Advertisement

ಜಗ ಮೆಚ್ಚಿದ ಮಗಳು, ಮ್ಯಾಜಿಕಲ್‌ ಸುಂದರಿ ಮಾನುಷಿ

07:00 AM Nov 29, 2017 | Harsha Rao |

ಹದಿನೇಳು ವರ್ಷಗಳ ನಂತರ ಮತ್ತೂಮ್ಮೆ ಭಾರತ ಹೆಮ್ಮೆಯ ಗರಿಯನ್ನು ಮುಡಿಗೇರಿಸಿಕೊಂಡು, ನವಿಲಾಗಿ ನಲಿದಿದೆ. ಭಾರತೀಯ ಕುವರಿ, ಹರಿಯಾಣದ ಮಾನುಷಿ ಛಿಲ್ಲರ್‌ “ವಿಶ್ವ ಸುಂದರಿ’ ಪಟ್ಟಕ್ಕೇರಿ ಮಿಂಚಿದ್ದಾಳೆ. ಮೆಡಿಕಲ್‌ ಓದುವವರು ಪುಸ್ತಕದ ಹುಳುಗಳು, ಅವರಿಗೆ ಓದುವುದು ಮಾತ್ರ ಗೊತ್ತು ಎಂಬ ಭಾವನೆಯನ್ನು ಈ ಸುಂದರಿ ಸುಳ್ಳು ಮಾಡಿದ್ದಾಳೆ. ಇದು ಮೆಡಿಕಲ್‌ ಓದುತ್ತಿರುವ ಹುಡುಗಿಯ ಮಾಡೆಲಿಂಗ್‌ ಕಥೆ…  

Advertisement

ವ್ಯಾಯಾಮದಿಂದ ದೇಹ ಆರೋಗ್ಯವಾಗಿರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರತಿದಿನದ ವ್ಯಾಯಾಮ ಹಾಗೂ ಫಿಟ್‌ನೆಸ್‌ ಸೂತ್ರಗಳ ಜೊತೆಗೆ ತಿನ್ನುವ ಆಹಾರವೂ ಅಷ್ಟೇ ಮುಖ್ಯ ಪಾತ್ರ ವಹಿಸುತ್ತದೆ. ವ್ಯಾಯಾಮ- ಪೌಷ್ಟಿಕ ಆಹಾರದ ಸಮತೂಕದ ಡಯಟ್‌ ಅನ್ನು ಮಾನುಷಿಯ ಫಿಟ್‌ನೆಸ್‌ ಗುರು ನಮಾಮಿ ಅಗರ್ವಾಲ್‌ ಸೂಚಿಸಿದ್ದಾರೆ. ಫಿಟ್‌ನೆಸ್‌ ಕಾಪಾಡಿಕೊಳ್ಳುವುದರ ಬಗ್ಗೆ ಮಾನುಷಿ ಹೀಗೆ ಹೇಳುತ್ತಾರೆ. 

1. ಯಾವುದೇ ಕಾರಣಕ್ಕೂ ಬೆಳಗ್ಗಿನ ತಿಂಡಿಯನ್ನು ಮಿಸ್‌ ಮಾಡಬಾರದು. ತಿಂಡಿ ತಿನ್ನದೇ ಇದ್ರೆ ನಂತರ ಹಸಿವು ಜಾಸ್ತಿಯಾಗಿ, ಹೆಚ್ಚಿಗೆ ಆಹಾರ ಸೇವಿಸುವಂತಾಗಿ ತೂಕ ಹೆಚ್ಚುತ್ತದೆ. 

2. ಚೆನ್ನಾಗಿ ಊಟ ಮಾಡಿ. ಆಗ ಕುರುಕಲು ತಿಂಡಿ ತಿನ್ನಬೇಕು  ಎಂದು  ಅನಿಸುವುದಿಲ್ಲ. ಕುರುಕಲು ತಿಂದರೆ  ಕೊಬ್ಬಿನಾಂಶ ಮತ್ತು ಸಕ್ಕರೆಯ ಅಂಶ ಜಾಸ್ತಿಯಾಗುತ್ತದೆ.

3. ಸಕ್ಕರೆ, ಅದರಲ್ಲೂ ರಿಫೈನ್‌x ಸಕ್ಕರೆಯ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ. 

