Advertisement

ಮೈಟ್‌ – Binghamton University ಒಪ್ಪಂದ ಮರುನವೀಕರಣ

11:43 PM May 17, 2023 | Team Udayavani |

ಮಂಗಳೂರು : ಮೂಡು ಬಿದಿರೆಯ ಪ್ರತಿಷ್ಠಿತ ತಾಂತ್ರಿಕ ಮತ್ತು ಆಡಳಿತಾತ್ಮಕ ನಿರ್ವ ಹಣೆ ಯ ಮಂಗಳೂರು ಇನ್‌ಸ್ಟಿಟ್ಯೂ ಟ್‌ ಆಫ್‌ಟೆಕ್ನಾಲಜಿ ಆ್ಯಂಡ್‌ ಎಂಜಿನಿ ಯರಿಂಗ್‌ (ಮೈಟ್‌) ಸಂಸ್ಥೆಯು ಅಮೆರಿಕದ ನ್ಯೂಯಾರ್ಕ್‌ ರಾಜ್ಯ ವಿ.ವಿ.ಯಾದ ಬಿಂಗ್ ಹ್ಯಾಮ್ಟನ್ ವಿ.ವಿ.ಯೊಂದಿಗಿನ ಒಪ್ಪಂದ  ವನ್ನು ಮತ್ತೆ 5 ವರ್ಷಗಳ ಅವಧಿಗೆ ನವೀಕರಿಸಿದೆ.

Advertisement

ಅಮೆರಿಕದಲ್ಲಿ ಆರ್‌1 – ಅತಿ ಹೆಚ್ಚಿನ ಸಂಶೋಧನ ಚಟುವಟಿಕೆ ಎಂದು ಗುರುತಿಸಲ್ಪಟ್ಟಿರುವ ಬಿಂಗ್ ಹ್ಯಾಮ್ಟನ್ ವಿ.ವಿ.ಯೊಂದಿಗಿನ ಈ ಒಡಂ ಬಡಿಕೆ ಎರಡು ಸಂಸ್ಥೆಗಳ ನಡುವಿನ ಪಾಲು ದಾರಿಕೆಯನ್ನು ಮತ್ತಷ್ಟು ಬಲ ಪಡಿಸುವುದು. ಎರಡೂ ಸಂಸ್ಥೆಗಳೂ ಮೇ 2016ರಲ್ಲಿ ಒಪ್ಪಂದ ಮಾಡಿ ಕೊಂಡಿದ್ದು ಇದರಡಿಯಲ್ಲಿ ಅಧ್ಯಾಪಕರ ವಿನಿಮಯ ಮತ್ತು ವಿದ್ಯಾರ್ಥಿ ವಿನಿಮಯ ಕಾರ್ಯ ಕ್ರಮಗಳೊಂದಿಗೆ ಸುಧಾರಿತ ತಂತ್ರ ಜ್ಞಾನಗಳ ಕಾರ್ಯಾಗಾರಗಳು, ಲೀನ್‌ ಸಿಕ್ಸ್‌ ಸಿಗ್ಮಾ ಹಳದಿ ಮತ್ತು ಹಸಿರು ಬೆಲ್ಟ್ ಪ್ರಮಾಣೀಕರಣ, ಸಹಯೋಗದ ಅಂತಾರಾಷ್ಟ್ರೀಯ ಸಮ್ಮೇಳನ, ಜಂಟಿ ಸಂಶೋಧನ ಕಾರ್ಯಕ್ರಮ ನಡೆಸಲಾಗಿದೆ.

