ಬೆಂಗಳೂರು: ಪಾಲಿಕೆಯಿಂದ ವಿವಿಧ ಸಂಘ- ಸಂಸ್ಥೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಗೆ ಭೋಗ್ಯಕ್ಕೆ ನೀಡುರುವ ಆಸ್ತಿ ಗಳ ದುರ್ಬಳಕೆ ತಪ್ಪಿಸಲು ಪಾಲಿಕೆ ಕಠಿಣ ಕಾನೂನು ಕ್ರಮ ಜರುಗಿಸಲು ಮುಂದಾಗಿದೆ.
ಪಾಲಿಕೆಯ ಒಟ್ಟು 324 ಆಸ್ತಿಗಳಲ್ಲಿ 235 ವಾಣಿಜ್ಯ ಉದ್ದೇ ಶದ ಸ್ವತ್ತು ಗಳು, ಶೈಕ್ಷ ಣಿಕ 24, ಸರ್ಕಾರಿ 43 ಹಾಗೂ 22 ಆಸ್ತಿಗಳನ್ನು ಧಾರ್ಮಿಕ ಉದ್ದೇಶಕ್ಕಾಗಿ ಗುತ್ತಿಗೆ ನೀಡಲಾಗಿದೆ. ಆದರೆ, ಪಾಲಿಕೆಯಿಂದ ಭೋಗ್ಯಕ್ಕೆ ಪಡೆದ ಶೇ.80ಕ್ಕೂ ಜನ ನಿಯಮ ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಪಾಲಿಕೆ ಈ ರೀತಿ ನಿಯಮ ಉಲ್ಲಂಘನೆ ಮಾಡಿರುವವರ ಸರ್ವೇ ಮಾಡಲು ಯೋಜನೆ ರೂಪಿಸಿಕೊಳ್ಳುತ್ತಿದೆ. ಇದೇ ವೇಳೆ ಸಮಾಜ ಸೇವೆ ಹೆಸರಲ್ಲಿ ಪಾಲಿಕೆಯಿಂದ
ಭೋಗ್ಯಕ್ಕೆ ಪಡೆದು ನಿರ್ದಿಷ್ಟ ಆಸ್ತಿಯನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಿರುವ ವರ ಬಗ್ಗೆ ಈಗಾಗಲೇ ಮಾಹಿತಿ ಕಲೆ ಹಾಕಲಾಗಿದ್ದು, ಇವರ ಮೇಲೆ “ಭೋಗ್ಯ ನಿಯಮ ಉಲ್ಲಂಘನೆ’ ಅಡಿ ಪ್ರಕ ರಣ ದಾಖಲಿ ಸಲು ಪಾಲಿಕೆಯ ಆಸ್ತಿ ವಿಭಾಗದ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ವಾಣಿಜ್ಯ, ಶಿಕ್ಷಣ, ಸರ್ಕಾರಿ ಹಾಗೂ ಧಾರ್ಮಿಕ ಉದ್ದೇ ಶ ಎಂದು ನಾಲ್ಕು ಪ್ರಮುಖ ವಿಂಗ ಡ ಗಳ ಆಧಾರದ ಮೇಲೆ ಪಾಲಿ ಕೆಯ ಆಸ್ತಿ ಗ ಳನ್ನು ಭೋಗ್ಯಕ್ಕೆ ನೀಡಲಾಗಿದೆ. ಆದರೆ, ಕೆಲ ವರು ಭೋಗ್ಯಕ್ಕೆ ಪಡೆದ ಆಸ್ತಿಗಳನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಿ ರುವುದು ಕಂಡು ಬಂದಿದೆ. ಅಷ್ಟೇ ಅಲ್ಲ, ಪಾಲಿ ಕೆ ಯಿಂದ ಭೋಗ್ಯಕ್ಕೆ ಪಡೆದ ನಿರ್ದಿಷ್ಟ ಜಾಗದ ಸುತ್ತ ಮುತ್ತಲಿನ ಪ್ರದೇಶವನ್ನೂ ಬಳಸಿಕೊ ಳ್ಳುತ್ತಿರುವುದು ಹಾಗೂ ಪಾಲಿಕೆಯ ಆಸ್ತಿಯ ಆಧಾರದ ಮೇಲೆ ಸಾಲ ಪಡೆದಿರುವಂತಹ ಗಂಭೀರ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಎಲ್ಲ ಕಾರಣ ಗಳಿಂದ ಕಠಿಣ ಕಾನೂನು ಕ್ರಮಕ್ಕೆ ಪಾಲಿಕೆ ಮೊರೆ ಹೋಗಿದೆ.