Advertisement

4. ಪ್ರವಾಸ ಮಾಡುವಾಗ ಆರೋಗ್ಯಕರ ಡಯಟ್‌ನ್ನು ಅನುಸರಿಸಿ. ಸಿಕ್ಕಿದ್ದನ್ನೆಲ್ಲ ತಿನ್ನುವುದು ಒಳ್ಳೆಯದಲ್ಲ. ಗ್ರಿಲ್ಡ್‌ ಚಿಕನ್‌ ಅಥವಾ ಫಿಶ್‌ ತಿನ್ನಬಹುದು. ಅದರ ಜೊತೆಗೆ ಕ್ರೀಮಿ ಸಾಸ್‌ ತಿನ್ನುವುದು ಬೇಡ. ಯಾವಾಗಲೂ ಊಟದ ಜೊತೆಗೆ ಕಡಿಮೆ ಕೊಬ್ಬಿನಾಂಶದ ಸಲಾಡ್‌ ಆರ್ಡರ್‌ ಮಾಡಿ. 

5. ಪ್ರತಿನಿತ್ಯವೂ ಯೋಗಾಭ್ಯಾಸ ಮಾಡಿ. ದೇಹದ ಫಿಟ್‌ನೆಸ್‌ ಮತ್ತು ಸ್ನಾಯುಗಳ ಆರೋಗ್ಯಕ್ಕೆ ಯೋಗಕ್ಕಿಂತ ಉತ್ತಮ ಅಭ್ಯಾಸ ಬೇರೊಂದಿಲ್ಲ. ಯೋಗ ಮಾಡಿದರೆ ಕೇವಲ ಫಿಗರ್‌ ಅಷ್ಟೇ ಅಲ್ಲ, ದೇಹದ ಫ್ಲೆಕ್ಸಿಬಿಲಿಟಿಯೂ ಹೆಚ್ಚುತ್ತದೆ.  

6. ಸಂಪೂರ್ಣ ದೇಹವನ್ನು ಬಾಗಿಸುವಂಥ ವ್ಯಾಯಾಮಗಳನ್ನು ಮಾಡಿ. 

7. ಸ್ಕ್ವಾಟ್‌ (ಮಂಡಿಯನ್ನು ಬಗ್ಗಿಸಿ ಕುಳಿತುಕೊಳ್ಳುವಂತ ಭಂಗಿ)ಅನ್ನು  ಮಹಿಳೆ, ಪುರುಷ ಎಂಬ ಭೇದವಿಲ್ಲದೆ ಎಲ್ಲ ವಯೋಮಾನದವರೂ ತಮ್ಮ ವ್ಯಾಯಾಮದಲ್ಲಿ ಅಳವಡಿಸಿಕೊಳ್ಳಬೇಕು. ಅದು ಕೇವಲ ಕಾಲಿನ ಆರೋಗ್ಯಕ್ಕಷ್ಟೇ ಅಲ್ಲದೆ, ಇಡೀ ದೇಹಕ್ಕೆ ಒಳ್ಳೆಯದು. ದೇಹದ ರಕ್ತ ಸಂಚಲನವನ್ನೂ ಈ ವ್ಯಾಯಾಮ ಸರಾಗಗೊಳಿಸುತ್ತದೆ. ರನ್ನಿಂಗ್‌ ಮತ್ತು ಡ್ಯಾನ್ಸಿಂಗ್‌ ಕೂಡ ದೇಹಕ್ಕೆ ಒಳ್ಳೆಯದು. 

ಮಿಸ್‌ ವರ್ಲ್ಡ್ ಡಯಟ್‌ ಚಾಟ್‌:
1. ಬೆಳಗ್ಗೆ ಎದ್ದ ಕೂಡಲೆ 2-3 ಲೋಟ ಬೆಚ್ಚಗಿನ ನೀರು ( ಲಿಂಬೆ ರಸ ಸೇರಿಸಿ ಕುಡಿದರೆ ಇನ್ನೂ ಉತ್ತಮ)

2. ಬೆಳಗ್ಗಿನ ತಿಂಡಿಗೆ – ಓಟ್‌ಮೀಲ್‌, ವೀಟ್‌ಫ್ಲೇಕ್ಸ್‌, ಅನ್‌ಫ್ಲೇವರ್‌xì ಯೋಗರ್ಟ್‌, ತಾಜಾ ಹಣ್ಣು ಮತ್ತು ಮೊಳಕೆಕಾಳು, 2-3 ಮೊಟ್ಟೆಯ ಬಿಳಿಭಾಗದ ಜೊತೆಗೆ ಅವಕಾಡೊ, ಕ್ಯಾರೆಟ್‌ ಬೀಟ್‌ರೂಟ್‌, ಗೆಣಸು.

