Advertisement

ಕಾಣೆಯಾದ ನಮ್ಮನೆ

09:50 AM Dec 04, 2019 | Suhan S |

ನಮ್ಮ ಕುಟುಂಬಅಂತ ಒಂದು ಗ್ರೂಪ್‌ ರಚನೆ ಮಾಡಿದ್ದು ಚಿಕ್ಕಪ್ಪನ ಮಕ್ಕಳು. ಇದರ ಉದ್ದೇಶ, ಊರಲ್ಲಿದ್ದು, ನಗರಗಳಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಅಷ್ಟೂ ಸಂಬಂಧಿಕರನ್ನು ಒಂದೆಡೆ ಸೇರಿಸುವುದಕ್ಕಾಗಿ. ಹೀಗಾಗಿ, ಎಲ್ಲರ ನಂಬರ್‌= ಗಳನ್ನು ಹುಡುಕಿಸಿ ಗ್ರೂಪ್‌ ರಚನೆಯಾಗಿತ್ತು. ಇದರಲ್ಲಿ ಮೊಬೈಲ್‌ ಆಪರೇಟ್‌ ಮಾಡುವುದನ್ನು ತಿಳಿಯದ ಒಂದಷ್ಟುಹಿರಿಯರೂ ಸೇರಿದ್ದರು. ಅವರನ್ನೂ ಮೊಬೈಲ್‌ವಾಹಿನಿಗೆತರುವುದೂ ಮೂಲ ಉದ್ದೇಶವಾಗಿತ್ತು. ಇಂತಿಪ್ಪ ಗ್ರೂಪಲ್ಲಿಎಲ್ಲರ ಮನೆಯ ವಿಶೇಷಗಳು, ಖಾದ್ಯಗಳು, ಊಟತಿಂಡಿಯ ಬಗ್ಗೆ ಮಾಹಿತಿಗಳು ಓಡಾಡುತ್ತಿದ್ದವು.

Advertisement

ಹಿಂದೆ, ಊರಲ್ಲಿ ಅಜ್ಜಿ ಮಾಡುತ್ತಿದ್ದ ಅಡುಗೆ, ಅದರ ರೆಸಿಪಿಗಳೆಲ್ಲವೂ ವಹಿವಾಟಾಗುತ್ತಿದ್ದವು. ಯಾರಾದರೂ ಇವತ್ತು, ಮಜ್ಜಿಗೆ ಹುಳಿ ಹೇಗೆ ಮಾಡಬೇಕು ಅಂತ ಗ್ರೂಪಲ್ಲಿ ಹಾಕಿದರೆ, ಕ್ಷಣಾರ್ಧದಲ್ಲಿ ಅತ್ತೆಮನೆ, ತವರು ಮನೆಯ ರೆಸಿಪಿಗಳು ಹೀಗೀಗೇಅನ್ನೋ ಮಾಹಿತಿ ಬಂದು ಬಿಡೋದು. ಈ ಗುಂಪಿನಲ್ಲಿ ಹಿರಿಯ ವ್ಯಕ್ತಿ ಅಪ್ಪಿ. ಇವರು ಚಿಕ್ಕವರಿಗೆ ದೊಡ್ಡವರಿಗೆಲ್ಲಾಪ್ರೀತಿ ಪಾತ್ರರಾಗಿದ್ದರು.

ಬಹಳ ತಮಾಷೆಯ ವ್ಯಕ್ತಿ. ಅವರ ಮಾತು, ಅಭಿನಯಕ್ಕೆನಗದವರೇ ಇರಲಿಲ್ಲ. ಎರಡು ಜನರೇಷನ್ನಿನಕೊಂಡಿಯಾಗಿದ್ದ ಅಪ್ಪಿಗೆಮೊಬೈಲ್‌ ನಿರ್ವಹಣೆ ಗೊತ್ತಿರಲಿಲ್ಲ. ಹೀಗಾಗಿ, ಚಿಕ್ಕಪ್ಪನ ಮಗ ಮಧು ಮೊಬೈಲ್‌ ಅನ್ನು ಕೊಡಿಸಿದ್ದ. ಅವರ ಮಗ ರಾಜ ಆಗಾಗ, ಮೊಬೈಲ್‌ ನಿರ್ವಹಣೆಯ ಬಗ್ಗೆ ಹೇಳಿಕೊಡುತ್ತಿದ್ದ. ಹೀಗಾಗಿ, ಅಲ್ಪ ಸ್ವಲ್ಪ ಮೊಬೈಲ್‌ ನಿರ್ವಹಣೆ ಬರುತ್ತಿದ್ದ ಅಪ್ಪಿ ತನ್ನ ವೈವಿಧ್ಯಮ ಶ್ರೀಕಂಠದಿಂದಹಾಡುಗಳನ್ನು ಹೇಳಿ ರಂಜಿಸುತ್ತಿದ್ದರು.

