Advertisement
ಕೊರಟಗೆರೆ ಪಟ್ಟಣದ ಪಟ್ಟಣ ಪಂಚಾಯಿತಿ ಕಾರ್ಯಯಲದಲ್ಲಿ ತುಮಕೂರು ಜಿಲ್ಲಾಡಳಿತ ಮತ್ತು ಕೊರಟಗೆರೆ ತಾಲೂಕು ಆಡಳಿತದ ವತಿಯಿಂದ ಗೃಹಸಚಿವ ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಬರ ಪರಿಸ್ಥಿತಿ ಮತ್ತು ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
Related Articles
Advertisement
ರಾಜ್ಯ ಸರಕಾರ ತುಮಕೂರು ಜಿಲ್ಲೆಯ 10 ತಾಲೂಕನ್ನು ಬರಪೀಡಿತ ಎಂದು ಈಗಾಗಲೇ ಘೋಷಣೆ ಮಾಡಿವೆ. ಬರಗಾಲದ ತುರ್ತು ಕೆಲಸ ಮತ್ತು ನಿರ್ವಹಣೆಯ ಬಗ್ಗೆ ತುಮಕೂರು ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. 2023 ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಜನತೆಯೇ ಬಿಜೆಪಿ ನಾಯಕರಿಗೆ ತಕ್ಕ ಉತ್ತರ ನೀಡಿದ್ದಾರೆ ಅಲ್ಲವೇ. ಕಿಯೋನಿಕ್ಸ್ ವಿಚಾರ ಸೇರಿದಂತೆ ಎಲ್ಲಾ ತನಿಖೆಯನ್ನ ನಮ್ಮ ಸರಕಾರ ಮಾಡಿಸುತ್ತದೆ ಎಂದು ಹೇಳಿದರು.
ಜನಪರ ಆಡಳಿತ ನೀಡುವುದೇ ನಮ್ಮ ಸರಕಾರದ ಮುಖ್ಯ ಉದ್ದೇಶ. 5 ಗ್ಯಾರಂಟಿ ಜನಪರ ಕಾರ್ಯಕ್ರಮ ಅನುಷ್ಟಾನ ಆಗುತ್ತೀವೆ. ನಮ್ಮ ಜನರಿಂದ ಸರಕಾರಕ್ಕೆ ಯಾವುದೇ ದೂರು ಬಂದಿಲ್ಲ. ವಿರೋಧ ಪಕ್ಷದ ನಾಯಕರಿಂದ ಮಾತ್ರ ಟೀಕೆಗಳು ಬರ್ತಿವೆ ಅಷ್ಟೆ. ನಾವು ಜನರ ಪರವಾಗಿ ಇದ್ದೇವೆ ಜನರಿಗಾಗಿ ಕೆಲಸ ಮಾಡ್ತೇವೆ. ಪ್ರಣಾಳಿಕೆಯಲ್ಲಿ ನಾವು ಜನರಿಗೆ ನೀಡಿದ ೫೦೦ಭರವಸೆಯಲ್ಲಿ ಈಗಾಗಲೇ 100 ಕ್ಕೂ ಅಧಿಕ ಅನುಷ್ಠಾನ ಆಗಿವೆ. 5 ವರ್ಷದೊಳಗೆ 500 ಭರವಸೆ ಈಡೇರಿಕೆ ಮಾಡುತ್ತೇವೆ ಎಂದರು.
ಮಾಜಿ ಸಿಎಂಗೆ ಗೃಹಸಚಿವ ತಿರುಗೇಟುಅಕ್ಕಿರಾಂಪುರ ಗ್ರಾಪಂಯಲ್ಲಿ ಪಲಾನುಭವಿಗೆ ನೀಡಿದ ಚೆಕ್‌ಬೌನ್ಸ್ ಆಗಿಲ್ಲ. ಗ್ರಾಪಂ ಅಧಿಕಾರಿಯ ನಿರ್ಲಕ್ಷದಿಂದ ಹಣ ನೀಡುವುದು ವಿಳಂಬ ಆಗಿದೆ ಅಷ್ಟೆ. ಮಾಜಿ ಸಿಎಂ ಯಡಿಯೂರಪ್ಪ ನೀಡಿದ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ತುಮಕೂರು ಜಿಲ್ಲೆಯಲ್ಲಿ ನಡೆದಿರುವ ಒಂದು ಪ್ರಕರಣಕ್ಕೆ ದೊಡ್ಡದಾಗಿ ಬಿಂಬಿಸಿ ಹೇಳಿದ್ದಾರೆ ಅಷ್ಟೆ. ಗ್ರಾಪಂಯ ಹಳೆಯ ಚೆಕ್ ವಿಚಾರಕ್ಕೆ ರಾಜ್ಯ ಸರಕಾರ ಹಣ ನೀಡುತ್ತಿಲ್ಲ ಎಂಬ ಆರೋಪ ಎಷ್ಟು ಸತ್ಯ ಹೇಳಿ ನೊಡೋಣ ಎಂದು ಮಾಜಿ ಸಿಎಂ ಯಡಿಯೂರಪ್ಪಗೆ ಗೃಹಸಚಿವ ಡಾ.ಜಿ.ಪರಮೇಶ್ವರ ತಿರುಗೇಟು ನೀಡಿದರು. ಸಭೆಯಲ್ಲಿ ತುಮಕೂರು ಜಿಲ್ಲಾಧೀಕಾರಿ ಶ್ರೀನಿವಾಸ್, ಜಿಪಂ ಸಿಇಓ ಪ್ರಭು, ಪೊಲೀಸ್ ವರೀಷ್ಟಾಧಿಕಾರಿ ಅಶೋಕ್, ಕೊರಟಗೆರೆ ತಹಶೀಲ್ದಾರ್ ಮಂಜುನಾಥ, ತಾಪಂ ಇಓ ದೊಡ್ಡಸಿದ್ದಯ್ಯ, ಪಪಂ ಮುಖ್ಯಾಧಿಕಾರಿ ಭಾಗ್ಯಮ್ಮ, ಕೃಷಿ ಇಲಾಖೆಯ ನಾಗರಾಜು, ಜಿಪಂ ಎಇಇ ರವಿಕುಮಾರ್, ತೋಟಗಾರಿಕೆ ನಾಗರಾಜು, ಅರಣ್ಯ ಇಲಾಖೆಯ ರವಿಕುಮಾರ್, ಸಾಮಾಜಿಕ ವಲಯ ಶಿಲ್ಪಾ, ಸಿಡಿಪಿಓ ಅಂಬಿಕಾ, ಸಿಪಿಐ ಅನಿಲ್, ಪಿಎಸೈ ಚೇತನ್ ಸೇರಿದಂತೆ ಇತರರು ಇದ್ದರು.