3. ಮಿಡ್‌ಮೀಲ್‌- ತೆಂಗಿನನೀರು/ ಎಳನೀರು ಮತ್ತು ತಾಜಾ ಹಣ್ಣುಗಳು

4. ಮಧ್ಯಾಹ್ನದ ಊಟ- ನವಣೆ / ಅನ್ನ/ ಚಪಾತಿ ಜೊತೆಗೆ ಹಸಿ ತರಕಾರಿಗಳು /ಚಿಕನ್‌

5. ಸಂಜೆ ಸ್ನ್ಯಾಕ್ಸ್‌- ಉಪ್ಪು ಹಾಕದ ನೆನೆಸಿದ ಕಾಳು, ಬಾಳೆಹಣ್ಣು, ಅಂಜೂರಹಣ್ಣು ಇತ್ಯಾದಿ ಹಣ್ಣುಗಳು

6. ರಾತ್ರಿ ಊಟ – ಚಿಕನ್‌/ಫಿಶ್‌ (ಗ್ರಿಲ್ಡ್‌/ ರೋಸ್ಟೆಡ್‌) ಜೊತೆಗೆ ಕ್ಯಾರೆಟ್‌, ಬೀಟ್‌ರುಟ್‌, ಮಶ್ರೂಮ್‌, ಬೀನ್ಸ್‌ ಮುಂತಾದ ತರಕಾರಿಗಳಿಂದ ಮಾಡಿದ ಸಲಾಡ್‌. 

ಲೈಫ್ಸ್ಟೈಲ್‌ ಚೇಂಜ್‌:
ಸ್ಪರ್ಧೆಗೂ ಕೆಲವು ದಿನಗಳ ಮುಂಚೆ ಕಠಿಣವಾದ ಡಯಟ್‌ ಮತ್ತು ಫಿಟ್‌ನೆಸ್‌ ಸೂತ್ರಗಳನ್ನು ಮಾನುಷಿ ಅನುಸರಿಸುತ್ತಿದ್ದರು. ಅಷ್ಟೇ ಅಲ್ಲದೆ ತಮ್ಮ ಜೀವನಶೈಲಿಯಲ್ಲೂ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡಿದ್ದರು. ಪ್ರತಿ ರಾತ್ರಿ ಕನಿಷ್ಠ 8 ಗಂಟೆ ನಿದ್ರೆ ಮಾಡುವುದು, ಮಲಗುವ 2 ಗಂಟೆಗೆ ಮುಂಚೆ ಮೊಬೈಲ್‌ ಸ್ವಿಚ್‌ ಆಫ್ ಮಾಡುವುದು, ಪ್ರತಿದಿನ 3 ಲೀಟರ್‌ ನೀರು ಕುಡಿಯುವುದು, ರಾತ್ರಿ ಲಘುವಾದ ಆಹಾರ ಸೇವಿಸುವುದು ಮತ್ತು ಸ್ವಲ್ಪ ಬೇಗ ಊಟ ಮಾಡುವುದು ಇತ್ಯಾದಿ. ತಾಜಾ ತರಕಾರಿ ಮತ್ತು ಹಣ್ಣುಗಳೇ ಅವರ ಡಯಟ್‌ನ ಮುಖ್ಯ ಭಾಗವಾಗಿದ್ದರಿಂದ, ಮಾನುಷಿ ವಾರದಲ್ಲಿ ಐದರಿಂದ ಆರು ಬಾರಿ ವರ್ಕ್‌ಔಟ್‌ ಮಾಡುತ್ತಿದ್ದರು. ಪೌಷ್ಟಿಕಾಂಶಯುಕ್ತ, ಮನೆಯಲ್ಲಿ ಮಾಡಿದ ಆಹಾರಪದಾರ್ಥಗಳನ್ನು ಮಾತ್ರ ಸೇವಿಸುತ್ತಿದ್ದರು.  

