Advertisement

ಮಾಳವಿಕಾ ಅವಿನಾಶ್‌ರ ಆಧಾರ್‌ ದುರ್ಬಳಕೆ

11:20 PM Nov 03, 2023 | Team Udayavani |

ಬೆಂಗಳೂರು: ನಟಿ ಹಾಗೂ ರಾಜ್ಯ ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್‌ ಅವರ ಆಧಾರ್‌ ಕಾರ್ಡ್‌ ದುರ್ಬಳಕೆಯಾಗಿದೆ. ಈ ವಿಷಯವನ್ನು ಸ್ವತಃ ಮಾಳವಿಕಾ ಅವರೇ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

Advertisement

ಸೈಬರ್‌ ಕ್ರೈಂ ಪ್ರಕರಣಕ್ಕೆ ಸಂಬಂಧಿಸಿ ಮುಂಬಯಿ ಪೊಲೀಸ್‌ ಅಧಿಕಾರಿಗಳು ಮಾಳವಿಕಾರಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಬಳಿಕ ನಿಮ್ಮಿಂದ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆ. ಸೈಬರ್‌ ಅಪರಾಧದಡಿ ನಿಮ್ಮನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ತಿಳಿಸಿದ್ದಾರೆ.

ಮಾಳವಿಕಾರ ಆಧಾರ್‌ ಕಾರ್ಡ್‌ ಬಳಸಿ ಸೈಬರ್‌ ವಂಚಕರು ಸಿಮ್‌ ಖರೀದಿಸಿದ್ದಾರೆ. ಈ ವಂಚಕರು ಆ ನಂಬರ್‌ನಿಂದ ಮುಂಬಯಿಯಲ್ಲಿ ಕೆಲವರಿಗೆ ಸಂದೇಶಗಳನ್ನು ಕಳುಹಿಸುತ್ತಿದ್ದ ಬಗ್ಗೆ ಮುಂಬಯಿ ಪೊಲೀಸರಿಗೆ ದೂರು ಸಲ್ಲಿಕೆಯಾಗಿತ್ತು. ತನಿಖೆ ಆರಂಭಿಸಿದ ಮುಂಬಯಿ ಪೊಲೀಸರು ಆ ನಂಬರ್‌ ಆಧಾರದಲ್ಲಿ ಆಧಾರ್‌ ಕಾರ್ಡ್‌ ಮಾಹಿತಿಯನ್ನು ಪತ್ತೆ ಹಚ್ಚಿ ಮಾಳವಿಕಾರಿಗೆ ದೂರವಾಣಿ ಕರೆ ಮಾಡಿ ವಿಚಾರಣೆ ನಡೆಸಿದ್ದಾರೆ.

ಬಳಿಕ ಅಧಿಕಾರಿಗಳಿಗೆ ಮಾಳವಿಕಾ ತಮ್ಮ ಬಗ್ಗೆ ವಿವರಿಸಿ ವೀಡಿಯೋ ಕಾಲ್‌ ಮಾಡಿದಾಗ, ಪೊಲೀಸರು “ನೀವು ಕೆಜಿಎಫ್ನಲ್ಲಿ ನಟಿಸಿದವರಲ್ಲವೇ?’ ಎಂದು ಗುರುತು ಹಿಡಿದಿದ್ದಾರೆ. ಅನಂತರ ಆಧಾರ್‌ ಕಾರ್ಡ್‌ ದುರ್ಬಳಕೆ ಆಗಿರುವ ಬಗ್ಗೆ ದೂರು ದಾಖಲಿಸುವಂತೆ ಮಾಳವಿಕಾರಿಗೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next