Advertisement

ಮಿಶನ್ ಇಂಪಾಸಿಬಲ್: ಪ್ಲೇ ಆಫ್ ಪ್ರವೇಶಕ್ಕೆ ರೋಹಿತ್ ಪಡೆಗೆ ಇರುವುದೊಂದೇ ದಾರಿ

10:12 AM Oct 08, 2021 | Team Udayavani |

ದುಬೈ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಯ ಹಂತ ತಲುಪಿದೆ. ಇಂದು ಲೀಗ್ ಹಂತದ ಕೊನೆಯ ದಿನ. ಇಂದು (ಅ.08) ಎರಡು ಪಂದ್ಯಗಳು ನಡೆಯಲಿದ್ದು, ವಿಶೇಷವೆಂದರೆ ಎರಡೂ ಪಂದ್ಯಗಳು ಏಕಕಾಲಕ್ಕೆ ನಡೆಯಲಿದೆ.

Advertisement

ಗುರುವಾರದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬಳಿಕ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ದಾರಿ ದುರ್ಗಮವಾಗಿದೆ. ಇಂದು ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಪವಾಡ ರೂಪದಲ್ಲಿ ಗೆದ್ದರಷ್ಟೇ ಮುಂಬೈಗೆ ಮುಂದಿನ ದಾರಿ ತೆರೆಯಲಿದೆ.

ದಾರಿ ಏನು?

ರೋಹಿತ್ ಪಡೆ ಪ್ಲೇ ಆಫ್ ಗೆ ತೇರ್ಗಡೆಯಾಗಬೇಕಾದರೆ ಮೊದಲು ಇಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆಲ್ಲಬೇಕು. ಇಲ್ಲವೇ ಟಾಸ್ ಗೆದ್ದ ಹೈದರಾಬಾದ್ ತಂಡ ರೋಹಿತ್ ಪಡೆಗೆ ಬ್ಯಾಟಿಂಗ್ ಗೆ ಆಹ್ವಾನಿಸಬೇಕು. ಒಂದು ವೇಳೆ ಹೈದರಾಬಾದ್ ಬ್ಯಾಟಿಂಗ್ ಅಯ್ಕೆ ಮಾಡಿದರೆ ಮುಂಬೈ ಕನಸು ಆಗಲೇ ನುಚ್ಚು ನೂರಾಗುತ್ತದೆ.

ಇದನ್ನೂ ಓದಿ:ಬಾನಂಗಳದಲ್ಲಿ ಬಲಶಾಲಿ ಭಾರತದ ವಾಯುಪಡೆ

Advertisement

ಮೊದಲು ಬ್ಯಾಟಿಂಗ್ ಮಾಡಿ ರೋಹಿತ್ ಪಡೆ ಭಾರೀ ಮೊತ್ತ ಕಲೆ ಹಾಕಬೇಕು. ನಂತರ ಹೈದರಾಬಾದ್ ವಿರುದ್ಧ 171 ರನ್ ಗಳ ಅಂತರದಲ್ಲಿ ಗೆಲುವು ಸಾಧಿಸಬೇಕು. ಕಡಿಮೆ ಮೊತ್ತದ ಪಂದ್ಯಗಳಿಗೆ ಸಾಕ್ಷಿಯಾದ ಶಾರ್ಜಾದಲ್ಲಿ ಈ ಪಂದ್ಯ ನಡೆಯುವ ಕಾರಣ ಇದು ಬಹುತೇಕ ಅಸಾಧ್ಯವಾಗಿದೆ.

ಪ್ಲೇ ಆಫ್ ಗೆ ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರವೇಶಿಸಿದೆ. ಇದು ಪವಾಡ ನಡೆಯದೇ ಇದ್ದರೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ರವೇಶ ಪಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next