ಬ್ಯೂಟಿ ವಿತ್‌ ಬ್ರೈನ್‌
ಮಾಡೆಲಿಂಗ್‌ನಂಥ ಕ್ಷೇತ್ರದಲ್ಲಿ ಮಿಂಚುವವರು ಕೇವಲ ಸುಂದರಿಯರು, ಅವರಿಗೆ  ಬುದ್ಧಿವಂತಿಕೆ  ಕಡಿಮೆ ಎಂದು ಹಲವರು ತಪ್ಪು ತಿಳಿದಿದ್ದಾರೆ. ಮಿಸ್‌ವರ್ಲ್ಡ್ನಂಥ ಸ್ಪರ್ಧೆಗಳಲ್ಲಿ ಗೆಲ್ಲಲು ಸೌಂದರ್ಯದ ಜೊತೆ ಜೊತೆಗೇ ಬುದ್ಧಿವಂತಿಕೆ, ಆತ್ಮವಿಶ್ವಾಸ, ಚಾರ್ಮ್ ಕೂಡ ಮುಖ್ಯ. ಹರಿಯಾಣದ ಒಂದು ಸಣ್ಣ ಪಟ್ಟಣದಿಂದ ಬಂದ ಮಾನುಷಿ ಕೇವಲ ಸೌಂದರ್ಯದಿಂದ ಈ ಕಿರೀಟ ಗಿಟ್ಟಿಸಿಕೊಂಡಿಲ್ಲ. ಈಕೆ ಸುಂದರಿಯಷ್ಟೇ ಅಲ್ಲ, ಜಾಣೆಯೂ ಹೌದು. ಎಂಬಿಬಿಎಸ್‌ ಓದುತ್ತಿದ್ದ ಮಾನುಷಿ ಮಿಸ್‌ ವರ್ಲ್ಡ್ ಸ್ಪರ್ಧೆಗೋಸ್ಕರವೇ ತಮ್ಮ ವಿದ್ಯಾಭ್ಯಾಸದಿಂದ ಒಂದು ವರ್ಷ ಬ್ರೇಕ್‌ ತೆಗೆದುಕೊಂಡಿದ್ದಾರೆ. ಮೆಡಿಕಲ್‌ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಳ್ಳುವುದೇ ಹಲವರ ಕನಸು. ಅಂಥದ್ದರಲ್ಲಿ ಒಂದು ವರ್ಷ ಓದು ನಿಲ್ಲಿಸಿ, ಇನ್ನೊಂದು ಕನಸಿನ ಬೆನ್ನತ್ತುವುದು ಎಲ್ಲರಿಂದಲೂ ಸಾಧ್ಯವಿಲ್ಲ.  

ಮಾನುಷಿ ಮಾತು:
“ನಾನು ಚೆನ್ನಾಗಿ ಓದಿ ಡಾಕ್ಟರ್‌ ಆಗಬೇಕೆಂದುಕೊಂಡಿದ್ದವಳು. ಆದರೆ, ಸೌಂದರ್ಯ ಸ್ಪರ್ಧೆಯಲ್ಲಿ ಗೆಲ್ಲಬೇಕು, ಮಿಸ್‌ ವರ್ಲ್ಡ್ ಆಗಬೇಕು ಎಂಬ ಆಸೆ ಯಾರಿಗಿರುವುದಿಲ್ಲ ಹೇಳಿ? ಎಲ್ಲ ಹುಡುಗಿಯರಂತೆ ನನಗೂ ಜೀವನದಲ್ಲಿ ಒಮ್ಮೆಯಾದರೂ ಬ್ಯೂಟಿ ಪೇಜೆಂಟ್‌ಗಳಲ್ಲಿ ಕಾಣಿಸಿಕೊಳ್ಳುವ ಬಯಕೆಯಿತ್ತು. ಹಾಗಾಗಿಯೇ ಆಡಿಷನ್‌ಗಳಲ್ಲಿ ಭಾಗವಹಿಸಲು ನಿರ್ಧರಿಸಿದೆ. ಅಪ್ಪ-ಅಮ್ಮ ಕೂಡ ತುಂಬಾ ಪ್ರೋತ್ಸಾಹ ನೀಡಿದರು.   