ಒಂದು ದಿನ ಇದ್ದಕ್ಕಿದ್ದಂತೆ ಗ್ರೂಪಿನಲ್ಲಿ ಜ್ವರವನ್ನು, ಕೆಮ್ಮನ್ನು ಹೇಗೆ ನಿವಾರಿಸಿಕೊಳ್ಳುವುದು ಅನ್ನೋ ಟಿಪ್ಸ್‌ ಅನ್ನು ಸದಸ್ಯರೊಬ್ಬರು ಹಾಕಿದರು. ಆ ಹೊತ್ತಿಗೆ ಅಪ್ಪಿಗೆ ಜ್ವರ, ಆಗಾಗ ಬೀಡಿ ಸೇದುವ ಹುಚ್ಚಿದ್ದರಿಂದ ಕೆಮ್ಮು

ಕೂಡ ಕಾಡುತ್ತಿತ್ತು. ಮಗ ಆಫೀಸಿಂದ ಬರುವ ಹೊತ್ತಿಗೆ ಹುಷಾರಾಗೋಣ ಅಂತ ಹೇಳಿ, ಗ್ರೂಪಲ್ಲಿದ್ದ ಟಿಪ್ಸ್‌ ಪಾಲಿಸಲು ಹೋದರು. ಅದರಲ್ಲಿ ಕೊಬ್ಬರಿ ಎಣ್ಣೆಯನ್ನು ಬಳಸುವ ಬಗ್ಗೆ ಇತ್ತು. ಅದರ ಬದಲಿಗೆ ಅಪ್ಪಿ ಅರಳೆಣ್ಣೆಯನ್ನು ಬಳಸಿ ಮನೆಮದ್ದು ಮಾಡಿಕೊಂಡು ಸೇವಿಸಿ ಬಿಟ್ಟಿದ್ದರು. ಇದರೊಂದಿಗೆ ಥಂಡಿ ಸಮಸ್ಯೆಗೆ ಬ್ರಾಂದಿ ರಾಮಬಾಣ ಅನ್ನೋ ರೀತಿ ಟಿಪ್ಸ್‌ ಇತ್ತು ಅನಿಸುತ್ತದೆ.ಇದನ್ನು ಕಂಡವನೇ ಅಪ್ಪಿ ಅದನ್ನೂ ಸೇವಿಸಿದರು. ಸ್ವಲ್ಪ ಸಮಯದ ನಂತರ, ಮೋಷನ್‌ ನಿಲ್ಲಲು ಮಾತ್ರೆ ಯಾವುದು? ಅಂತ ಗ್ರೂಪಲ್ಲಿ ಹಾಕಿದರು.

Advertisement

ಮಗ ಆಫೀಸಿಗೆ ಹೋದಾಗ ಈ ಪ್ರಶ್ನೆ ಏಕೆ ಅಂತ ಅಡ್ಮಿನ್‌ ಮಧುವಿಗೆ ಅನುಮಾನ ಬಂತು. ವಿಚಾರಿಸುವ ಹೊತ್ತಿಗೆ ಅಪ್ಪಿಆಸ್ಪತ್ರೆಯಲ್ಲಿ ಸೇರಿದ್ದರು. ವಿಷಯ ತಿಳಿದ ಮಗ ರಾಜಗ್ರೂಪಿನ ಬಗ್ಗೆ ಸಿಟ್ಟಿಗೆದ್ದು, ಇದರಿಂದಲೇ ನಮ್ಮ ತಂದೆ ಆಸ್ಪತ್ರೆ ಸೇರುವಂತಾಯಿತು ಅಂತ ಅಪ್ಪನ ಮೊಬೈಲ್‌ ಅನ್ನು ಆಸ್ಪತ್ರೆ ಕಿಟಕಿಯಿಂದ ಎಸೆದ. ಕೊನೆಗೆ, ಅಪ್ಪಿ ಇಲ್ಲದೆ ಶೋಕ ಸಮುದ್ರದಂತಾದ ಗ್ರೂಪ್‌ನಲ್ಲಿ ನಗುವೆ ಕಾಣೆಯಾಯಿತು. ಕೊನೆಗೆ ನಮ್ಮ ಮನೆ ಕೂಡ ಮರೆಯಾಯಿತು.

 

ಕೆ.ಜಿ

Advertisement

Udayavani is now on Telegram. Click here to join our channel and stay updated with the latest news.

Next