Advertisement

ರೈಲಿನಡಿಗೆ ಬಿದ್ದ ಮಹಿಳೆ ಪವಾಡ ಸದೃಶ ಪಾರು ! ವೈರಲ್‌ ವಿಡಿಯೋ 

02:58 PM Feb 17, 2017 | Team Udayavani |

ಮಥುರಾ: ಇಲ್ಲಿನ ರೈಲು ನಿಲ್ದಾಣದಲ್ಲಿ  ಗೂಡ್ಸ್‌ ರೈಲು ಬರುತ್ತಿದ್ದ ವೇಳೆ ಮಹಿಳೆಯೊಬ್ಬರು ಹಳಿಯ ಮೇಲೆ ಬಿದ್ದರೂ ಪವಾಡ ಸದೃಶವಾಗಿ ಪಾರಾಗಿ ಬಂದ ಘಟನೆ ನಡೆದಿದೆ. 

Advertisement

ಹಳಿಯಲ್ಲಿ  ಬಿದ್ದ ಮಹಿಳೆ ಗೂಡ್ಸ್‌ ರೈಲು ಹಾದು ಹೋಗುವವರೆಗೆ ಕದಲದೆ ಜೀವ ಕೈಯಲ್ಲಿ ಹಿಡಿದು ಮಲಗಿದ್ದರಿಂದ ಪಾರಾಗಿದ್ದಾರೆ. ರೈಲು  ಹಾದು ಹೋಗುವ ವೇಳೆ ಜನ ಕಂಗಾಲಾಗಿ ಏನಾಯಿತೋ ಎಂದು ತದೇಕ ಚಿತ್ತದಿಂತ ನೋಡುತ್ತಿದ್ದರು. ರೈಲು ಹಾದು ಹೋದ ನಂತರ ಮಹಿಳೆ ಎದ್ದು ನಿಂತದ್ದನ್ನು ನೋಡಿ ನಿಟ್ಟುಸಿರು ಬಿಟ್ಟರು. ನಿಲ್ದಾಣದಲ್ಲಿದ್ದವರು ಮಹಿಳೆಯ ನೆರವಿಗೆ ಧಾವಿಸಿ ಬಂದರು. 

Advertisement

Udayavani is now on Telegram. Click here to join our channel and stay updated with the latest news.

Next