ಪನಾಮ ಸಿಟಿ : ಮಿಸ್ ಪನಾಮ ಸಂಸ್ಥೆ ಈ ಬಾರಿಯಿಂದ ಮಿಸ್ ಯೂನಿವರ್ಸ್ (ಭುವನ ಸುಂದರಿ) ಆಯ್ಕೆ ಮಾಡುವ ಸ್ಪರ್ಧೆಗೆ ಎಲ್ಲಾ ಕಾನೂನು ಮತ್ತು ವೈದ್ಯಕೀಯ ಪ್ರಕ್ರಿಯಗಳನ್ನು ಪೂರೈಸಿದ ತೃತೀಯ ಲಿಂಗಿಗಳಿಗೂ ಕೂಡ ಅವಕಾಶವನ್ನು ಮಾಡಿಕೊಡಲಾಗಿದೆ ಎಂದು ಘೋಷಿಸಿದೆ.
ಮಿಸ್ ಯೂನಿವರ್ಸ್ ಸ್ಪರ್ಧೆಗೆ ದೇಶದ ಪ್ರತಿನಿಧಿಯನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಹೊಂದಿರುವ ಈ ಸ್ಪರ್ಧೆಯು, ಹಲವಾರು ಸುತ್ತಿನ ಮಾತುಕತೆಗಳ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಓದಿ : ಸಿ.ಡಿ ಪ್ರಕರಣ: ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ
ದೇಶದಲ್ಲಿ ಅಧಿಕೃತವಾಗಿ ಹಾಗೂ ಕಾನೂನು ಬದ್ಧವಾಗಿ ಗುರುತಿಸಲ್ಪಟ್ಟ ಮಹಿಳೆಗೆ ಮಿಸ್ ಪನಾಮ ಅನುಮತಿಸುತ್ತದೆ. ಆದರೇ, ಈ ಬಾರಿ ಹೊಸ ನಿರ್ಧಾರವನ್ನು ಕೈಗೊಂಡಿದ್ದು, ಕಾನೂನೀನ್ವಯ ವೈದ್ಯಕೀಯ ಪ್ರಕ್ರಿಯೆಗಳನ್ನು ಪೂರೈಸಿದ ತೃತೀಯ ಲಿಂಗಿಗಳಿಗೂ ಕೂಡ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಅವಕಾಶವನ್ನು ನೀಡಿದೆ.
“ಇದು ಸಂಸ್ಥೆಯ ವಿನೂತನ ನಡೆಯಾಗಿದೆ. ತೃತೀಯ ಲಿಂಗಿಗಳಲ್ಲಿಯೂ ಕೂಡ ಎಷ್ಟೋ ಜನರು ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದು ಬಯಸುತ್ತಾರೆ. ಅಂತವರಿಗೆ ಕಾನೂನು ಮತ್ತು ಒಂದಿಷ್ಟು ನಿರ್ಬಂಧಗಳೊಂದಿಗೆ ಅವಕಾಶವನ್ನು ಒದಗಿಸಿಕೊಡುತ್ತಿದ್ದೇವೆ ಎಂದು ಸಂಸ್ಥೆಯ ಅಧ್ಯಕ್ಷ ಸೀಸರ್ ಅನೆಲ್ ರೊಡ್ರಿಗಸ್ ಎ ಎಫ್ ಪಿ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ತೃತೀಯ ಲಿಂಗಿಗಳು ಅವಕಾಶ ವಂಚಿತರಾಗಿರುವುದು ಮತ್ತು ಅವರ ಸಮಸ್ಯೆಗಳ ಬಗ್ಗೆ ನಾವು ಒಂದು ಹಂತದ ಪರಿಶೀಲನೆ ಮಾಡಿದ್ದೇವೆ ಎಂದು ಕೂಡ ಅವರು ತಿಳಿಸಿದ್ದಾರೆ.
2018 ರ ಪನಾಮ ಸಂಸ್ಥೆಯು ಆಯೋಜಿಸಿದ್ದ ಪನಾಮ ಸ್ಪರ್ಧೆಯಲ್ಲಿ, ಕನಿಷ್ಠ 10 ಮಂದಿ ತೃತೀಯ ಲಿಂಗಿಗಳಿಗೆ ಅವಕಾಶ ನೀಡಬೇಕು ಎಂದು ಘೋಷಿಸಿದ್ದರು.
ಸದ್ಯ, ಈ ಬಾರಿಯಿಂದ ಸ್ಪರ್ಧೆಗೆ ತೃತೀಯ ಲಿಂಗಿಗಳಿಗೆ ಅವಕಾಶವನ್ನು ಒದಗಿಸಿಕೊಡುತ್ತಿರವುದರೊಂದಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಕೂಡ ಪಾಲಿಸಬೇಕಾಗುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಓದಿ : ಐದು ಟೆಲಿಕಾಂ ವಲಯದಲ್ಲಿ ಸ್ಪೆಕ್ಟ್ರಮ್ ನನ್ನು ಖರೀದಿಸಿದ ವೊಡಾಫೋನ್ ಐಡಿಯಾ..!