Advertisement

Misbehavior: ಅನುಚಿತ ವರ್ತನೆ; ಕೇಂದ್ರ ವಿ.ವಿ. ಅಧ್ಯಾಪಕನ ಅಮಾನತು

07:58 PM May 16, 2024 | Team Udayavani |

ಕಾಸರಗೋಡು: ಪರಶ್ಶಿನ ಕಡವಿನ ವಾಟರ್‌ ತೀಂ ಪಾರ್ಕ್‌ನಲ್ಲಿ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಪೆರಿಯಾದಲ್ಲಿರುವ ಕೇರಳ ಕೇಂದ್ರ ವಿ.ವಿ. ಯ ಇಂಗ್ಲೀಷ್‌ ಆ್ಯಂಡ್‌ ಕಂಪಾರಟಿವ್‌ ಲಿಟಿರೇಚರ್‌ ವಿಭಾಗದ ಅಸಿಸ್ಟೆಂಟ್‌ ಪ್ರೊಫೆಸರ್‌ ಡಾ|ಬಿ.ಇಫ್ತಿಕರ್‌ ಅಹಮ್ಮದ್‌(51)ನನ್ನು ವಿದ್ಯಾಲಯದ ಉಸ್ತುವಾರಿ ಉಪಕುಲಪತಿ ಪ್ರೊ|ಕೆ.ಸಿ.ಬೈಜು ಅಮಾನತುಗೊಳಿಸಿದ್ದಾರೆ.

Advertisement

22 ರ ಹರೆಯದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಸಂಬಂಧ ತಳಿಪರಂಬ ಪೊಲೀಸರು ಈತನ ವಿರುದ್ಧ ಕೇಸು ದಾಖಲಿಸಿ ಬಂಧಿಸಿದ್ದರು. ಈ ಅಧ್ಯಾಪಕನನ್ನು ಈ ಹಿಂದೆ ಎರಡು ಬಾರಿ ಅಮಾನತುಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next