Advertisement
ಇದು ರೌಂಡ್ ರಾಬಿನ್ ಮಾದರಿಯ ಟೂರ್ನಿಯಾಗಿದ್ದು, ಎಲ್ಲ ತಂಡಗಳು ಎಲ್ಲರ ವಿರುದ್ಧ ಆಡಲಿವೆ. ಲೀಗ್‌ನಲ್ಲಿ ಪ್ರತಿಯೊಂದು ತಂಡಕ್ಕೆ 7 ಪಂದ್ಯಗಳು ಎದುರಾಗುತ್ತವೆ. ಅಗ್ರ 4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.ಎ. 3ರ ಫೈನಲ್ ಪಂದ್ಯಕ್ಕೆ ಮೀಸಲು ದಿನವಿದೆ. ಮೀಸಲು ದಿನದಂದೂ ಪಂದ್ಯ ನಡೆಯದೇ ಹೋದರೆ ಜಂಟಿ ವಿಜೇತರೆಂದು ಘೋಷಿಸಲಾಗುವುದು.
ನ್ಯೂಜಿಲ್ಯಾಂಡ್ ಆತಿಥೇಯ ರಾಷ್ಟ್ರವಾಗಿದ್ದು, ನೇರ ಪ್ರವೇಶ ಪಡೆದಿದೆ. ಉಳಿದಂತೆ ಆಸ್ಟ್ರೇಲಿಯ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಭಾರತ 2017-2021ರ ನಡುವಿನ ವನಿತಾ ಚಾಂಪಿಯನ್‌ಶಿಪ್ ಪ್ರದರ್ಶನದ ಆಧಾರದಲ್ಲಿ ಆಯ್ಕೆಯಾಗಿವೆ. ಉಳಿದ 3 ತಂಡಗಳನ್ನು ಅರ್ಹತಾ ಪಂದ್ಯಾವಳಿ ಮೂಲಕ ಆರಿ ಸಬೇಕಿತ್ತು. ಆದರೆ ಕೋವಿಡ್‌ನಿಂದಾಗಿ ಕಳೆದ ವರ್ಷಾಂತ್ಯ ಜಿಂಬಾಬ್ವೆಯಲ್ಲಿ ನಡೆಯ ಬೇಕಿದ್ದ ಅರ್ಹತಾ ಟೂರ್ನಿ ರದ್ದುಗೊಂಡಿತು. ಹೀಗಾಗಿ ಇಲ್ಲಿ ಐಸಿಸಿ ರ್‍ಯಾಂಕಿಂಗ್ ಅನ್ನು ಮಾನದಂಡವಾಗಿ ಪರಿಗಣಿಸಲಾಯಿತು. ಪಾಕಿಸ್ಥಾನ, ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶಕ್ಕೆ ಈ ಅವಕಾಶ ಸಿಕ್ಕಿತು. ಶ್ರೀಲಂಕಾ, ಥಾಯ್ಲೆಂಡ್ ಮತ್ತು ಐರ್ಲೆಂಡ್ ಹೊರಗುಳಿಯಬೇಕಾಯಿತು. ಬಾಂಗ್ಲಾದೇಶ ವನಿತಾ ವಿಶ್ವಕಪ್‌ನಲ್ಲಿ ಆಡುತ್ತಿರುವುದು ಇದೇ ಮೊದಲು. ಸೂಪರ್ ಓವರ್ ಇಲ್ಲ!
