Advertisement

ಕಾಣೆಯಾಗಿದ್ದ ಮಾಜಿ‌ ಶಾಸಕರ ಮೊಮ್ಮೊಕ್ಕಳು ಶವವಾಗಿ ಪತ್ತೆ!

12:48 PM Mar 08, 2021 | Team Udayavani |

ಸಿರವಾರ (ರಾಯಚೂರು):  ರವಿವಾರ ಕಾಣೆಯಾಗಿದ್ದ ಮಾನ್ವಿ ಕ್ಷೇತ್ರದ ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ಅವರ ಮೊಮ್ಮಕ್ಕಳು ಸೋಮವಾರ ಬೆಳಗ್ಗೆ ಹಳ್ಳದ ಗುಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Advertisement

ಸಿರವಾರ ತಾಲೂಕಿನ ಬಲ್ಲಟಗಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಕಂಬಳ ಕರೆಗೆ ಶಾಶ್ವತ ವಿದಾಯ ಹೇಳಿದ ಅಲೆವೂರು- ತಡಂಬೈಲ್ ಕುಟ್ಟಿ.. ಅಭಿಮಾನಿಗಳ ಕಂಬನಿ

ಶಿವಾನಂದ ನಾಯಕ ಎಂಬುವವರ ಮಕ್ಕಳಾದ ವರುಣ್, ತನಯ್, ಇಬ್ಬರು‌ ಮನೆಯ ಮುಂದೆ ಮಧ್ಯಾಹ್ನ ಎರಡು ಗಂಟೆವರೆಗೆ ಆಟವಾಡಿ ಬಳಿಕ ನಾಪತ್ತೆಯಾಗಿದ್ದರು. ಎಲ್ಲೆಡೆ ಹುಡುಕಾಡಿದರೂ ಸಿಕ್ಕಿರಲಿಲ್ಲ. ಮಕ್ಕಳನ್ನು ಅಪಹರಿಸಿರುವ ಶಂಕೆ ವ್ಯಕ್ತವಾಗಿತ್ತು.

ಸಿರವಾರ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದರು. ಆದರೆ ಇಂದು ಬೆಳಗ್ಗೆ ಗ್ರಾಮ ಸಮೀಪದ ಹಳ್ಳದ ಗುಂಡಿಯಲ್ಲಿ ಮಕ್ಕಳ ಶವ ಪತ್ತೆಯಾಗಿವೆ.

Advertisement

ಇದನ್ನೂ ಓದಿ:ಸಿ.ಡಿ. ಲೇಡಿಯ ಮಾಹಿತಿ ಪೊಲೀಸರಿಗೆ ಲಭ್ಯ : ಯುವತಿಯ ಪತ್ತೆಗೆ ಬಲೆ ಬಿಸಿದ ಪೊಲೀಸರು

Advertisement

Udayavani is now on Telegram. Click here to join our channel and stay updated with the latest news.

Next