ಪಾಲುದಾರಿಕೆಯ ದಾಖಲೆಗಳ ವಿನಿ ಮಯ ಸಮಾರಂಭವು ಬಿಂಗ್ ಹ್ಯಾಮ್ಟನ್ ವಿ.ವಿ. ಕ್ಯಾಂಪಸ್‌ನಲ್ಲಿ ಮೈಟ್‌ನ ಅಧ್ಯಕ್ಷ ರಾಜೇಶ್‌ ಚೌಟ, ಬಿಂಗ್ ಹ್ಯಾಮ್ಟನ್ ವಿ.ವಿ. ಅಧ್ಯಕ್ಷ ಹಾರ್ವೆ ಸ್ಟೆಂಗರ್‌ ಮತ್ತು ಶೈಕ್ಷಣಿಕ ವ್ಯವಹಾರಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡೊನಾಲ್ಡ್‌ ಇ ಹಾಲ್‌ ಅವರ ಸಮ್ಮುಖದಲ್ಲಿ ನಡೆಯಿತು.

ಒಪ್ಪಂದವು 2 ಸಂಸ್ಥೆಗಳ ನಡುವೆ ಶೈಕ್ಷಣಿಕ ಮತ್ತು ಸಂಶೋ ಧನ ಸಹಯೋಗವನ್ನು ಬೆಳೆಸುವ ಗುರಿಯನ್ನು ಹೊಂದಿದೆ. ವಿದ್ಯಾರ್ಥಿ ಗಳು ಮತ್ತು ಅಧ್ಯಾಪಕರು ಜಂಟಿ ಸಂಶೋಧನ ಯೋಜನೆಗಳು, ಶೈಕ್ಷಣಿಕ ವಿನಿಮಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬಹುದು.

ಬಿಂಗ್ ಹ್ಯಾಮ್ಟನ್ ವಿ.ವಿ.ಯು ಒಪ್ಪಂದವನ್ನು ನವೀಕರಿಸಲು ಹರ್ಷಿತ ರಾಗಿದ್ದೇವೆ, ಈ ಪಾಲುದಾರಿಕೆ ಯು ನಮ್ಮ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕ ಸದಸ್ಯರಿಗೆ ಅನುಕೂಲವಾಗುವ ಅಂತಾರಾಷ್ಟ್ರೀಯ ಸಹಯೋಗಗಳನ್ನು ಬೆಳೆಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಮೈಟ್‌ ಅಧ್ಯಕ್ಷ ರಾಜೇಶ್‌ ಚೌಟ ಹೇಳಿದರು.

Advertisement

ಭಾರತದಲ್ಲಿ ಮೈಟ್‌ನೊಂದಿಗೆ ಒಪ್ಪಂದವನ್ನು ನವೀಕರಿಸಲು ನಾವು ರೋಮಾಂಚನಗೊಂಡಿದ್ದೇವೆ, ಈ ಪಾಲುದಾರಿಕೆಯು ನಮ್ಮ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಿಬಂದಿಗಳ ನಡುವಿನ ಶೈಕ್ಷಣಿಕ ಮತ್ತು ವೈಜ್ಞಾನಿಕ ವಿನಿಮಯಕ್ಕಾಗಿ ದೃಢತೆಯನ್ನು ಬಲಪಡಿಸುತ್ತದೆ ಎಂದು ಬಿಂಗ್ ಹ್ಯಾಮ್ಟನ್ ವಿ.ವಿ. ಅಧ್ಯಕ್ಷ ಹಾರ್ವೆ ಸ್ಟೆಂಗರ್‌ ಹೇಳಿದರು.

ಬಿಂಗ್ ಹ್ಯಾಮ್ಟನ್ ವಿ.ವಿ.ಯು ಅಮೆರಿಕದ ಉನ್ನತ ಸಾರ್ವಜನಿಕ ಸಂಶೋಧನ ವಿ.ವಿ.ಗಳಲ್ಲೊಂದು, ಅದರ ಪ್ರತಿಭೆ, ಸೌಲಭ್ಯಗಳು, ಪಾಲುದಾರಿಕೆಗಳು ಮತ್ತು ಸಂಶೋಧನ ಅವಕಾಶಗಳಿಗಾಗಿ ಅಮೆರಿಕದಲ್ಲಿ ಪ್ರತಿಷ್ಠಿತ ಸಂಶೋಧನ ವಿ.ವಿ.ಯಾಗಿ ಸ್ಥಾನ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next