೇಪಿಸಿ ಬಣ್ಣ ಹಚ್ಚುವ ಪ್ರಕ್ರಿಯೆ ನಡೆಯುತ್ತದೆ. ಕಲೆಯ ಜೊತೆಗೆ ಕಂಪ್ಯೂಟರ್ ಶಿಕ್ಷಣ ಮತ್ತು ಆಂಗ್ಲ ಭಾಷಾ ಕಲಿಕೆಯ ವ್ಯವಸ್ಥೆಯೂ ಇಲ್ಲಿದೆ. ಮರಗೆತ್ತನೆಗೆ ಯೋಗ್ಯವಾದುದು ಶಿವಾನಿ ಮರ. ಆಯುರ್ವೇದದ ದಶಮೂಲಾರಿಷ್ಟ ತಯಾರಿಸುವ ಹತ್ತು ವನಸ್ಪತಿಗಳಲ್ಲಿ ಇದೂ ಒಂದು. ಮಲೆನಾಡಿನಲ್ಲಿ ಮಾತ್ರ ಸಿಗುವ ಈ ಮರವನ್ನು ಕಲಾಶಾಲೆಯ ಬಳಿ ಕೃಷಿ ಮಾಡುವ ಯತ್ನವೂ ನಡೆದಿದೆ. ಲೋಹದ ಭಾಗದಲ್ಲಿ ಮೇಣದಿಂದ ವಿಗ್ರಹಗಳನ್ನು ತಯಾರಿಸುತ್ತಾರೆ. ಬಳಿಕ ಹೆಂಚಿನ ಹುಡಿ, ಗೋಣಿಚೀಲದ ಹುಡಿ, ಸ್ವತ್ಛ ಮಣ್ಣುಗಳನ್ನು ಕಲಸಿ ತಯಾರಿಸಿದ ಪಾಕವನ್ನು ಈ ಮೇಣದ ಮೇಲಿಂದ ಐದು ಸಲ ಕೋಟಿಂಗ್ ನೀಡಿ 10 ದಿನ ಬಿಸಿಲಲ್ಲಿ ಇಟ್ಟು ಒಣಗಿಸುತ್ತಾರೆ. ಇದಕ್ಕೆ ಮಧುಚ್ಛಿಷ್ಠ ವಿಧಾನ ಎಂಬ ಹೆಸರಿದೆಯಂತೆ. ಒಣಗಿದ ವಿಗ್ರಹದೊಳಗಿರುವ ಮೇಣವನ್ನು ಕರಗಿಸಿ ತೆಗೆದ ಬಳಿಕ ಟೊಳ್ಳಾಗುವ ಮಣ್ಣಿನ ಪದರದೊಳಗೆ ಕಂಚು, ಹಿತ್ತಾಳೆ, ತಾಮ್ರ, ಬೆಳ್ಳಿಯಂತಹ ಪಂಚಲೋಹಗಳನ್ನು ಕರಗಿಸಿ ಹೊಯ್ಯುಲಾಗುತ್ತದೆ. ಆರಿದ ಮೇಲೆ ಮಣ್ಣಿನ ಪದರವನ್ನು ಒಡೆದರೆ ವಿಗ್ರಹ ಸಿದ್ಧ. ದೇವಾಲಯಗಳಿಗೆ ಬೇಕಾಗುವ ವಿಗ್ರಹದ ಬಿಂಬಗಳು, ಮಂಟಪಗಳಾದರೆ ಅಗಲವಾದ ತಗಡುಗಳ ಮೇಲೆ ಬೇಕಾದ ಚಿತ್ರವನ್ನು ಅಂಟಿಸಿ ಬಿಸಿಯಾದ ಮೇಣದ ಪದರದ ಮೇಲಿಟ್ಟು ಚಾಣದಿಂದ ಹೊಡೆಯುವ ಮೂಲಕ ಕಲೆಯನ್ನು ರೂಪಿಸಲಾಗುತ್ತದೆ. ಉತ್ಸವಗಳಲ್ಲಿ ಕಲಾಕೃತಿ
ವಿದ್ಯಾರ್ಥಿಗಳ ಕಲಾಕೃತಿಗಳನ್ನು ನುಡಿಸಿರಿಯಂತಹ ಉತ್ಸವಗಳು, ವಿಶೇಷ ಜಾತ್ರೆಗಳಲ್ಲಿ ಪ್ರದರ್ಶನಕ್ಕೆ ಇಡುತ್ತಾರೆ. ಮಾರಾಟದಿಂದ ಬರುವ ಹಣದಲ್ಲಿ ಶೇ. 25ರಷ್ಟು, ಅದನ್ನು ತಯಾರಿಸಿದ ವಿದ್ಯಾರ್ಥಿಗಳಿಗೆ ಸೇರುತ್ತದೆ. ನಾಡಿನ ಹಲವು ದೇವಾಲಯಗಳಲ್ಲಿ ಈ ಕಲಾಶಾಲೆಯ ವಿದ್ಯಾರ್ಥಿಗಳ ಶಿಲ್ಪಕಲೆಯನ್ನು ನೋಡಬಹುದು. ಇಲ್ಲಿನ ಕಲಾಕೃತಿಗಳ ಖ್ಯಾ ಅಮೆರಿಕವನ್ನೂ ತಲುಪಿದೆಯಂತೆ… ಯಾರು ಸೇರಬಹುದು?
