Advertisement
ಸ್ಥಳೀಯರು ನೇಪಾಳ ಸೇನೆಗೆ ನೀಡಿದ ಮಾಹಿತಿಯ ಪ್ರಕಾರ, ತಾರಾ ಏರ್ ವಿಮಾನವು ಮಾನಪತಿ ಹಿಮಾಲ್ ಭೂಕುಸಿತದ ಅಡಿಯಲ್ಲಿ ಲಾಮ್ಚೆ ನದಿಯಲ್ಲಿ ಪತನಗೊಂಡಿದೆ. ನೇಪಾಳ ಸೇನೆಯು ನೆಲ ಮತ್ತು ವಾಯು ಮಾರ್ಗದಿಂದ ಘಟನಾ ಸ್ಥಳದ ಕಡೆಗೆ ಚಲಿಸುತ್ತಿದೆ ಎಂದು ಸೇನಾ ವಕ್ತಾರ ನಾರಾಯಣ ಸಿಲ್ವಾಲ್ ಮಾಹಿತಿ ನೀಡಿದ್ದಾರೆ.
Related Articles
Advertisement
ಮೈ ರಿಪಬ್ಲಿಕಾ ಪತ್ರಿಕೆಯ ಪ್ರಕಾರ, 10 ಸೈನಿಕರು ಮತ್ತು ನಾಗರಿಕ ವಿಮಾನಯಾನ ಪ್ರಾಧಿಕಾರದ ಇಬ್ಬರು ಉದ್ಯೋಗಿಗಳನ್ನು ಹೊತ್ತ ನೇಪಾಳ ಸೇನೆಯ ಹೆಲಿಕಾಪ್ಟರ್ ಅಪಘಾತದ ಸಂಭವನೀಯ ಸ್ಥಳವಾದ ನಾರ್ಶಾಂಗ್ ಮಠದ ಬಳಿ ನದಿಯ ದಡದಲ್ಲಿ ಇಳಿಯಿತು. ನೇಪಾಳ ಟೆಲಿಕಾಂ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ನೆಟ್‌ವರ್ಕ್ ಮೂಲಕ ವಿಮಾನದ ಕ್ಯಾಪ್ಟನ್ ಪ್ರಭಾಕರ್ ಘಿಮಿರೆ ಅವರ ಸೆಲ್‌ಫೋನ್ ಅನ್ನು ಪತ್ತೆಹಚ್ಚಿದ ನಂತರ ವಿಮಾನವನ್ನು ಪತ್ತೆ ಮಾಡಲಾಗಿದೆ.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಭಾರತೀಯರನ್ನು ಅಶೋಕ್ ಕುಮಾರ್ ತ್ರಿಪಾಠಿ, ಅವರ ಪತ್ನಿ ವೈಭವಿ ತ್ರಿಪಾಠಿ ಹಾಗೂ ಇವರ ಮಕ್ಕಳಾದ ಧನುಷ್ ಹಾಗೂ ರಿತಿಕಾ ಎಂದು ಗುರುತಿಸಲಾಗಿದೆ. ಅವರು, ಮಹಾರಾಷ್ಟ್ರದ ಥಾಣೆಯ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತಂತೆ ಮಾಹಿತಿ ನೀಡಿದ ಥಾಣೆಯ ಪೊಲೀಸ್ ಅಧಿಕಾರಿಯೊಬ್ಬರು, “ವಿಮಾನ ಅಪಘಾತವಾಗಿರುವ ವಿಚಾರ ತಿಳಿಯುತ್ತಿದ್ದಂತೆ, ನೇಪಾಳದಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಯು ತಕ್ಷಣವೇ ಮುಂಬೈ ಪೊಲೀಸರನ್ನು ಸಂಪರ್ಕಿಸಿ, ವಿಮಾನದಲ್ಲಿದ್ದ ಭಾರತೀಯರ ಮಾಹಿತಿಯನ್ನು ನೀಡಿ, ಇವರ ಬಗ್ಗೆ ಮಾಹಿತಿ ನೀಡಬೇಕೆಂದು ಕೋರಿದರು. ತಕ್ಷಣವೇ, ರಾಜತಾಂತ್ರಿಕ ಅಧಿಕಾರಿಗಳು ನೀಡಿದ್ದ ಮುಂಬೈನ ಹೊರವಲಯದಲ್ಲಿರುವ ಬೋರಿವಲಿಯಲ್ಲಿರುವ ವೈಭವಿ ಅವರ ಮನೆಗೆ ಹೋಗಿ ನೋಡಿದಾಗ ಅವರ ಮನೆಯು ಬೀಗ ಹಾಕಿದ್ದು ಗೋಚರಿಸಿತು. ಆಗ ಅವರು ವಿದೇಶ ಪ್ರಯಾಣದಲ್ಲಿರುವುದು ಖಾತ್ರಿಯಾಗಿ, ಈ ಕುರಿತಂತೆ ಕಠ್ಮಂಡುವಿನಲ್ಲಿರುವ ರಾಜತಾಂತ್ರಿಕ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.