Advertisement

ಮೀರಾರೋಡ್‌ ಶ್ರೀ ಶನೈಶ್ಚರ ಸೇವಾ ಟ್ರಸ್ಟ್‌:ವಾರ್ಷಿಕ ಮಹಾಪೂಜೆ

03:55 PM Feb 13, 2018 | Team Udayavani |

ಮುಂಬಯಿ: ಮೀರಾರೋಡ್‌ ಪೂರ್ವದ ನ್ಯೂ ಪ್ಲೆಸೆಂಟ್‌ ಪಾರ್ಕ್‌ ಮೀರಾಧಾಮ್‌ ಸೊಸೈಟಿಯಲ್ಲಿರುವ ಶ್ರೀ ಶನೀಶ್ವರ ಸೇವಾ ಚಾರಿಟೇಬಲ್‌ ಟ್ರಸ್ಟ್‌ ನ ಶ್ರೀ ಶನೈಶ್ಚರ ದೇವರ ಸನ್ನಿಧಾನದಲ್ಲಿ ಫೆ. 10 ರಂದು 14 ನೇ ವಾರ್ಷಿಕ ಶ್ರೀ ಶನಿಮಹಾಪೂಜೆಯು ಬೊರಿವಲಿ ಪೂರ್ವ ಸಾವರಾ³ಡಾದ ಶ್ರೀ ಶನಿಮಂದಿರದ ಪ್ರಧಾನ ಅರ್ಚಕ ಪೆರ್ಡೂರು ವಿಷ್ಣುಮೂರ್ತಿ ಅಡಿಗ ಅವರ ಪೌರೋಹಿತ್ಯದಲ್ಲಿ ಹಾಗೂ ಮಂದಿರದ ಸರ್ವ ಸದಸ್ಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 6 ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ, ಗಣಹೋಮ, ಬೆಳಗ್ಗೆ 9 ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ, ಮಧ್ಯಾಹ್ನ 12 ರಿಂದ ಶ್ರೀ ಶನಿದೇವರ ಕಲಶ ಪ್ರತಿಷ್ಠಾಪನೆ, ಮಂಡಳಿಯ ಸದಸ್ಯರಿಂದ ಹಾಗೂ ಆಹ್ವಾನಿತ ಸದಸ್ಯರಿಂದ ಶನಿದೇವರ ಸಂಪೂರ್ಣ ಶನಿಗ್ರಂಥ ಪಾರಾಯಣ ನೆರವೇರಿತು. ಪ್ರಥಮ ವಾಚಕರಾಗಿ ಅಚ್ಯುತ ಕೋಟ್ಯಾನ್‌, ಪ್ರಥಮ ಅರ್ಧದಾರಿಯಾಗಿ ಪುರಂದರ ಶ್ರೀಯಾನ್‌ ಸಹಕರಿಸಿದರು.

ವಾಚಕರಾಗಿ ನಾಗೇಶ್‌ ಕರ್ಕೇರ, ಉಷಾ ಶೆಟ್ಟಿಗಾರ್‌, ಗೋಪಾಲ್‌ ದೇವಾಡಿಗ, ವಸಂತಿ ಶೆಟ್ಟಿ, ಸದಾಶಿವ ಪುತ್ರನ್‌, ಅನಿಲ್‌ ಕುಕ್ಯಾನ್‌ ಹಾಗೂ ಅರ್ಥದಾರಿಗಳಾಗಿ ಕೇಶವ ಕಾಂಚನ್‌, ಬಾಲಚಂದ್ರ ಅವರು ಸಹಕರಿಸಿದರು. ಆನಂತರ  ಸದಸ್ಯರಿಂದ ಭಜನೆ ಮತ್ತು ಸಂಕೀರ್ತನೆ, ಸಂಜೆ 5 ರಿಂದ ರಂಗಪೂಜೆ, ಸಂಕಲ್ಪ ವಿಧಿ, ಗುರುಪೂಜೆ, ಶ್ರೀ ಶನಿದೇವರಿಗೆ ಮಹಾಮಂಗಳಾರತಿ, ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿತ್ತು. 

ರಾತ್ರಿ 7 ರಿಂದ ಕಟೀಲು ಸದಾನಂದ ಶೆಟ್ಟಿ ಇವರ ನಿರ್ದೇಶನದಲ್ಲಿ ಶ್ರೀ ಶನೀಶ್ವರ ಕೃಪಾಪೋಷಿತ ಮಕ್ಕಳ ಮೇಳ ಮೀರಾರೋಡ್‌ ಮತ್ತು ಶ್ರೀ ಭಾÅಮರಿ ಯಕ್ಷನೃತ್ಯ ಕಲಾನಿಲಯ ಮೀರಾರೋಡ್‌ ಇದರ ಬಾಲ ಪ್ರತಿಭೆಗಳಿಂದ ಕೋಟಿ-ಚೆನ್ನಯ ಯಕ್ಷಗಾನ ಪ್ರದರ್ಶನಗೊಂಡಿತು. 

