Advertisement

ಕಾಣೆಯಾದ 500 ಮಕ್ಕಳ ವಿಳಾಸ ಆಧಾರ್‌ನಿಂದ ಪತ್ತೆ

09:57 AM Nov 25, 2017 | |

ಹೊಸದಿಲ್ಲಿ: ಇತ್ತೀಚಿನ ತಿಂಗಳುಗಳಲ್ಲಿ ಕಾಣೆ ಯಾಗಿದ್ದ ಸುಮಾರು 500 ಮಕ್ಕಳನ್ನು ಅವರ ಆಧಾರ್‌ ಸಂಖ್ಯೆಯ ಸಹಾಯದಿಂದ ಪೋಷಕರಿಗೆ ತಲುಪಿಸಲಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (ಯುಐಡಿಎಐ) ಮುಖ್ಯಸ್ಥ ಅಜಯ್‌ ಭೂಷಣ್‌ ತಿಳಿಸಿದ್ದಾರೆ. 

Advertisement

ಗ್ಲೋಬಲ್‌ ಕಾನೆ#ರನ್ಸ್‌ ಆನ್‌ ಸೈಬರ್‌ ಸ್ಪೇಸ್‌ (ಜಿಸಿಸಿಎಸ್‌) ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕಳೆದ ಕೆಲವು ತಿಂಗಳುಗಳ ಹಿಂದೆ ಅನಾಥಾಲಯ ಸೇರಿಕೊಂಡಿದ್ದ ಬಾಲಕನೊಬ್ಬನನ್ನು ಆಧಾರ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಕರೆದೊಯ್ಯಲಾಗಿತ್ತು. ಆಗ, ಆ ಬಾಲಕ ಅದಾಗಲೇ ಆಧಾರ್‌ ಹೊಂದಿರುವುದು ಗೊತ್ತಾಯಿತಲ್ಲದೆ, ಆತನ ಮನೆ ವಿಳಾಸವೂ ಪತ್ತೆಯಾಯಿತು. ಇದರಿಂದ ಆ ಬಾಲಕನನ್ನು ಆತನ ಮನೆಗೆ ಸೇರಿಸಲು ಸಹಾಯವಾಯಿತು ಎಂದರಲ್ಲದೆ ಆಧಾರ್‌ ಮೂಲಕ ಕಾಣೆಯಾಗಿದ್ದ ಹಲವಾರು ಮಕ್ಕಳಿಗೆ ನೆರವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next