ಕಲಾಶಾಲೆಯಲ್ಲಿ ಈಗಾಗಲೇ 650 ಮಂದಿ ಕಲೆಯ ಪರಿಣತಿ ಪಡೆದಿದ್ದಾರೆ. 615 ಮಂದಿ ಅದನ್ನು ಜೀವನ ವೃತ್ತಿಯಾಗಿ ಸ್ವೀಕರಿಸಿ ದೇಶ ವಿದೇಶಗಳಲ್ಲಿ ಕಲೆಯ ಸುಗಂಧ ಹರಡುತ್ತಿದ್ದಾರೆ. ಹಲವರಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳೂ ದೊರೆತಿವೆ. ಹದಿನೇಳರಿಂದ ಮೂವತ್ತೆ„ದರೊಳಗಿನ ವಯಸ್ಸಿನವರು ಯಾರು ಬೇಕಾದರೂ ಇಲ್ಲಿ ಸೇರಿಕೊಳ್ಳಬಹುದು. ಎರಡು ವರ್ಷಗಳ ತರಬೇತಿಗೆ ಉಚಿತ ಊಟ, ಉತ್ತಮ ವಸತಿ, ಕಲ್ಲು ಕೆತ್ತನೆಯ ಸಲಕರಣೆಗಳು, ಉಚಿತ ಸಮವಸ್ತ್ರಗಳನ್ನು ಪಡೆದು ಯಾವುದೇ ಶುಲ್ಕವನ್ನೂ ಕೊಡದೆ ಕಲೆಯ ಪರಿಣತಿಯನ್ನು ಬಗಲಿಗೇರಿಸಿಕೊಂಡು ಹೋಗಬಹುದು. ಎಲ್ಲೆಡೆಯಿಂದ ಇಲ್ಲಿ ಕೈಗಳ ಕೌಶಲವೇ ಮುಖ್ಯ. ಆದುದರಿಂದ ಕೇವಲ ಏಳನೆಯ ತರಗತಿ ವಿದ್ಯಾಭ್ಯಾಸವಿದ್ದರೂ ಸಾಕಾಗುತ್ತದೆ. ಹಾಗೆಂದು ಪ್ರಸ್ತುತ ಕಲಿಯುತ್ತಿರುವ 75 ಮಂದಿಯಲ್ಲಿ ಹತ್ತನೆಯ ತರಗತಿಯಿಂದ ಪದವಿ ವರೆಗೂ ಓದಿದವರಿದ್ದಾರೆ. ಕರ್ನಾಟಕದ ಎಲ್ಲ ಜಿಲ್ಲೆಗಳನ್ನೂ ಪ್ರತಿನಿಧಿಸಿದವರಲ್ಲದೆ ದೂರದ ಮೇಘಾಲಯ, ಕೇರಳ, ಅಸ್ಸಾಮ್, ಬಿಹಾರ ಮೊದಲಾದೆಡೆಗಳಿಂದ ಬಂದಿರುವ ವಿದ್ಯಾರ್ಥಿಗಳೂ ಇಲ್ಲಿದ್ದಾರೆ ಎನ್ನುತ್ತಾರೆ ಶಾಲೆಯ ನಿರ್ದೇಶಕ ಸುರೇಂದ್ರ ಕಾಮತ್. ಪ. ರಾಮಕೃಷ್ಣ ಶಾಸ್ತ್ರಿ