ಬದಿಯಡ್ಕ: ನಾಪತ್ತೆಯಾಗಿದ್ದ ಯುವತಿ ಅನ್ಯ ಧರ್ಮೀಯ ಯುವಕನ ಜತೆ ವಿವಾಹವಾಗಿದ್ದು, ಈ ದಂಪತಿ ಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
Advertisement
ನ್ಯಾಯಾಲಯ ಅವರನ್ನು ಸ್ವಇಚ್ಛೆಯಂತೆ ತೆರಳಲು ತಿಳಿಸಿದಾಗ ಯುವತಿ ಯುವಕನ ಜತೆ ತೆರಳಿದ್ದಾಳೆ. ಪಿಲಾಂಕಟ್ಟೆಯ ನಿವಾಸಿ ಫಾತಿಮಾ(19) ನಾಪತ್ತೆಯಾದ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿತ್ತು.
ಪೊಲೀಸರು ನಡೆಸಿದ ತನಿಖೆಯಲ್ಲಿ ಈಕೆ ಪಾಣತ್ತೂರು ಚೆಂಬೇರಿ ನಿವಾಸಿ ಚಾಲಕನ ಜತೆ ವಿವಾಹವಾಗಿರುವುದನ್ನು ಪತ್ತೆ ಹಚ್ಚ ಲಾಗಿದೆ. ಯುವಕ ಬಸ್ ಹಾಗೂ ಕಲ್ಲಿನ ಲಾರಿಯಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಇವರು ಕಳೆದ ಮೂರು ವರ್ಷಗಳಿಂದ ಪ್ರೀತಿಸು ತ್ತಿದ್ದರೆನ್ನಲಾಗಿದೆ.