Advertisement
ವೆಸ್ಟ್ ಇಂಡೀಸ್ ನಲ್ಲಿ ನಡೆದಿದ್ದ ಮಹಿಳಾ ವಿಶ್ವ ಟಿ-20 ಯ ಸೆಮಿ ಫೈನಲ್ ಪಂದ್ಯಕ್ಕೆ ಮಿಥಾಲಿ ರಾಜ್ ರನ್ನು ಹೊರಗಿಡಲಾಗಿತ್ತು. ಇಂಗ್ಲೆಂಡ್ ವಿರುದ್ಧದ ಮಹತ್ವದ ಪಂದ್ಯ ಸೋತ ನಂತರ ನಾಯಕಿ ಹರ್ಮನ್ ಕೌರ್ ಮತ್ತು ಕೋಚ್ ರಮೇಶ್ ಪೊವಾರ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು.
ನಂತರದ ಬೆಳವಣಿಗೆಯಲ್ಲಿ ಕೋಚ್ ಸ್ಥಾನಕ್ಕೆ ರಮೇಶ್ ಪೊವಾರ್ ಬದಲಿಗೆ ವಿವಿ ರಾಮನ್ ಕರೆ ತರಲಾಗಿತ್ತು. ಆದರೆ ಬಲಿಷ್ಠ ಕಿವೀಸ್ ವಿರುದ್ಧದ ಈ ಪಂದ್ಯಕ್ಕೆ ಮಿಥಾಲಿ ಕೈ ಬಿಟ್ಟಿರುವುದು ಅನೇಕ ಅನುಮಾನಗಳನ್ನು ಮೂಡಿಸುತ್ತಿದೆ. ಮಹಿಳಾ ಕ್ರಿಕೆಟ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತು ಮತ್ತೆ ಕೇಳಿ ಬರುತ್ತಿದೆ. ತಂಡದಲ್ಲಿ ಮಿಥಾಲಿ ಬದಲಿಗೆ ಪ್ರಿಯಾ ಪೂನಿಯಾ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. 22 ರ ಹರೆಯದ ಪ್ರಿಯಾ ಪೂನಿಯಾ ಗೆ ಇದು ಮೊದಲ ಅಂತಾರಾಷ್ಟ್ರೀಯ ಟಿ-20 ಪಂದ್ಯ.