Advertisement

‘Mirzapurʼ ಸೀಸನ್‌ -3 ಅನೌನ್ಸ್:‌ ʼಗುಡ್ಡು ಭಯ್ಯಾʼನನ್ನು‌ ನೋಡಿ ಥ್ರಿಲ್‌ ಆದ ಫ್ಯಾನ್ಸ್

12:53 PM Mar 20, 2024 | Team Udayavani |

ಮುಂಬಯಿ: ಭಾರತದ ವೆಬ್‌ ಸಿರೀಸ್‌ ಲೋಕದಲ್ಲಿ ಹೊಸ ಬಗೆಯ ಸಂಚಲನ ಸೃಷ್ಟಿಸಿದ ʼಮಿರ್ಜಾಪುರ್ʼ ಸೀಸನ್‌ -3 ಶೀಘ್ರದಲ್ಲಿ ಬರುವುದಾಗಿ ಅಮೇಜಾನ್‌ ಪ್ರೈಮ್‌ ಅನೌನ್ಸ್‌ ಮಾಡಿದೆ.

Advertisement

ಮುಂಬಯಿಯಲ್ಲಿ ನಡೆದ ಅಮೇಜಾನ್‌ ಪ್ರೈಮ್‌ ಕಾರ್ಯಕ್ರಮದಲ್ಲಿ ಶೀಘ್ರದಲ್ಲಿ ಓಟಿಟಿಗೆ ಬರಲಿರುವ ವೆಬ್‌ ಸಿರೀಸ್‌ ಹಾಗೂ ಶೋಗಳನ್ನು ಅನೌನ್ಸ್ ಮಾಡಲಾಗಿದೆ.

2018 ರಲ್ಲಿ ʼಮಿರ್ಜಾಪುರ್ʼ ಮೊದಲ ಸೀಸನ್‌ ಬಂದಿತ್ತು. ಆರಂಭದಿಂದಲೇ ಭರ್ಜರಿ ವೀಕ್ಷಣೆ ಕಂಡಿದ್ದ ʼಮೀರ್ಜಾಪುರ್‌ʼ ಅಪರಾಧ ಜಗತ್ತಿನ ಭೀಕರತೆಯನ್ನು ತೆರದಿಟ್ಟಿತ್ತು. ಅಲಿ ಫಜಲ್ ಅವರ ʼಗುಡ್ಡು ಭಯ್ಯಾʼ ಹಾಗೂ ಪಂಕಜ್‌ ತ್ರಿಪಾಠಿ ಅವರ ʼಕಾಲೀನ್ ಭಯ್ಯಾʼ ಪಾತ್ರ ಅಪಾರ ಮಂದಿಯ ಗಮನ ಸೆಳೆದಿತ್ತು. ಈ ಪಾತ್ರದ ಬಳಿಕ ಅವರ ಅಭಿನಯಕ್ಕೆ ಬಹುತೇಕರು ಫಿದಾ ಆಗಿದ್ದರು. ಮೊದಲ ಸೀಸನ್‌ ಬಳಿಕ ಎರಡನೇ ಸೀಸನ್‌ ಗೆ ಬೇಡಿಕೆ ಹೆಚ್ಚಾಗಿತ್ತು. 2020 ರಲ್ಲಿ ಎರಡನೇ ಸೀಸನ್‌ ಬಂದಿತ್ತು. ಇದಾದ ಬಳಿಕ ನಾಲ್ಕು ವರ್ಷದ ಬಳಿಕ ಇದೀಗ ಮೂರೆನೇ ಸೀಸನ್‌ ಶೀಘ್ರದಲ್ಲಿ ಬರಲಿದೆ ಎಂದು ಅಮೇಜಾನ್‌ ಪ್ರೈಮ್‌ ಅನೌನ್ಸ್‌ ಮಾಡಿದೆ.

ಇದನ್ನೂ ಓದಿ: Kanguva Teaser ರಿಲೀಸ್: ಯುದ್ಧರಂಗದಲ್ಲಿ ಗಮನ ಸೆಳೆದ ಭಯಾನಕ ದೃಶ್ಯ ವೈಭವ

ಅನೌನ್ಸ್‌ ಮೆಂಟ್‌ ಟೀಸರ್‌ ನಲ್ಲಿ ಪಂಕಜ್‌ ತ್ರಿಪಾಠಿ, ಅಲಿ ಫಜಲ್‌, ವಿಜಯ್‌ ವರ್ಮಾ ಕಾಣಿಸಿಕೊಂಡಿದ್ದಾರೆ. ಕ್ರೈಮ್‌ ಲೋಕದ ಹೊಸ ಅಧ್ಯಾಯವನ್ನು ʼಮೀರ್ಜಾಪುರ್-3‌ʼ ಹೇಳಲಿದೆ.

Advertisement

ಗಲಭೆ ನಡೆದ ಸನ್ನಿವೇಶದ ಫೋಟೋವೊಂದನ್ನು ಪೋಸ್ಟರ್‌ ಆಗಿ ಹಂಚಿಕೊಳ್ಳಲಾಗಿದೆ.

ಪಂಕಜ್ ತ್ರಿಪಾಠಿ ಅಲಿ ಫಜಲ್, ಶ್ವೇತಾ ತ್ರಿಪಾ, ರಸಿಕ ದುಗಲ್, ವಿಜಯ್‌ ವರ್ಮಾ, ಹರ್ಷಿತಾ ಗೌರ್‌, ಅಂಜಮನ್‌ ಶರ್ಮಾ  ಮುಂತಾದವರು ಈ ಸೀಸನ್‌ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲಿ ಸೀಸನ್‌ -3 ಬರಲಿದೆ ಎಂದು ಪ್ರೈಮ್‌ ಹೇಳಿದೆ.

ʼಮೀರ್ಜಾಪುರ್‌ -3ʼ ಅನೌನ್ಸ್‌ ಆದ ಬಳಿಕ ʼಗುಡ್ಡು ಭಯ್ಯಾʼ ನಿಗೆ ಸೋಶಿಯಲ್‌ ಮೀಡಿಯಾದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ.

 

Advertisement

Udayavani is now on Telegram. Click here to join our channel and stay updated with the latest news.

Next