Advertisement

ಮತದಾರರ ಪಟ್ಟಿಯಲ್ಲಿ ಲೋಪ; ಆಕ್ರೋಶ

04:11 PM Oct 21, 2020 | Suhan S |

ಹಾಸನ: ನಗರದ ಸಂಜೀವಿನಿ ಸಹಕಾರ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ, ಗ್ರಾಹಕರ ಸಹಕಾರ ಮತ್ತು ಸಗಟು ಮಾರಾಟ ಸಂಸ್ಥೆ ( ಜನತಾ ಬಜಾರ್‌)ಯಮತದಾರರ ಪಟ್ಟಿಯಿಂದ ಅರ್ಹರನ್ನುಕೈ ಬಿಡಲಾಗಿದೆ ಎಂದು ಆರೋಪಿಸಿ ಜೆಡಿಎಸ್‌ ಕಾರ್ಯಕರ್ತರು ನಗರದ ಕುವೆಂಪು ನಗರದಲ್ಲಿರುವ ಸಹಕಾರಸಂಘಗಳ ಉಪ ನಿಬಂಧಕರ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ಈ ಎರಡೂ ಸಂಸ್ಥೆಗಳ ಆಡಳಿತ ಮಂಡಳಿಗೆಚುನಾವಣೆ ನಿಗದಿಯಾಗಿದೆ. ಆದರೆ, ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಾಗ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿ ವಿ.ಸುನೀಲ್‌ ಅರ್ಹ ಮತದಾರರನ್ನು ಪಟ್ಟಿಯಿಂದ ಕೈ ಬಿಟ್ಟಿದ್ದಾರೆ. ಸಂಜೀವಿನಿ ಸಹಕಾರ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಜನತಾ ಬಜಾರ್‌ ನ ಆಡಳಿತ ಮಂಡಳಿಯ ಆಡಳಿತಾಧಿಕಾರಿಯೂಆಗಿರುವ ವಿ.ಸುನೀಲ್‌ ಉದ್ದೇಶಪೂರ್ವಕವಾಗಿಯೇ ಅರ್ಹ ಮತದಾರರನ್ನು ಪಟ್ಟಿಯಿಂದ ಕೈ ಬಿಟ್ಟಿದ್ದು, ಕಾಣದ ಕೈಗಳ ತಾಳಕ್ಕೆ ಅವರು ಕುಣಿಯುತ್ತಾ, ಅರ್ಹ ಮತದಾರರಿಗೆ ಅನ್ಯಾಯ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ತರಾತುರಿಯಲ್ಲಿ ಪಟ್ಟಿ ಸಿದ್ಧತೆ: ಒಂದು ಪಕ್ಷದ ಏಜೆಂಟರಂತೆ ಕೆಲಸ ಮಾಡುತ್ತಿರುವ ವಿ.ಸುನೀಲ್‌ ಅವರು, ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ ಜಂಟಿ ನಿಬಂಧಕರಕಚೇರಿಗೆ ಸಲ್ಲಿಸುವಾಗ ಅಕ್ರಮ ಎಸಗಿದ್ದಾರೆ. ಸಹಕಾರ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಚುನಾವಣೆ ನಡೆಸಲು ನ.ಅಂತ್ಯದವರೆಗೂ ಕಾಲಾವಕಾಶವಿದೆ. ಆದರೂ, ಸಂಜೀವಿನಿ ಸಹಕಾರ ಆಸ್ಪತ್ರೆಯ ಮತದಾರರ ಪಟ್ಟಿಯನ್ನು ತರಾತುರಿಯಲ್ಲಿ ಸಿದ್ಧಪಡಿಸಿ ನ.7ರಂದು ಚುನಾವಣೆ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಹುದ್ದೆಯಿಂದ ಕಿತ್ತು ಹಾಕಿ: ಅರ್ಹ ಮತದಾರರನ್ನು ಪಟ್ಟಿಯಿಂದಕೈ ಬಿಟ್ಟು ನಕಲಿ ಮತದಾರರ ಪಟ್ಟಿಯನ್ನುಸಿದ್ಧಪಡಿಸುವುದರಲ್ಲಿ ಅವರು ನಿಸ್ಸೀಮರು. ಅವರನ್ನುತಕ್ಷಣವೇ ಸಂಜೀವಿನಿ ಸಹಕಾರ ಆಸ್ಪತ್ರೆ ಹಾಗೂಜನತಾ ಬಜಾರ್‌ನ ಆಡಳಿತಾಧಿಕಾರಿ ಹುದ್ದೆಯಿಂದ ಕಿತ್ತು ಹಾಕಿ ಅಮಾನತುಗೊಳಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಹಾಸನದ ಎರಡು ಸಹಕಾರಿ ಸಂಸ್ಥೆಗಳ ಆಡಳಿತಾಧಿಕಾರಿ, ಸಕಲೇಶಪುರದ ಸಹಕಾರ ಸಂಘಗಳ ಸಹಾಯಕ ನಿಬಂಧಕ, ಸಹಕಾರ ಅಭಿವೃದ್ಧಿ ಅಧಿಕಾರಿಹೀಗೆ ಹಲವು ಹುದ್ದೆಗಳಲ್ಲಿ ಪ್ರಭಾರಿಯಾಗಿ ಕೆಲಸಮಾಡುತ್ತಿರುವ ಸುನೀಲ್‌, ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ ಬ್ಯಾಂಕ್‌) ಆಡಳಿತಮಂಡಳಿಯ ಚುನಾವಣಾಧಿಕಾರಿಯಾಗಿ ಅಕ್ರಮ ಎಸಗಿದ್ದಾರೆ ಎಂದೂ ಪ್ರತಿಭಟನಾಕಾರರು ದೂರಿದರು.