ಲೀಗ್ ಹಂತದ ವಿಜೇತ ತಂಡಕ್ಕೆ 2 ಅಂಕ ಲಭಿಸಲಿದೆ. ಪಂದ್ಯ ಟೈ ಆದರೆ ಸೂಪರ್ ಓವರ್ ಅಳವಡಿಕೆ ಇಲ್ಲ. ಇಂಥ ಸಂದರ್ಭದಲ್ಲಿ ಒಂದೊಂದು ಅಂಕ ನೀಡಲಾಗುವುದು. ಲೀಗ್ ಹಂತದಲ್ಲಿ 2 ತಂಡಗಳ ಅಂಕ ಸಮನಾದರೆ ನೆಟ್ ರನ್‌ರೇಟ್ ಗಣನೆಗೆ ಬರಲಿದೆ. ಇಲ್ಲಿಯೂ ಸಮನಾದರೆ ಹೆಡ್-ಡು-ಹೆಡ್ ದಾಖಲೆಯನ್ನು ಪರಿಗಣಿಸಲಾಗುವುದು. ಸೆಮಿಫೈನಲ್ ಅಥವಾ ಫೈನಲ್ ಪಂದ್ಯ ಟೈ ಆದರಷ್ಟೇ ಸೂಪರ್ ಓವರ್ ಅಳವಡಿಸ ಲಾಗುವುದು. ಇದು ಕೂಡ ಸಮನಾಗುತ್ತ ಹೋದರೆ, ಸ್ಪಷ್ಟ ಫಲಿತಾಂಶ ಲಭಿಸುವ ತನಕ ಅನಿಯಮಿತ ಸೂಪರ್ ಓವರ್ ಎಸೆಯಲಾಗುವುದು!
Related Articles
ಆರಂಭಿಕ ಹಂತದ ಲೀಗ್ ಪಂದ್ಯಗಳಿಗೆ ಕೇವಲ ಶೇ. 10ರಷ್ಟು ವೀಕ್ಷಕರಿಗೆ ಅವಕಾಶ ನೀಡಲಾಗುವುದು. ಹಂತ ಹಂತವಾಗಿ ಇದರಲ್ಲಿ ಹೆಚ್ಚಳ ಕಂಡುಬಂದೀತು.
Advertisement
2 ಡಿಆರ್‌ಎಸ್ ಅವಕಾಶಸತತ 2ನೇ ವಿಶ್ವಕಪ್‌ನಲ್ಲೂ ಡಿಆರ್‌ಎಸ್ ಅಳವಡಿಕೆಯಾಗುತ್ತಿದೆ. ಈ ಬಾರಿ ತಂಡ ವೊಂದಕ್ಕೆ 2 ರೀವ್ಯೂ ನೀಡಲಾಗುವುದು. 2017ರ ವಿಶ್ವಕಪ್‌ನಲ್ಲಿ ಒಂದೇ ರೀವ್ಯೂ ಇತ್ತು. 6 ತಾಣ, 31 ಪಂದ್ಯ
ಇದು ಕೇವಲ ಒಂದೇ ತಿಂಗಳ ಕಾಲ ಸಾಗುವ ಪಂದ್ಯಾವಳಿ. ಒಟ್ಟು 6 ಸ್ಟೇಡಿಯಂಗಳಲ್ಲಿ 31 ಪಂದ್ಯಗಳನ್ನು ಆಡಲಾಗುವುದು. ಈ ತಾಣಗಳೆಂದರೆ ಆಕ್ಲೆಂಡ್, ಕ್ರೈಸ್ಟ್ ಚರ್ಚ್, ಡ್ಯುನೆಡಿನ್, ಹ್ಯಾಮಿಲ್ಟನ್,
ಮೌಂಟ್ ಮೌಂಗನುಯಿ ಮತ್ತು ವೆಲ್ಲಿಂಗ್ಟನ್. ಮಿಥಾಲಿ ಪಡೆಯನ್ನು ಬೆಂಬಲಿಸಲು ಕೊಹ್ಲಿ ಕರೆ
ವನಿತಾ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಹುರಿದುಂಬಿಸುವಂತೆ ಅಭಿಮಾನಿಗಳಿಗೆ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಕರೆ ನೀಡಿದ್ದಾರೆ. “ವುಮೆನ್ ಇನ್ ಬ್ಲೂ’ ತಂಡವನ್ನು ನಾವು ಹುರಿದುಂಬಿಸಲು ಮತ್ತು ಅವರು ತಮ್ಮ ನೀಲಿ ಬಂಧದ ಶಕ್ತಿಯನ್ನು ಪ್ರದರ್ಶಿಸಲು ಇದಕ್ಕಿಂತ ಉತ್ತಮ ಸಮಯವಿಲ್ಲ. ಏಕೆಂದರೆ ಇದು ಐಸಿಸಿ ಮಹಿಳಾ ವಿಶ್ವಕಪ್-2022ರ ಸಮಯವಾಗಿದೆ’ ಎಂದು ಕೊಹ್ಲಿ ಹೇಳಿದ್ದಾರೆ. ಮಿಥಾಲಿ: 6 ವಿಶ್ವಕಪ್ ಆಡಿದ ದಾಖಲೆ
