ನವದೆಹಲಿ: ಹಣದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೊಸದಿಲ್ಲಿಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.)ದ ವಿಚಾರಣೆಗೆ ಗೈರಾಗಿ ನಾಪತ್ತೆಯಾಗಿದ್ದಾರೆ.
ಈ ನಡುವೆ ಇ.ಡಿ. ಅಧಿಕಾರಿಗಳು ಹೊಸದಿಲ್ಲಿಯಲ್ಲಿರುವ ಹೇಮಂತ್ ಸೊರೇನ್ ಅವರ ನಿವಾಸದಲ್ಲಿ ಸೋಮವಾರ ತಡರಾತ್ರಿಯ ವರೆಗೆ ಶೋಧ ನಡೆಸಿ ಅವರಿಗೆ ಸಂಬಂಧಿಸಿದ ಎರಡು ಕಾರುಗಳು ಸೇರಿದಂತೆ ೩೬ ಲಕ್ಷ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಎಲ್ಲದರ ನಡುವೆ ಸೊರೇನ್ ನಾಪತ್ತೆಯಾಗಿರುವ ವಿಚಾರವನ್ನು ಬಿಜೆಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ವ್ಯಂಗ್ಯವಾಡಿದೆ ಅಲ್ಲದೆ ತಮ್ಮ ಟ್ವಿಟರ್ ಖಾತೆ X ನಲ್ಲಿ ಹೇಮಂತ್ ಸೊರೇನ್ ಕಾಣೆಯಾಗಿದ್ದಾರೆ ಎಂದು ಪೋಸ್ಟರ್ ಪೋಸ್ಟ್ ಮಾಡಿದ್ದು ಸೊರೇನ್ ಮಾಹಿತಿ ನೀಡಿದವರಿಗೆ ನಗದು ಬಹುಮಾನ ಗೆಲ್ಲುವ ಅವಕಾಶ ಇದೆ ಎಂದು ಹೇಳಿಕೊಂಡಿದ್ದಾರೆ.
ಸೋಮವಾರ ದೆಹಲಿಯ ಅವರ ಅಧಿಕೃತ ನಿವಾಸದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಶೋಧ ನಡೆಸಿದ ವೇಳೆ ಸೋರೆನ್ ಮನೆಯಲ್ಲಿ ಇರಲಿಲ್ಲ ಇದಾದ ಬಳಿಕ ಅವರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಎಂಬ ವದಂತಿ ಹಬ್ಬತೊಡಗಿದೆ.
ಜಾರ್ಖಂಡ್ ವಿಧಾನಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಮರಾಂಡಿ ತಮ್ಮ ಟ್ವೀಟ್ ನಲ್ಲಿ ಸೋರೆನ್ ಕಾಣೆಯಾಗಿರುವುದಾಗಿ ಫೋಟೋ ಸಮೇತ ಪೋಸ್ಟ್ ಮಾಡಿದ್ದೂ ಅದರಲ್ಲಿ ಅವರು ಬಿಳಿ ಅಂಗಿ, ಕಪ್ಪು ಪ್ಯಾಂಟ್ ಮತ್ತು ಚಪ್ಪಲಿಯನ್ನು ಧರಿಸಿದ್ದು 5 ಅಡಿ 2 ಇಂಚು ಎತ್ತರ ಇದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Kerala: RSS ಕಾರ್ಯಕರ್ತ ರಂಜಿತ್ ಪ್ರಕರಣ: SDPI, PFIನ 15 ಕಾರ್ಯಕರ್ತರಿಗೆ ಗಲ್ಲುಶಿಕ್ಷೆ