Advertisement

ಉತ್ತರಾಖಂಡ್: ಅಂಕಿತಾ ಪ್ರಕರಣ-ಬಿಜೆಪಿ ನಾಯಕನ ಪುತ್ರನ ರೆಸಾರ್ಟ್ ಧ್ವಂಸ, SIT ತನಿಖೆ

12:27 PM Sep 24, 2022 | Team Udayavani |

ಉತ್ತರಾಖಂಡ್: ರಿಷಿಕೇಶ್  ನ ರೆಸಾರ್ಟ್ ನ ರಿಸೆಪ್ಶನಿಸ್ಟ್ ಅಂಕಿತಾ ನಾಪತ್ತೆಯಾಗಿದ್ದ ಪ್ರಕರಣ ಇದೀಗ ತಿರುವು ಪಡೆದುಕೊಂಡಿದ್ದು, ಆಕೆಯ ಶವ ಪತ್ತೆಯಾಗಿದೆ. ಅಲ್ಲದೇ ಅಂಕಿತಾಳನ್ನು ಕೊಲೆ ಮಾಡಿರುವ ಆರೋಪದಲ್ಲಿ ಬಿಜೆಪಿ ನಾಯಕನ ಮಗ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ರೆಸಾರ್ಟ್ ಧ್ವಂಸಕ್ಕೆ ಸಿಎಂ ಆದೇಶ:

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಬಿಜೆಪಿ ನಾಯಕ ವಿನೋದ್ ಆರ್ಯ ಪುತ್ರ ಪುಳಕಿತ್ ಆರ್ಯನಿಗೆ ಸೇರಿದ ವನತಾರಾ ರೆಸಾರ್ಟ್ ಅನ್ನು ಧ್ವಂಸಗೊಳಿಸುವಂತೆ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ:ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…ಕೇರಳ ಆಟೋ ಚಾಲಕನ ಅಳಲೇನು?!

ಸಿಎಂ ಆದೇಶ ಬಳಿಕ ಪುಳಕಿತ್ ಆರ್ಯ ಮಾಲೀಕತ್ವದ ವನತಾರಾ ರೆಸಾರ್ಟ್ ಅನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಸ್ಪೆಷಲ್ ಪ್ರಿನ್ಸಿಪಲ್ ಸೆಕ್ರೆಟರಿ ಅಭಿನವ್ ಕುಮಾರ್ ಎಎನ್ ಐಗೆ ತಿಳಿಸಿದ್ದಾರೆ.

Advertisement

ಆರೋಪಿಗಳಾದ ಪುಳಕಿತ್ ಆರ್ಯ, ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ಮ್ಯಾನೇಜರ್ ಅಂಕಿತ್ ಗುಪ್ತಾಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ತನಿಖೆಗೆ ಎಸ್ ಐಟಿ ರಚನೆ:

ಅಂಕಿತಾ ಕೊಲೆ ಪ್ರಕರಣದ ತನಿಖೆ ನಡೆಸಲು ಎಸ್ ಐಟಿ (ವಿಶೇಷ ತನಿಖಾ ದಳ) ರಚಿಸಲಾಗುವುದು ಎಂದು ಸಿಎಂ ಪುಷ್ಕರ್ ಸಿಂಗ್ ಟ್ವೀಟ್ ಮಾಡಿದ್ದು, ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ರೇಣುಕಾ ದೇವಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸಿಎಂ ಪುಷ್ಕರ್ ಆದೇಶ ನೀಡಿದ್ದು, ಇದೊಂದು ದುರಾದೃಷ್ಟಕರ ಘಟನೆಯಾಗಿದೆ. ಇಂತಹ ಪೈಶಾಚಿಕ ಕೃತ್ಯ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಪುಷ್ಕರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next