Advertisement

ಬಡ ಜನರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದಿಂದ ವೈದ್ಯರಾಗಿದ್ದ ಡಾ.ಎ.ಸಿ.ಮುನಿವೆಂಕಟೇಗೌಡ, ಡಾ.ಗುರುರಾಜು ಹೆಬ್ಟಾರ್‌ ಶಾಸಕರಾಗಿದ್ದ ಎಚ್‌.ಎಸ್‌.ಪ್ರಕಾಶ್‌,ಬಿ.ವಿ.ಕರೀಗೌಡ ಮತ್ತಿತರರು ಹಾಸನದಲ್ಲಿ ಸಂಜೀವಿನಿ ಸಹಕಾರ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯನ್ನು 34 ವರ್ಷಗಳ ಹಿಂದೆ ಸ್ಥಾಪನೆ ಮಾಡಿದ್ದರು. ಈಗಸಂಸ್ಥೆಯು ಸದೃಢವಾಗಿ ಬೆಳೆದಿದೆ. ಈಗ ಸಂಸ್ಥೆಯನ್ನು ಹಾಳು ಮಾಡುವುದಕ್ಕೆ ಕೆಲ ಶಕ್ತಿಗಳು ಮುಂದಾಗಿವೆ.

ಅದಕ್ಕೆ ಸುನೀಲ್‌ನಂತಹ ಅಧಿಕಾರಿಗಳು ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿದರು.  ಹಾಗೂ ವಿ.ಸುನೀಲ್‌ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಜಿಪಂ ಉಪಾಧ್ಯಕ್ಷ ಎಚ್‌.ಪಿ.ಸ್ವರೂಪ್‌, ಹಾಸನತಾಲೂಕು ಜೆಡಿಎಸ್‌ ಅಧ್ಯಕ್ಷ ಎಸ್‌.ದ್ಯಾವೇಗೌಡ ಅವರು ಮಾತನಾಡಿದರು. ಡಿಸಿಸಿ ಬ್ಯಾಂಕ್‌ ಅಧ್ಯಕ್ಸೋಮನಹಳ್ಳಿ ನಾಗರಾಜು, ನಿರ್ದೇಶಕರಾದ ಎಚ್‌ .ಸಿ.ಗಿರೀಶ್‌,ಬಿದರಿಕೆರೆ ಜಯರಾಂ,ಹಾಸನ ಎಪಿಎಂಸಿ ಅಧ್ಯಕ್ಷಕೆ.ಎಸ್‌.ಮಂಜೇಗೌಡ, ಹಾಸನ ತಾಪಂ ಮಾಜಿ ಅಧ್ಯಕ್ಷ ನಿಂಗೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್‌.ಶಂಕರ್‌, ಮಾಜಿ ಉಪಾಧ್ಯಕ್ಷ ಇರ್ಷಾದ್‌ಪಾಷಾ, ಸದಸ್ಯರಾದ ಸಮೀರ್‌ ಅಹಮದ್‌, ಚಂದ್ರೇ ಗೌಡ, ಮಂಜುನಾಥ್‌, ವಾಸುದೇವ್‌ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

ಪ್ರತಿಭಟನಾಕಾರರ ಮನವಿ ಜಂಟಿ ನಿರ್ದೇಶಕರಿಗೆ ರವಾನೆ : ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಸಹಕಾರ ಸಂಘಗಳ ಉಪ ನಿಬಂಧಕ ದಯಾನಂದ್‌, ಸುನೀಲ್‌ಅವರು ಹೊರ ಜಿಲ್ಲೆ ಸೇರಿ ಏಳು ಹುದ್ದೆಗಳಲ್ಲಿ ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ನಾನುಕ್ರಮಕೈಗೊಳ್ಳಲು ಸಾಧ್ಯವಾಗುವುದಿಲ್ಲ. ನಿಮ್ಮ ಅಹವಾಲನ್ನು ಮೈಸೂರಿನಲ್ಲಿರುವ ಸಹಕಾರ ಸಂಘಗಳ ಜಂಟಿ ನಿರ್ದೇಶಕರಿಗೆ ರವಾನಿಸುವುದಾಗಿ ಪ್ರತಿಭಟನಾಕಾರರಿಗೆ ಪ್ರತಿಕ್ರಿಯಿಸಿದರು. ಆದರೂ ಪ್ರತಿಭಟನಾಕಾರರು ಕಚೇರಿ ಬಳಿ ಧರಣಿ ಮುಂದುವರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next