ಆದರೆ, ನನ್ನ ನಿರ್ಧಾರ ಅಷ್ಟು ಸುಲಭದ್ದಾಗಿರಲಿಲ್ಲ. ಮಿಸ್‌ ಇಂಡಿಯಾ ಆಡಿಷನ್‌ನಲ್ಲಿ ಆಯ್ಕೆಯಾದ ಮೇಲೆ ನನ್ನ ಕಾಲೇಜು ಜೀವನ ಸಂಪೂರ್ಣವಾಗಿ ಬದಲಾಯ್ತು. ಹಾಸ್ಟೆಲ್‌ನಲ್ಲಿ ಉಳಿದ ಗೆಳತಿಯರು ನಿದ್ದೆ ಮಾಡುತ್ತಿದ್ದಾಗ ನಾನು ಎದ್ದು ವಕೌìಟ್‌ಗೆ ಹೋಗುತ್ತಿದ್ದೆ. ಮತ್ತೆ ಕ್ಲಾಸ್‌ ಶುರುವಾಗುವ ಮುನ್ನ ವಾಪಸಾಗಬೇಕಿತ್ತು. ವಕೌìಟ್‌, ಆಡಿಷನ್‌ ಅಂತೆಲ್ಲ ಹೆಚ್ಚು ಕ್ಲಾಸ್‌ಗಳು ಮಿಸ್‌ ಆಗದಂತೆ ನೋಡಿಕೊಳ್ಳುತ್ತಿದ್ದೆ. ತರಗತಿ ಮುಗಿಸಿ ಬಂದು ಗೆಳತಿಯರು ಓದಲು ಕುಳಿತರೆ, ನಾನು ಮತ್ತೆ ವಕೌìಟ್‌ಗೆ ಹೊರಡುತ್ತಿದ್ದೆ.  ರಾತ್ರಿ ಕುಳಿತು ತರಗತಿಯ ಪಾಠಗಳನ್ನು ಓದಿಕೊಳ್ಳುತ್ತಿದ್ದೆ. ಮೆಡಿಕಲ್‌ ವಿದ್ಯಾರ್ಥಿಗಳು ದಿನನಿತ್ಯ ಓದಲೇಬೇಕು. ಪರೀಕ್ಷೆಗೆ ವಾರ-ತಿಂಗಳು ಇರುವಾಗ ಒಮ್ಮೆಲೆ ಎಲ್ಲವನ್ನೂ ಓದಲು ನಮಗೆ ಸಾಧ್ಯವಿಲ್ಲ. ನನ್ನ ಹಾಸ್ಟೆಲ್‌ನಲ್ಲಿ ಹಲವರು ನನ್ನನ್ನು ಕ್ರೇಜಿ ಎಂದೇ ಭಾವಿಸಿದ್ದರು. ನನ್ನ ಪ್ರಯತ್ನಗಳೆಲ್ಲ ಅವರಿಗೆ ತಮಾಷೆಯಂತೆ ಕಾಣಿಸುತ್ತಿತ್ತು. ಮಿಸ್‌ ಇಂಡಿಯಾ ಸ್ಪರ್ಧೆ ಗೆದ್ದ ಮೇಲೆ ಕಾಲೇಜಿನಿಂದ ಒಂದು ವರ್ಷ  ಬ್ರೇಕ್‌ ತೆಗೆದುಕೊಳ್ಳಲು ನಿರ್ಧರಿಸಿದೆ. 