ಜಂಟಿ ಆಯುಕ್ತರ ಮಟ್ಟದಲ್ಲಿ ಪ್ರ ರಣ ಬಾಕಿ: ಪಾಲಿಕೆಯ ಆಸ್ತಿಗಳನ್ನು ಅನ್ಯ ಬಳಕೆಗೆ ಬಳಸಿಕೊಂಡಿರುವುದು, ನಿಯಮ ಉಲ್ಲಂಘನೆ ಮಾಡಿರುವುದು,ಭೋಗ್ಯದ ಅವಧಿ ಮುಗಿ ದರೂ ಪಾಲಿಕೆ ಹಿಂದಿರುಗಿಸದೆ ಇರು ವುದು ಹಾಗೂ ಅವಧಿ ಮುಗಿದ ಮೇಲೆ ಪಾಲಿಕೆಗೆ ಹಿಂದಿರು ಗಿ ಸದೆ ಇರುವ ಪ್ರಕರಣಗಳ ತನಿಖೆ ಪಾಲಿಕೆಯ ಜಂಟಿ ಆಯುಕ್ತರ ಮಟ್ಟದಲ್ಲಿ ಬಾಕಿ ಉಳಿದಿದೆ. ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ಈ ರೀತಿ 29 ಪ್ರಕ ರ ಣ ಗಳು ಬಾಕಿ ಉಳಿದಿರುವುದು ವರದಿ ಆಗಿದೆ. ಇದರಿಂದಲೂ ಪಾಲಿಕೆಯ ಆಸ್ತಿಗಳ ಸಂರಕ್ಷಣೆ ಹಾಗೂ ಆರ್ಥಿಕವಾಗಿ ಬಿಬಿಎಂಪಿಗೆ ಹಿನ್ನಡೆ ಉಂಟಾಗುತ್ತಿದೆ. ಜಂಟಿ ಆಯು ಕ್ತ ರಿಗೆ ಕೊರೊನಾ ಸೋಂಕು ನಿಯಂತ್ರಣ ಸೇರಿ ದಂತೆ ವಿವಿಧ ಹೆಚ್ಚು ವರಿ ಕೆಲಸಗಳನ್ನು ನೀಡಿರುವುದರಿಂದ ಈ ನಿರ್ದಿ ಷ್ಟ ವಿಚಾರದಲ್ಲಿ ಹಿನ್ನಡೆ ಆಗಿದೆ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ಯಾವ ರೀತಿ ಜಂಟಿ ಆಯುಕ್ತರ ಸಹಭಾಗಿತ್ವ ತೆಗೆದು ಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ.
ಕೆಪಿಪಿ ಕಾಯ್ದೆ ಅಡಿ ನೋಟಿಸ್ ಜಾರಿ: ಪಾಲಿ ಕೆಯ 235 ಆಸ್ತಿಗಳನ್ನು ವಾಣಿಜ್ಯ ಉದ್ದೇಶಕ್ಕೆ ನೀಡಲಾಗಿದ್ದು, 119 ಆಸ್ತಿಗಳ ಗುತ್ತಿಗೆ ಅವಧಿ ಚಾಲ್ತಿಯಲ್ಲಿದೆ. ಇನ್ನು 116 ಆಸ್ತಿಗಳ ಗುತ್ತಿಗೆ ಅವಧಿ ಮುಕ್ತಾಯವಾಗಿದ್ದು ಎಲ್ಲ ಆಸ್ತಿಗಳನ್ನು ಭೋಗ್ಯ ಕ್ಕೆ ಪಡೆದವರಿಗೆ ಪಾಲಿಕೆ “ಕರ್ನಾಟಕ ಸಾರ್ವಜನಿಕ ಸ್ಥಳಗಳ (ಅನಧಿಕೃತ ಒತ್ತುವರಿದಾರರ ತೆರ ವು)-1974 ಕಾಯ್ದೆ ಅಡಿ ನೋಟಿಸ್ ಜಾರಿ ಮಾಡಿದೆ. 27 ಆಸ್ತಿಗಳನ್ನು ಪಾಲಿಕೆ ವಶಕ್ಕೆ ಪಡೆದು ಕೊಂಡಿದ್ದು, 12 ಆಸ್ತಿ ಗಳ ನವೀಕರಣ ಪ್ರಕ್ರಿಯೆ ಆಗಿದೆ ಎಂದು ಪಾಲಿಕೆಯ ಆಸ್ತಿ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾರುಕಟ್ಟೆ ಮೌಲ್ಯಕ್ಕೆ ಭೋಗ್ಯಕ್ಕೆ: ಪಾಲಿಕೆಯ ಒಟ್ಟು 324 ಆಸ್ತಿಗಳ ಒಟ್ಟು ಮೌಲ್ಯ 4,554.64 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಆದರೆ, ಈಗ ಇರುವ ಮಾರುಕಟ್ಟೆ ಮೌಲ್ಯ ಅಜಗಜಾಂತರ ಇದೆ. ಅಲ್ಲದೆ, ಈ ಹಿಂದೆ ಅತೀ ಕಡಿಮೆ ದರಕ್ಕೆ ಭೋಗ್ಯ ಕ್ಕೆ ಹಲವು ವರ್ಷಗಳ ಮಟ್ಟಿಗೆ ನೀಡ ಲಾ ಗಿದ್ದು, ಈ ರೀತಿಯ ಅವೈ ಜ್ಞಾ ನಿಕಕ್ರಮ ದಿಂದಾಗಿ ಪಾಲಿಕೆಗೆ ಕೋಟ್ಯಾಂತರ ರೂ. ಆದಾಯ ನಷ್ಟ ವಾಗುತ್ತಿದ್ದು, ಆದಾಯ ಮೂಲವೂ ಕೈತ ಪ್ಪುತ್ತಿದೆ. ಹೀಗಾಗಿ, ಅವಧಿ ಮುಗಿದಿರುವ ಭೋಗ್ಯ ಆಸ್ತಿಗಳನ್ನು ನವೀಕರ ಣ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾರುಕಟ್ಟೆ ಮೌಲ್ಯಕ್ಕೆ ನಿಗದಿ ಮಾಡಲು ಪಾಲಿ ಕೆಯ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಈ ನಿಟ್ಟಿನಲ್ಲಿ ಭೋಗ್ಯದ ಮೊತ್ತ ನಿಗದಿ ಮಾಡಲು ಚರ್ಚಿಸಲಾಗಿದೆ.
-ಹಿತೇಶ್ ವೈ