ಭಾರತ ತಂಡದ ನಾಯಕಿ ಮಿಥಾಲಿ ರಾಜ್ 6 ವನಿತಾ ವಿಶ್ವಕಪ್‌ಗ್ಳಲ್ಲಿ ಆಡಿದ ವಿಶ್ವದ ಮೊದಲ ಆಟಗಾರ್ತಿ ಎಂಬ ವಿಶಿಷ್ಟ ದಾಖಲೆಗೆ ಪಾತ್ರರಾಗಲಿದ್ದಾರೆ. ಇದರೊಂದಿಗೆ ಅವರು ತಮ್ಮ 22 ವರ್ಷಗಳ ಸುದೀರ್ಘ ಕ್ರಿಕೆಟ್‌ಗೆ ಬದುಕಿಗೆ ವಿದಾಯ ಹೇಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಜತೆಯಲ್ಲಿ ಪ್ರಶಸ್ತಿ ಇದ್ದರೆ ಈ ವಿದಾಯ ಸ್ಮರಣೀಯವಾಗಲಿದೆ ಎಂಬುದು ಅವರ ಬಯಕೆ. “2000ದ ವಿಶ್ವಕಪ್ ನ್ಯೂಜಿಲ್ಯಾಂಡ್‌ನಲ್ಲಿ ನಡೆದಿತ್ತು. ಅಲ್ಲಿಂದ ನನ್ನ ವೃತ್ತಿಜೀವನವೂ ಆರಂಭವಾಗಿತ್ತು. ಆದರೆ ಆ ಟೂರ್ನಿಯಲ್ಲಿ ನನಗೆ ಟೈಫಾಯಿಡ್ಆಗಿದ್ದರಿಂದ ಆಡಲಾಗಲಿಲ್ಲ. ಈಗ ಮತ್ತೆ ನ್ಯೂಜಿಲ್ಯಾಂಡ್ ವಿಶ್ವಕಪ್ ಟೂರ್ನಿಯಲ್ಲಿ ಆಡಲಿದ್ದೇನೆ. ಕ್ರಿಕೆಟ್ ಜೀವನ ಒಂದು ಸುತ್ತು ಕ್ರಮಿಸಿದೆ. ಈ ಬಾರಿ ಪ್ರಶಸ್ತಿಯೊಂದಿಗೆ ನಿರ್ಗಮಿಸುವ ಆಸೆ ನನ್ನದು’ ಎಂದು ಮಿಥಾಲಿ ಐಸಿಸಿ ಸಂದರ್ಶನದಲ್ಲಿ ಹೇಳಿದ್ದಾರೆ.. “ವಿಶ್ವಕಪಕ್ ಕೂಟಕ್ಕೂ ಮುನ್ನ ನ್ಯೂಜಿಲ್ಯಾಂಡ್‌ಗೆ ಬಂದು ಸರಣಿ ಆಡಿರುವುದರಿಂದ ಮತ್ತು ಅಭ್ಯಾಸ ಪಂದ್ಯ ಗಳೆರಡರಲ್ಲೂ ಗೆಲುವು ಸಾಧಿಸಿರುವುದರಿಂದ ಆಟಗಾರ್ತಿಯರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಇದು ವಿಶ್ವಕಪ್ ನಲ್ಲಿ ಉತ್ತಮ ಸಾಧನೆ ಮಾಡಲು ಸ್ಫೂರ್ತಿಯಾಗುತ್ತದೆ’ ಎಂಬ ವಿಶ್ವಾಸ ಮಿಥಾಲಿ ಅವರದು.ಮಿಥಾಲಿ 31 ವಿಶ್ವಕಪ್ ಪಂದ್ಯಗಳಿಂದ 1,139 ರನ್ ಪೇರಿಸಿ ಸದ್ಯ 5ನೇ ಸ್ಥಾನದಲ್ಲಿದ್ದಾರೆ. ಇನ್ನು 362 ರನ್ ಬಾರಿಸಿದರೆ ಅಗ್ರಸ್ಥಾನ ಅಲಂಕರಿಸಬಹುದಾಗಿದೆ. ಹಾಗೆಯೇ ಇನ್ನು 3 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದರೆ ವಿಶ್ವಕಪ್‌ನಲ್ಲಿ ಅತ್ಯಧಿಕ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ದಾಖಲೆಯೂ ನಿರ್ಮಾಣವಾಗಲಿದೆ. ಭಾರತ-ಪಾಕ್ ಬಿಗ್ ಮ್ಯಾಚ್
