ಲಕ್ನೋ: ಮದುವೆ ಸಮಾರಂಭದಲ್ಲಿ ಡಿಜೆ ಹಾಡಿಗೆ ನೃತ್ಯ ಮಾಡಿದ್ದಕ್ಕೆ ಖಾಜಿಯೊಬ್ಬರು ನಿಕಾಹ್ (ಮದುವೆ) ನೆರವೇರಿಸಲು ನಿರಾಕರಿಸಿರುವ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಜು.2 ರಂದು ಮದುವೆ ಸಮಾರಂಭ ನಡೆಯುತ್ತಿರುವ ವೇಳೆ ಡಿಜೆ ಹಾಡೊಂದು ಹಾಕಲಾಗಿತ್ತು. ಈ ವೇಳೆ ಕೆಲ ಅತಿಥಿಗಳು ಹಾಗೂ ಕುಟುಂಬಸ್ಥರು ಸಂತಸದ ಕ್ಷಣಕ್ಕೆ ಹೆಜ್ಜೆ ಹಾಕಿದ್ದಾರೆ. ಆದರೆ ಇದು ನಿಕಾಹ್ ನೆರವೇರಿಸಲು ಬಂದಿದ್ದ ಖಾಜಿ ಅವರ ಕಂಗೆಣ್ಣಿಗೆ ಕಾರಣವಾಗಿದೆ.
ಇದು ಇಸ್ಲಾಂ ಸಂಪ್ರದಾಯಕ್ಕೆ ವಿರೋಧವಾಗಿದೆ. ನಾನು ಈ ನಿಕಾಹ್ ವನ್ನು ನಡೆಸಿ ಕೊಡಲಾರೆ ಎಂದಿದ್ದಾರೆ. ಈ ವೇಳೆ ವರನ ತಂದೆ ಖಾಜಿ ಅವರ ಬಳಿ ಕ್ಷಮೆ ಕೇಳಿ ಇನ್ಮುಂದೆ ಈ ರೀತಿ ಮಾಡುವುದಿಲ್ಲ ಎಂದಿದ್ದಾರೆ. ಇಂತಹ ಚಟುವಟಿಕೆ ಮರುಕಳಿಸಿದರೆ 5,051 ರೂ.ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ ಬಳಿಕ ನಿಕಾಹ್ ವನ್ನು ನಡೆಸಿಕೊಟ್ಟಿದ್ದಾರೆ.
ಮೌಲಾನ ಸಿಕಂದರ್ ಅವರು “ಇಸ್ಲಾಮಿಕ್ ಹದೀಸ್ ಹೇಳಿ ಎಲ್ಲಾ ಯುವಕರು “ಅಲ್ಲಾಹನನ್ನು ಅಸಮಾಧಾನಗೊಳಿಸುವಂತಹ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯಿರಿ, ಮದುವೆಗಳು ಅಥವಾ ಇತರ ಯಾವುದೇ ಕಾರ್ಯಕ್ರಮಗಳಲ್ಲಿ ಡಿಜೆ ಸಂಗೀತವನ್ನು ನುಡಿಸಬಾರದು, ಏಕೆಂದರೆ ಇದು ಷರಿಯಾದ ತತ್ವಗಳಿಗೆ ವಿರುದ್ಧವಾಗಿದೆ” ಎಂದರು.