“ಮಿಸ್‌ ವರ್ಲ್ಡ್ನಂಥ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುವುದು ಅಷ್ಟು ಸುಲಭದ ವಿಷಯವಲ್ಲ. ಮಾನುಷಿಯಲ್ಲಿ ಈ ಸ್ಪರ್ಧೆಯನ್ನು ಗೆಲ್ಲುವ ಎಲ್ಲ ಗುಣಗಳೂ ಇದ್ದುದನ್ನು ಗಮನಿಸಿದ್ದೆ. ಆಕೆ ಸುಂದರಿಯಷ್ಟೇ ಅಲ್ಲ, ಬಹಳ ಬುದ್ಧಿವಂತೆ ಕೂಡ ಹೌದು. ಸ್ವಲ್ಪ ಮಾರ್ಗದರ್ಶನ ನೀಡಿದರೆ ಅವಳು ಗೆಲ್ಲುತ್ತಾಳೆ ಎನ್ನುವುದು ಖಚಿತವಾಗಿತ್ತು. ಆಕೆ ಹೇಗೆ ಕಾಣಿಸಬೇಕು? ಏನು ಧರಿಸಬೇಕು? ಫೋಟೋ ಶೂಟ್‌, ಕೂದಲು, ಮೇಕ್‌ಅಪ್‌, ಫಿನಾಲೆಯಲ್ಲಿ ಹೇಗೆ ಕಾಣಿಸಬೇಕು…ಹೀಗೆ ಆಕೆಯ ಪ್ರತಿ ಹೆಜ್ಜೆಯ ಬಗ್ಗೆ ತಿಂಗಳುಗಟ್ಟಲೆ ಟ್ರೈನಿಂಗ್‌ ನೀಡಿದೆವು. ಅವಳಷ್ಟೇ ಅಲ್ಲ, ಈ ಸ್ಪರ್ಧೆ ಗೆಲ್ಲುವುದು ಇಡೀ ದೇಶದ ಕನಸಾಗಿತ್ತು. ಅವಳನ್ನು ಟ್ರೇನ್‌ ಮಾಡಿದ್ದಕ್ಕೆ ಹೆಮ್ಮೆಯಿದೆ’
– ಫ್ಯಾಶನ್‌ ಡೈರೆಕ್ಟರ್‌ ರಾಕಿ ಸ್ಟಾರ್‌ (ಮಾನುಷಿ ಚಿಲ್ಲರ್‌ ಮೆಂಟರ್‌)

ಅಮ್ಮನೇ ಗ್ರೇಟ್‌ ಅಂದ ಮಾನುಷಿ: 
ಸೌಂದರ್ಯವೊಂದೇ “ವಿಶ್ವಸುಂದರಿ’ ಸ್ಪರ್ಧೆಯ ಗೆಲುವಿನ ಮಾನದಂಡವಲ್ಲ. ಅಂತಿಮವಾಗಿ ಪ್ರಶ್ನೋತ್ತರ ಸುತ್ತು ಇರುವುದು ಗೊತ್ತೇ ಇದೆ. “ಜಗತ್ತಿನಲ್ಲಿ ಯಾವ ಉದ್ಯೋಗಕ್ಕೆ ಅತಿ ಹೆಚ್ಚು ವೇತನ ನೀಡಬೇಕು ಮತ್ತು ಯಾಕೆ?’ ಎಂಬುದು ಮಾನುಷಿಗೆ ಕೇಳಲಾದ ಪ್ರಶ್ನೆ. ಅದಕ್ಕೆ ಆಕೆ, “ನನ್ನ ಪ್ರಕಾರ ತಾಯಿ ಅತ್ಯಂತ ಗೌರವಾನ್ವಿತ ವ್ಯಕ್ತಿ. ನನಗೆ ನನ್ನ ತಾಯಿಯೇ ಸ್ಫೂರ್ತಿ. ತಾಯಿಗೇ ಅತಿ ಹೆಚ್ಚು ಗೌರವ ಸಿಗಬೇಕು’ ಎಂದು ಉತ್ತರಿಸಿದಳು. ಸ್ಪರ್ಧೆ ಗೆಲ್ಲಲು ಆ ಉತ್ತರವೂ ಕಾರಣವಾಯ್ತು ಎನ್ನಬಹುದು. ನಯಾಪೈಸೆ ಸಂಬಳವನ್ನು ಪಡೆಯದೆ, ಇಡೀ ಜೀವನವನ್ನು ಕುಟುಂಬಕ್ಕಾಗಿ ಮುಡಿಪಾಗಿಡುವ ಅಮ್ಮನನ್ನು “ವಿಶ್ವಸುಂದರಿ’ ವೇದಿಕೆಯಲ್ಲಿ ನೆನೆದು, ಜಗತ್ತಿನ ಎಲ್ಲ ತಾಯಂದಿರಿಗೆ ಅವರು ಗೌರವವನ್ನು ಅರ್ಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next