ಸಮ್ಮಾನ
ಇದೇ ಸಂದರ್ಭದಲ್ಲಿ ಮಂದಿರದ ಸದಸ್ಯರುಗಳಾದ ಸುರೇಶ್‌ ಕೋಟ್ಯಾನ್‌, ರಾಧಾ ಕೋಟ್ಯಾನ್‌ ದಂಪತಿ, ದೇವರಾಜ್‌ ಪೂಜಾರಿ, ಲೀಲಾ ಪೂಜಾರಿ ದಂಪತಿ ಹಾಗೂ ಯಕ್ಷಗಾನ ನಿರ್ದೇಶಕ ಕಟೀಲು ಸದಾನಂದ ಶೆಟ್ಟಿ ಮತ್ತು 14 ನೇ ವಾರ್ಷಿಕ ಶ್ರೀ ಶನಿಮಹಾಪೂಜೆಗೆ ನಿಸ್ವಾರ್ಥವಾಗಿ ಸೇವೆಗೈದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಮಂಟಪ, ನಾಗದೇವರ ಮಂಟಪ, ಗಣಪತಿ ಮಂಟಪ, ಹನುಮಾನ್‌ ದೇವರ ಮಂಟಪ, ಶನಿದೇವರ ಆಕರ್ಷಣೀಯ ಮಂಟವನ್ನು ರಚಿಸಿದ ಮೀರಾರೋಡ್‌ನ‌ ಗಿರೀಶ್‌ ಕರ್ಕೇರ, ಪುರುಷೋತ್ತಮ ಮಂಚಿ, ಸದಾನಂದ ಇವರನ್ನು ಮಂದಿರದ ಪರವಾಗಿ ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಪರಿಸರದ ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು ಪ್ರಸಾದವನ್ನಿತ್ತು ಗೌರವಿಸಲಾಯಿತು. ರಾತ್ರಿ 7.30 ರಿಂದ ರಾತ್ರಿ 10 ರವರೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸುಮಾರು ಮೂರುವರೆ ಸಾವಿರಕ್ಕೂ ಅಧಿಕ  ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.

Advertisement

ಮಂದಿರದ ಗೌರವಾಧ್ಯಕ್ಷ ವಿನೋದ್‌ ವಾಘಾಸಿಯಾ, ಅಧ್ಯಕ್ಷ ವಿದ್ಯಾ ಅಶೋಕ್‌ ಕರ್ಕೇರ, ಉಪಾಧ್ಯಕ್ಷ ಗೋಪಾಲ್‌ ದೇವಾಡಿಗ, ಕಾರ್ಯದರ್ಶಿ ಗುಣಕಾಂತ್‌ ಶೆಟ್ಟಿ ಕರ್ಜೆ, ಜತೆ ಕಾರ್ಯದರ್ಶಿಗಳಾದ  ಜಯಕರ ಶೆಟ್ಟಿ ಮತ್ತು ಲೀಲಾ ಪೂಜಾರಿ, ಕೋಶಾಧಿಕಾರಿ ಪುರಂದರ ಶ್ರೀಯಾನ್‌, ಜೊತೆ ಕೋಶಾಧಿಕಾರಿಗಳಾದ  ಅಚ್ಯುತ ಕೋಟ್ಯಾನ್‌ ಮತ್ತು ಸುಜಾತಾ ಶೆಟ್ಟಿ ಹಾಗೂ ಸಂಸ್ಥೆಯ ಟ್ರಸ್ಟಿಗಳು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ, ಸರ್ವ ಸದಸ್ಯರ, ಮಹಿಳಾ ಸದಸ್ಯೆಯರು ಸಹಕರಿಸಿದರು. 

ಚೆಂಡೆಯಲ್ಲಿ ಅಶೋಕ್‌ ಮತ್ತು ಬಳಗದವರು ಸಹಕರಿಸಿದರು. ಪ್ರತೀಕ್ಷಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಗುಣಕಾಂತ್‌ ಶೆಟ್ಟಿ ಕರ್ಜೆ ಕಾರ್ಯಕ್ರಮ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next