Advertisement
ಹೌದು ಹಲವು ವೈವಿಧ್ಯ ಗಿಡಗಳನ್ನು ನಿರ್ದಿಷ್ಟ ಸ್ಥಳದಲ್ಲಿ ಬೆಳೆಸಿ ಪುಟ್ಟ ಅರಣ್ಯವನ್ನಾಗಿಸುವ ಈ ವಿಧಾನಕ್ಕೆ ಮಿಯಾವಾಕಿ ತಂತ್ರಜ್ಞಾನ ಎನ್ನಲಾಗುತ್ತದೆ. ಜಪಾನಿನಲ್ಲಿ ಹುಟ್ಟು ಪಡೆದ ಈ ತಂತ್ರಜ್ಞಾನ ಈಗಾಗಲೇ ಬೆಂಗಳೂರು, ಕೇರಳ, ದೇಶದ ಇನ್ನಿತರ ಪ್ರದೇಶಗಳಲ್ಲಿ ಹೆಸರು ಪಡೆದಿದೆ. ಇದೇ ಮೊದಲ ಬಾರಿಗೆ ನಗರದಲ್ಲಿ ಅಳವಡಿಸಲು ರಾಮಕೃಷ್ಣ ಆಶ್ರಮದ ಶ್ರೀ ಏಕಗಮ್ಯಾನಂದ ಸ್ವಾಮೀಜಿ, ಮಾಜಿ ಮೇಯರ್ ದಿವಾಕರ್ ಕೆ., ರೇಂಜ್ ಫಾರೆಸ್ಟ್ ಅಧಿಕಾರಿ ಪಿ. ಶ್ರೀಧರ್ ಹೆಜ್ಜೆ ಇಟ್ಟಿದ್ದಾರೆ.
ಮಿಯಾವಾಕಿ ಅರ್ಬನ್ ಫಾರೆಸ್ಟ್ ನಲ್ಲಿ ಒಂದು ಚದರ ಮೀ.ಗೆ ನಾಲ್ಕು ಗಿಡಗಳಂತೆ ಸುಮಾರು 600 ಗಿಡಗಳನ್ನು ನೆಡಲಾಗುತ್ತದೆ. ಇಲ್ಲಿಯ ಸಾಧಕ ಬಾಧಕಗಳನ್ನು ಗಮನಿಸಿ ಮುಂದಕ್ಕೆ ನಗರದ ಇತರ ಕಡೆಗಳಲ್ಲಿ ಅರ್ಬನ್ ಫಾರೆಸ್ಟ್ ನಡೆಸಲು ಚಿಂತನೆ ನಡೆಸಲಾಗಿದೆ. ರಸ್ತೆ ಬದಿ ನೆಡುವ ಗಿಡಗಳನ್ನು ರಸ್ತೆ ಅಗಲ, ವಿದ್ಯುತ್ ತಂತಿ, ಪೈಪ್‌ಲೈನ್, ಜಾಹೀರಾತು ಫಲಕ ಮತ್ತಿತರ ಕಾರಣಕ್ಕೆ ಕಡಿದು ಹಾಕಲಾಗುತ್ತಿದೆ. ಎತ್ತರಕ್ಕೆ ಬೆಳೆಯಲು ಬಿಡುತ್ತಿಲ್ಲ. ಒಂದು ವೇಳೆ ಗಿಡ ಬೆಳೆದರೂ ಜನ, ವಾಹನ ಸಂಚಾರದಿಂದ ಅಲ್ಲಿ ಹಕ್ಕಿಗಳು ಬಂದು ನೆಲೆಸೂವುದೂ ಇಲ್ಲ, ಗೂಡು ಕಟ್ಟುವುದೂ ಇಲ. ಕೆಲವು ಗಿಡಗಳು ಮಾತ್ರ ಬೆಳೆಯುತ್ತವೆ. ಆಗಾಗ ಗೆಲ್ಲುಗಳನ್ನು ಕಡಿಯುವುದರಿಂದ ಹಣ್ಣು, ಹೂವು ಕೂಡ ಬಿಡುವುದಿಲ್ಲ.ಅದಕ್ಕಾಗಿ ರಸ್ತೆಯಿಂದ ಸ್ವಲ್ಪ ದೂರ ಇಂತಹ ಪುಟ್ಟ ಅರಣ್ಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
Related Articles
ಮೀಯಾವಾಕಿ – ಅರ್ಬನ್ ಫಾರೆಸ್ಟ್ ನ ಕಾಮಗಾರಿ ಮುಗಿದಿದ್ದು, ಗಿಡಗಳನ್ನು ತಂದು ನೆಡುವ ಕೆಲಸವಾಗಿದೆ. ಅ. 2ರಂದು ಬೆಳಗ್ಗೆ 9.30ಕ್ಕೆ ಇದರ ಉದ್ಘಾಟನೆ ಕೆಲಸವಾಗಲಿದೆ.
Advertisement
ಮಿಯಾವಾಕಿ ಎಂದರೇನು?ಜಪಾನಿನ ಜೈವಿಕ ತಜ್ಞ ಡಾ| ಅಕಿರಾ ಮಿಯಾವಾಕಿ ಅವರು ಕಡಿಮೆ ಜಾಗದಲ್ಲಿ ದಟ್ಟ ಅರಣ್ಯ ಬೆಳೆಸುವ ವಿಶಿಷ್ಟ ಮಿಯಾವಾಕಿ ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಸಾಮಾನ್ಯ ಅರಣ್ಯ ಬೆಳೆಸುವುದಕ್ಕಿಂತ 10 ಪಟ್ಟು ಹೆಚ್ಚು ಬೆಳೆಯುವ ಈ ತಂತ್ರಜ್ಞಾನವು ಸಾಮಾನ್ಯಕ್ಕಿಂತ 30 ಪಟ್ಟು ಹೆಚ್ಚು ದಟ್ಟವಾಗಿ ಬೆಳೆಯುತ್ತದೆ. ಒಂದೇ ಸ್ಥಳದಲ್ಲಿ ಡಜನುಗಟ್ಟಲೆ ತಳಿಯ ಗಿಡಗಳನ್ನು ಬೆಳೆಸಬಹುದು ಮತ್ತು ಮೂರು ವರ್ಷದ ಬಳಿಕ ಯಾವುದೇ ನಿರ್ವಹಣೆ ಇಲ್ಲದೆ ಗಿಡಗಳು ಬೆಳೆಯುತ್ತಾ ಹೋಗುತ್ತವೆ. ಸಿದ್ಧತೆ
ಮಾಜಿ ಮೇಯರ್ ಕೆ. ದಿವಾಕರ್ ಮೂರು ಸೆಂಟ್ಸ್ ಜಾಗದಲ್ಲಿ ದಟ್ಟ ಅರಣ್ಯ ಬೆಳೆಸಿದ್ದಾರೆ. ಗಿಡಗಳು ಮೂರು ವರ್ಷಗಳಲ್ಲಿ 25 ಅಡಿ ಬೆಳೆದಿವೆ. ಅವರ ಪ್ರೇರಣೆಯಂತೆ ಮಂಗಳೂರಿನಲ್ಲಿ ಅರ್ಬನ್ ಫಾರೆಸ್ಟ್ ನಿರ್ಮಿಸಲು ಸಿದ್ಧತೆ ಮಾಡಿದ್ದೇವೆ.
-ಸ್ವಾಮಿ ಏಕಗಮ್ಯಾನಂದಜಿ, ರಾಮಕೃಷ್ಣ ಆಶ್ರಮ