Advertisement

ನಾಪತ್ತೆಯಾಗಿದ್ದ ವಿದ್ಯಾರ್ಥಿ ಫೇಸ್ ಬುಕ್ ನಲ್ಲಿ ಉಗ್ರನಾಗಿ ಪ್ರತ್ಯಕ್ಷ

01:45 PM Nov 03, 2018 | Sharanya Alva |

ನೋಯ್ಡಾ:ಉತ್ತರಪ್ರದೇಶದ ಗ್ರೇಟರ್ ನೋಯ್ಡಾದ ಖಾಸಗಿ ವಿಶ್ವವಿದ್ಯಾಲಯದಿಂದ ಕಳೆದ ವಾರ ದಿಢೀರ್ ಕಣ್ಮರೆಯಾಗಿದ್ದ ಜಮ್ಮು- ಕಾಶ್ಮೀರ ಮೂಲದ ವಿದ್ಯಾರ್ಥಿಯೊಬ್ಬ ಐಸಿಸ್ ಭಯೋತ್ಪಾದಕ ಸಂಘಟನೆ ಧ್ವಜ ಹಿಡಿದು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ.

Advertisement

ಎಹ್ತೆಶಮ್ ಬಿಲಾಲ್ ಸೋಫಿ (19ವರ್ಷ) ಶ್ರೀನಗರದ ಕಣಿವೆ ಪ್ರದೇಶದ ನಿವಾಸಿ ಗ್ರೇಟರ್ ನೋಯ್ಡಾದ ಶಾರ್ದಾ ವಿಶ್ವವಿದ್ಯಾಲಯದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದಾನೆ. ಕ್ಯಾಂಪಸ್ ನಲ್ಲಿ ಭಾರತ ಮತ್ತು ಅಫ್ಘಾನ್ ವಿದ್ಯಾರ್ಥಿಗಳ ನಡುವೆ ನಡೆದ ಘರ್ಷಣೆ ವೇಳೆ ಸೋಫಿ ಒರಟಾಗಿ ನಡೆದುಕೊಂಡಿದ್ದ. ಈ ಘಟನೆ ಬಳಿಕ ಅಕ್ಟೋಬರ್ 28ರಂದು ದೆಹಲಿಗೆ ತೆರಳುವುದಾಗಿ ಅಧಿಕೃತ ಅನುಮತಿ ಪಡೆದು ಹೊರಟಿದ್ದ.

ಆದರೆ ಯೂನಿರ್ವಸಿಟಿಯಿಂದ ತೆರಳಿದ್ದ ಬಳಿಕ ಆತ ಮರುದಿನ ಕಾಲೇಜಿಗೆ ವಾಪಸ್ ಬರದಿರುವುದನ್ನು ಗಮನಿಸಿ ಗ್ರೇಟರ್ ನೋಯ್ಡಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ಸಲ್ಲಿಸಿದ್ದರು. ದೂರಿನ ಪ್ರಕಾರ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ತದನಂತರ ಎಹ್ತೆಶಮ್ ಬಿಲಾಲ್ ಮೊಬೈಲ್ ಜಾಡಿನ ಪತ್ತೆ ಹಚ್ಚಿದಾಗ ಆತ ಶ್ರೀನಗರದಲ್ಲಿ ಇರುವುದನ್ನು ಪತ್ತೆ ಮಾಡಿದ್ದರು.

ಇದಾದ ಮೇಲೆ ಸೋಫಿ ಐಸಿಸ್ ಉಗ್ರಗಾಮಿ ಸಂಘಟನೆ ಬಳಸುವ ಕಪ್ಪುಬಣ್ಣದ ಬಟ್ಟೆ ಧರಿಸಿ..ತಾನು ಐಸಿಸ್ ಸೇರ್ಪಡೆಯಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿಕೊಂಡಿದ್ದಾನೆ. ಪ್ರಕರಣದ ಕುರಿತಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜೊತೆ ಸಂಪರ್ಕದಲ್ಲಿ ಇದ್ದು, ಆತನ ಇರುವಿಕೆ ಪತ್ತೆ ಹಚ್ಚುವುದಾಗಿ ಎಟಿಎಸ್ ಇನ್ಸ್ ಪೆಕ್ಟರ್ ಜನರಲ್ ಅಸೀಂ ಅರುಣ್ ಪಿಟಿಐಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next