ಸಹಜವಾಗಿಯೇ ಬದ್ಧ ಎದುರಾಳಿಗಳಾದ ಭಾರತ-ಪಾಕಿಸ್ಥಾನ ನಡುವಿನ ಪಂದ್ಯ ಈ ಕೂಟದ “ಬಿಗ್ ಮ್ಯಾಚ್’ ಎನಿಸಲಿದೆ. ಲೀಗ್‌ನಲ್ಲಿ ಭಾರತದ ಮೊದಲ ಎದುರಾಳಿಯೇ ಪಾಕಿಸ್ಥಾನ ಎಂಬುದನ್ನು ಗಮನಿಸಬೇಕು. ಈ ಮುಖಾಮುಖೀ ಮಾ. 6ರ ರವಿವಾರ ಮೌಂಟ್ ಮೌಂಗನುಯಿಯಲ್ಲಿ ನಡೆಯಲಿದೆ. ಅದೇ ರೀತಿ ನ್ಯೂಜಿಲ್ಯಾಂಡ್-ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್-ಇಂಗ್ಲೆಂಡ್, ಆಸ್ಟ್ರೇಲಿಯ-ಇಂಗ್ಲೆಂಡ್, ಭಾರತ-ನ್ಯೂಜಿಲ್ಯಾಂಡ್, ಭಾರತ-ಇಂಗ್ಲೆಂಡ್ ಪಂದ್ಯಗಳೂ ಕಾವೇರಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಬಹುಮಾನ ಮೊತ್ತ
ಕಳೆದ ಸಲಕ್ಕೆ ಹೋಲಿಸಿದರೆ ಬಹುಮಾನದ ಮೊತ್ತದಲ್ಲಿ ಶೇ. 75ರಷ್ಟು ಏರಿಕೆಯಾಗಿದೆ. ಅದರಂತೆ ವಿಶ್ವಕಪ್ ವಿಜೇತ ತಂಡ ಕಳೆದ ಸಲದ ಎರಡರಷ್ಟು ಮೊತ್ತ ಗಳಿಸಲಿದೆ (1.32 ಮಿ. ಡಾಲರ್). ರನ್ನರ್ ಆಪ್‌ಗೆ 600,000 ಡಾಲರ್, ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೆ 300,000 ಡಾಲರ್, ಲೀಗ್ ಹಂತದಲ್ಲೇ ಅಭಿಯಾನ ಕೊನೆಗೊಳಿಸಿದ 4 ತಂಡಗಳಿಗೆ ತಲಾ 70,000 ಡಾಲರ್ ಲಭಿಸಲಿದೆ. ಭಾರತ ತಂಡ
ಮಿಥಾಲಿ ರಾಜ್ (ನಾಯಕಿ), ಸ್ಮತಿ ಮಂಧನಾ, ಶಫಾಲಿ ವರ್ಮ, ದೀಪ್ತಿ ಶರ್ಮ, ಹರ್ಮನ್‌ಪ್ರೀತ್ ಕೌರ್ (ಉಪನಾಯಕಿ), ಯಾಸ್ತಿಕಾ ಭಾಟಿಯಾ, ರಿಚಾ ಘೋಷ್, ತನಿಯಾ ಭಾಟಿಯಾ, ಸ್ನೇಹ್ ರಾಣಾ, ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್. ತಂಡಗಳು
ನ್ಯೂಜಿಲ್ಯಾಂಡ್, ಆಸ್ಟ್ರೇಲಿಯ, ಇಂಗ್ಲೆಂಡ್,ಭಾರತ, ವೆಸ್ಟ್ ಇಂಡೀಸ್,ದಕ್ಷಿಣ ಆಫ್ರಿಕಾ, ಪಾಕಿಸ್ಥಾನ, ಬಾಂಗ್ಲಾದೇಶ.