Advertisement

Kashmir: ಸುಂದರ ಕಾಶ್ಮೀರದಲ್ಲಿ ವಿಶ್ವಸುಂದರಿ ಸ್ಪರ್ಧೆ

12:33 AM Aug 30, 2023 | Team Udayavani |

ಹೊಸದಿಲ್ಲಿ/ಶ್ರೀನಗರ:  ಜಮ್ಮು-ಕಾಶ್ಮೀರವು ಜಿ20 ರಾಷ್ಟ್ರಗಳ ಪ್ರವಾಸೋದ್ಯಮ ಸಮ್ಮೇಳನದ ಬಳಿಕ ವರ್ಷಾಂತ್ಯದಲ್ಲಿ ಮತ್ತೂಂದು ದೊಡ್ಡ ಕಾರ್ಯಕ್ರಮಕ್ಕೆ ಸಿದ್ಧಗೊಳ್ಳುತ್ತಿದೆ. 71ನೇ ಆವೃತ್ತಿಯ ವಿಶ್ವ ಸುಂದರಿ-2023 (ಮಿಸ್‌ ವರ್ಲ್ಡ್-2023) ಸ್ಪರ್ಧೆ ಡಿ. 8ರಂದು ಶ್ರೀನಗರದಲ್ಲಿ ನಡೆಯಲಿದೆ. ಈ ಬಗ್ಗೆ ಮಿಸ್‌ ವರ್ಲ್ಡ್ನ ಸಿಇಒ ಜ್ಯೂಲಿನಾ ಎರಿಕ್‌ ಮೋರ್ಲೆ ಘೋಷಣೆ ಮಾಡಿದ್ದಾರೆ.

Advertisement

ಹಾಲಿ ಸಾಲಿನ ಪ್ರಸಕ್ತ ಭುವನ ಸುಂದರಿ ಪಟ್ಟ ಮುಡಿಗೇರಿಸಿಕೊಂಡಿರುವ ಕರೋಲಿನಾ ಬೈಲಾವ್‌ಸ್ಕ ಸಹಿತ ಚೆಲುವೆಯರ ತಂಡವೇ ಜಮ್ಮು ಕಾಶ್ಮೀರ ಪ್ರವಾಸ ಕೈಗೊಂಡು ಮಂಗಳವಾರ ಹೊಸದಿಲ್ಲಿಗೆ ಆಗಮಿಸಿದೆ. “ಕಾಶ್ಮೀರವನ್ನು ವೀಕ್ಷಿಸಿ ಬೆರಗಾಗಿದ್ದೇನೆ. ಅಂಥ ಸ್ಥಳವನ್ನು ನೋಡಿಯೇ ಇಲ್ಲ’ ಎಂದು ಕರೋಲಿನಾ ಹೇಳಿದ್ದಾರೆ.

ಮಿಸ್‌ ವರ್ಲ್ಡ್, ಕರಾವಳಿ ಮೂಲದ ಸಿನಿ ಶೆಟ್ಟಿ ಮತ್ತು ಮಿಸ್‌ ಕೆರೀಬಿ ಯನ್‌ ಎಮ್ಮಿ ಪೆನಾ ಮಾತನಾಡಿ “ನಾವು ಕಾಶ್ಮೀರದ ಶಕ್ತಿಯನ್ನು ಗಮನಿಸಿದ್ದೇವೆ. ನಮ್ಮ ಪ್ರವಾಸದ ವೇಳೆ ಅಲ್ಲಿನ ಪ್ರಕೃತಿ ಸೌಂದರ್ಯದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು’ ಎಂದು ಹೇಳಿದ್ದಾರೆ.

ಜಮ್ಮು -ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಬಳಿಕ ಅಲ್ಲಿ ಪರಿಸ್ಥಿತಿ ಸುಧಾರಣೆಯಾಗತೊಡಗಿದೆ. ಅದನ್ನು ಜಗತ್ತಿಗೆ ಕಾಣಿಸುವ ಮೊದಲ ಹೆಜ್ಜೆಯಾಗಿ ಮೇ 22, 23ರಂದು ಜಿ20 ಸಮ್ಮೇಳನ ನಡೆಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next