ಮೂಲ್ಕಿ: ಹಳೆಯಂಗಡಿ ತೋಕೂರು ಗ್ರಾಮದ ನಿವಾಸಿ ಸುಮಂತ್ (17) ಸೆ. 15ರಿಂದ ಮನೆಯಿಂದ ಉದ್ಯಾವರದ ಕೊರಗ್ರಪಾಡಿಯಲ್ಲಿರುವ ತನ್ನ ತಾಯಿಯ ಅಣ್ಣನ ಮನೆಗೆ ಹೋಗಿ ಬರುವುದಾಗಿ ಹೋದಾತ ವಾಪಸು ಬಂದಿಲ್ಲ ಎಂದು ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾವನ ಉತ್ತರ ಕ್ರಿಯೆಗಾಗಿ ಸೆ. 13ರಂದು ಕೊರಗ್ರಪಾಡಿಗೆ ಹೋಗಿದ್ದ ಸುಮಂತ್, 15ರಂದು ಮರಳಿ ಬಂದು ಮತ್ತೆ ಅಲ್ಲಿಗೆ ಹೋಗಲು ತೆರಳಿರುವುದಾಗಿ ಮನೆಯಲ್ಲಿ ತಿಳಿಸಿದ್ದ. ಅನಂತರ ಸುಮಂತ್‌ಗೆ ಕರೆ ಮಾಡಿದಾಗ ಸಿcಚ್x ಆಫ್ ಆಗಿತ್ತು. ಕೊರಗ್ರಪಾಡಿಗೂ ಆತ ಹೋಗಿಲ್ಲ. ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ತುಂಬು ತೋಳಿನ ಬಿಳಿ ಶರ್ಟ್ ಮತ್ತು ತಿಳಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದ. ಆತನ ಬಗ್ಗೆ ಮಾಹಿತಿ ದೊರೆತರೆ ಮೂಲ್ಕಿ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.