Advertisement

ದಕ್ಷಿಣ ಆಫ್ರಿಕಾ ಪ್ರವಾಸ ಮಿಥಾಲಿ ಭಾರತ ತಂಡದ ನಾಯಕಿ

11:37 AM Jan 11, 2018 | Team Udayavani |

ಹೊಸದಿಲ್ಲಿ: ಮುಂದಿನ ತಿಂಗಳು ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸಗೈಯುವ ಭಾರತೀಯ ವನಿತಾ ಕ್ರಿಕೆಟ್‌ ತಂಡವನ್ನು ಮಿಥಾಲಿ ರಾಜ್‌ ಮುನ್ನಡೆಸಲಿದ್ದಾರೆ.  

Advertisement

ಫೆ. 5ರಿಂದ ಆರಂಭವಾಗುವ ಈ ಸರಣಿಗೆ 16 ಸದಸ್ಯರ ತಂಡವನ್ನು ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ. ಹರ್ಮನ್‌ಪ್ರೀತ್‌ ಕೌರ್‌ ಉಪನಾಯಕಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಏಕದಿನ ಸರಣಿಯ ಬಳಿಕ ಐದು ಪಂದ್ಯಗಳ ಟ್ವೆಂಟಿ20 ಸರಣಿ ನಡೆಯಲಿದೆ. ಈ ಸರಣಿಗೆ ತಂಡವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.

ಭಾರತೀಯ ವನಿತಾ ತಂಡ: ಮಿಥಾಲಿ ರಾಜ್‌ (ನಾಯಕಿ), ಹರ್ಮನ್‌ಪ್ರೀತ್‌ ಕೌರ್‌ (ಉಪನಾಯಕಿ), ಸುಷ್ಮಾ ವರ್ಮ, ಏಕ್ತ ಬಿಷ್‌¤, ಸ್ಮತಿ ಮಂದನಾ, ಪೂನಂ ಯಾದವ್‌, ಪೂನಂ ರಾವುತ್‌, ರಾಜೇಶ್ವರಿ ಗಾಯಕ್‌ವಾಡ್‌, ಜೆಮಿಮಾ ರಾಡ್ರಿಗಸ್‌, ಜೂಲನ್‌ ಗೋಸ್ವಾಮಿ, ದೀಪ್ತಿ ಶರ್ಮ, ಶಿಖಾ ಪಾಂಡೆ, ಮೊನಾ ಮೆಶ್ರಾಮ್‌, ಪೂಜಾ ವಸ್ತ್ರಾಕರ್‌, ವೇದಾ ಕೃಷ್ಣಮೂರ್ತಿ, ತನಿತಾ ಭಾಟಿಯಾ.

Advertisement

Udayavani is now on Telegram. Click here to join our channel and stay updated with the latest news.

Next