Advertisement

ನಾಶಿಕ್‌ : ನಾಪತ್ತೆಯಾಗಿದ್ದ ಬಾಲಕನ ಶವ ಬಾವಿಯಲ್ಲಿ ಪತ್ತೆ

12:03 PM Sep 29, 2018 | Team Udayavani |

ನಾಶಿಕ್‌ : ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಹತ್ತು ವರ್ಷ ಪ್ರಾಯದ ಬಾಲಕನ ಶವ ಇಲ್ಲಿಗೆ ಸಮೀಪದ ಬಾವಿಯೊಂದರಲ್ಲಿ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಇದೊಂದು ಆತ್ಮಹತ್ಯೆಯ ಪ್ರಕರಣವಾಗಿರಬಹುದೆಂದು ಪೊಲೀಸಲು ಶಂಕಿಸಿದ್ದಾರೆ. ಐದನೇ ತರಗತಿಯ ವಿದ್ಯಾರ್ಥಿಯಾಗಿರುವ ಈ ಬಾಲಕ ಸೆ.26ರಂದು ಎಂದಿನಂತೆ ಶಾಲೆಗೆ ಹೋಗಿದ್ದ. ನಿತ್ಯವೂ ಶಾಲೆಗೆ ಹೋಗದ ಬಾಲಕನನ್ನು ಆತನ ತಾಯಿ ಅಂದು ತೀವ್ರವಾಗಿ ಗದರಿಸಿದ್ದಳು. 

ಹೂವಿನ ವ್ಯಾಪಾರ ಮಾಡಿಕೊಂಡಿರುವ ಬಾಲಕನ ಹೆತ್ತವರು ತಮ್ಮ ಮಗ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು. ಬಾಲಕನ ಶವ ವಡಾಲಾ-ಶಿವರ ಪ್ರದೇಶದಲ್ಲಿನ ಬಾವಿಯೊಂದರಲ್ಲಿ ನಿನ್ನೆ ಶುಕ್ರವಾರ ಪತ್ತೆಯಾಯಿತು. 

ಪೊಲೀಸರು ಆತ್ಮಹತ್ಯೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next