Advertisement

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

08:53 PM Dec 21, 2024 | Team Udayavani |

ಹೈದರಾಬಾದ್: ‘ಹೈದರಾಬಾದ್ ಚಿತ್ರಮಂದಿರದ ಹೊರಗೆ ನಡೆದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣದಲ್ಲಿ “ಸಾಕಷ್ಟು ತಪ್ಪು ಮಾಹಿತಿ” ಹರಡಲಾಗುತ್ತಿದೆ, ನನ್ನ ವಿರುದ್ಧದ ಆರೋಪಗಳು ಅವಮಾನಕರ” ಎಂದು ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

Advertisement

ಶನಿವಾರ(ಡಿ21) ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸೂಪರ್‌ಸ್ಟಾರ್ ”ನಾನು ಯಾರನ್ನೂ, ಯಾವುದೇ ಇಲಾಖೆ ಅಥವಾ ರಾಜಕೀಯ ಮುಖಂಡರನ್ನು ದೂಷಿಸಲು ಪ್ರಯತ್ನಿಸುತ್ತಿಲ್ಲ.ಇದು ಅವಮಾನಕರ ಮತ್ತು ಚಾರಿತ್ರ್ಯ ಹರಣದಂತೆ ಭಾಸವಾಗುತ್ತಿದೆ. ದಯವಿಟ್ಟು ನನ್ನನ್ನು ನಿರ್ಣಯಿಸಬೇಡಿ, ಏನಾಗಿದೆ ಅದಕ್ಕೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದರು.

”ಪೊಲೀಸ್ ಅನುಮತಿ ನಿರಾಕರಿಸಲಾದ ಬಳಿಕ ಅಲ್ಲೂ ಅರ್ಜುನ್ ಚಿತ್ರ ಮಂದಿರಕ್ಕೆ ಭೇಟಿ ನೀಡಿದುದೇ ಅವಘಡಕ್ಕೆ ಕಾರಣ” ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ವಿಧಾನಸಭಾ ಕಲಾಪದಲ್ಲಿ ಹೇಳಿಕೆ ನೀಡಿದ ಬಳಿಕ ಅಲ್ಲೂ ಅರ್ಜುನ್ ಈ ಪ್ರತಿಕ್ರಿಯೆ ನೀಡಿದ್ದಾರೆ.

“ನನಗೆ ಅದೇ ವಯಸ್ಸಿನ ಮಗುವಿದೆ, ನಾನು ನೋವು ಅನುಭವಿಸುವುದಿಲ್ಲವೇ, ಯಾರನ್ನೂ ದೂಷಿಸಬೇಕಾಗಿಲ್ಲ” ಎಂದು ಅಲ್ಲೂ ಅರ್ಜುನ್ ನೋವಿನ ನುಡಿಗಳನ್ನಾಡಿದ್ದಾರೆ.

ಡಿಸೆಂಬರ್ 4 ರಂದು ಹೈದರಾಬಾದ್ ನ ಸಂಧ್ಯಾ ಚಿತ್ರಮಂದಿರದಲ್ಲಿ ‘ಪುಷ್ಪ 2’ ಚಿತ್ರ ಪ್ರದರ್ಶನದ ವೇಳೆ ಅಲ್ಲು ಅರ್ಜುನ್ ಉಪಸ್ಥಿತಿಯ ವೇಳೆ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿ 35 ವರ್ಷದ ಮಹಿಳೆ ಸಾವನ್ನಪ್ಪಿದ್ದರು ಮತ್ತು ಅವರ ಎಂಟು ವರ್ಷದ ಮಗ ಗಂಭೀರವಾಗಿ ಗಾಯಗೊಂಡಿದ್ದರು.

Advertisement

ಅಲ್ಲು ಅರ್ಜುನ್ ಕಾಲು ಕಳೆದುಕೊಂಡಿದ್ದಾರಾ?

”ಕಾಲ್ತುಳಿತದ ಸಂತ್ರಸ್ತರನ್ನು ನಿರ್ಲಕ್ಷಿಸಿ ನಟ ಅಲ್ಲು ಅರ್ಜುನ್ ಪರ ನಿಂತಿದ್ದಕ್ಕಾಗಿ ತೆಲುಗು ಚಿತ್ರರಂಗದ ವಿರುದ್ಧ ಆಕ್ರೋಶ ಹೊರ ಹಾಕಿದ ಮುಖ್ಯಮಂತ್ರಿ ರೆಡ್ಡಿ, ಅಲ್ಲು ಅರ್ಜುನ್ ಥಿಯೇಟರ್‌ನಲ್ಲಿದ್ದಾಗ ಆಕೆಯ ಸಾವಿನ ಬಗ್ಗೆ ತಿಳಿಸಿದರೂ ಕಾನೂನು ಮತ್ತು ಸುವ್ಯವಸ್ಥೆ ಅಥವಾ ಮೃತ ಸಂತ್ರಸ್ತೆಯ ಬಗ್ಗೆ ಕಾಳಜಿ ತೋರಿಸಲಿಲ್ಲ ಎಂದರು.

“ತಮ್ಮ ಮಗುವಿನ ಆಸೆಯನ್ನು ಪೂರೈಸಲು ತುಂಬಾ ತ್ಯಾಗ ಮಾಡಿದ ಕುಟುಂಬ ಇದು. ಸಹಾನುಭೂತಿ ಅಥವಾ ಅವರೊಂದಿಗೆ ನಿಲ್ಲುವ ಬದಲು, ಚಲನಚಿತ್ರ ರಂಗದವರು ನಟನ ಹಿಂದೆ ಹೋಗಲು ಆಯ್ಕೆ ಮಾಡಿಕೊಂಡರು. ಅಲ್ಲು ಅರ್ಜುನ್ ಕಾಲು ಕಳೆದುಕೊಂಡಿದ್ದಾರಾ ಅಥವಾ ದೃಷ್ಟಿ ಕಳೆದುಕೊಂಡಿದ್ದಾರಾ? ಅವರ ಕಿಡ್ನಿಗಳಿಗೆ ತೊಂದರೆಯಾಗಿದೆಯೇ? ಇದು ತೆಲುಗು ಚಿತ್ರರಂಗದ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆಯೇ?” ಎಂದು ರೇವಂತ್ ರೆಡ್ಡಿ ಕಿಡಿ ಕಾರಿದ್ದರು.

ಇನ್ನು ಹಿಟ್ ಆಗಲಿದೆ!

ತೆಲಂಗಾಣ ಶಾಸಕ ಅಕ್ಬರುದ್ದೀನ್ ಓವೈಸಿ ಅವರು ಅಲ್ಲೂ ಅರ್ಜುನ್ ಅವರ ಹೆಸರು ಹೇಳದೆ ‘ಪುಷ್ಪ 2’ ಪ್ರೀಮಿಯರ್‌ನಲ್ಲಿ ಮಹಿಳೆಯೊಬ್ಬರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಬಳಿಕ, ಚಿತ್ರವು ಇನ್ನು ಹಿಟ್ ಆಗಲಿದೆ ಎಂದು ನಟ ಹೇಳಿದ್ದರು” ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next