Advertisement

Missing case: ಪತಿ, ಪತ್ನಿ ಹುಡುಕಿಕೊಡಲು ಪ್ರತ್ಯೇಕ ದೂರು!

12:06 PM Jan 21, 2024 | Team Udayavani |

ಬೆಂಗಳೂರು: ವಿವಾಹಿತ ವ್ಯಕ್ತಿಯೊಬ್ಬ ವಿವಾಹಿತ ಮಹಿಳೆ ಜತೆ ಮನೆ ಬಿಟ್ಟು ಪರಾರಿಯಾಗಿರುವ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ.

Advertisement

ಇಲಿಯಾಜ್‌ ನಗರದ ವಾಸೀಂ ಮತ್ತು ಕುಮಾರಸ್ವಾಮಿ ಲೇಔಟ್‌ ದಿಲ್ಷಾದ್‌ ಪರಾರಿಯಾದವರು. ವಾಸೀಂ ಪತ್ನಿ ಸುಮೆಯಾ ಬಾನು ಎಂಬವರು ತನ್ನ ಪತಿಯನ್ನು ಹುಡುಕಿಕೊಡುವಂತೆ ದೂರು ನೀಡಿದರೆ, ನಯೀಮ್‌ ತನ್ನ ಪತ್ನಿ ದಿಲ್ಷಾದ್‌ಳನ್ನು ಹುಡುಕಿಕೊಡುವಂತೆ ದೂರು ನೀಡಿದ್ದಾರೆ. ಎರಡೂ ದೂರು ಸ್ವೀಕರಿಸಿರುವ ಪೊಲೀಸರು, ವಾಸೀಂ ಮತ್ತು ದಿಲಾÒದ್‌ ಪತ್ತೆಗೆ ಕಾರ್ಯ ಆರಂಭಿಸಿದ್ದಾರೆ.

ವಾಸೀಂ ಮತ್ತು ಸುಮೆಯಾ ಬಾನು ಏಳು ವರ್ಷದ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಒಂದು ಮಗುವಿದೆ. ನಯೀಮ್‌ ಮತ್ತು ದಿಲ್ಷಾದ್‌ 18 ವರ್ಷದ ಹಿಂದೆ ವಿವಾಹವಾಗಿದ್ದು, ದಂಪತಿಗೆ ಮೂರು ಮಕ್ಕಳಿವೆ. ಇತ್ತೀಚೆಗೆ ವಾಸೀಂ ಮತ್ತು ದಿಲಾÒದ್‌ ನಡುವೆ ಅನೈತಿಕ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಈ ಇಬ್ಬರು ಜೆ.ಪಿ.ನಗರದ ಲಾಡ್ಜ್ ವೊಂದರಲ್ಲಿ ಏಕಾಂತದಲ್ಲಿ ಇರುವಾಗ ಸುಮಾಯಾ ಬಾನು ಕುಟುಂಬದವರಿಗೆ ಸಿಕ್ಕಿ ಬಿದ್ದು, ಹೈಡ್ರಾಮವೇ ನಡೆದಿತ್ತು. ಈ ವೇಳೆ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಇಬ್ಬರನ್ನೂ ಕರೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದರು.

ಇದೀಗ ಕಳೆದ ಮೂರು ನಾಲ್ಕು ದಿನಗಳಿಂದ ವಾಸೀಂ ಮತ್ತು ದಿಲ್ಷಾದ್‌ ಮನೆ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಎರಡು ಪ್ರತ್ಯೇಕ ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next