ಕಲಬುರಗಿ: ತಾಲೂಕಿನ ಕಡಣಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಲಿಂಗ (ಶಿವ) ಮೇಲೆ ಕೆತ್ತಲಾಗಿರುವ ಕಲ್ಲು ನಾಗರ ಮೂರ್ತಿಯ ಮೇಲೆ ಕೂದಲು ಮೂಡಿರುವುದು ಆಶ್ಚರ್ಯ ಮೂಡಿದೆ.
ಎರಡು ವರ್ಷದ ಹಿಂದೆ ಪರಮ ಪೂಜ್ಯ ಹವಾ ಮಲ್ಲಿನಾಥ ಮಹಾರಾಜ ಅವರು ಕಡಣಿ ಗ್ರಾಮದಲ್ಲಿ ತಮ್ಮ ಅಮೃತ ಹಸ್ತದಿಂದ ದೃಷ್ಟಿಲಿಂಗ ಪ್ರತಿಷ್ಟಾಪಿಸಿದ್ದರು. ಲಿಂಗದ ಮೇಲೆ ಕಲ್ಲು (ಸರ್ಪ) ನಾಗರವಿದ್ದು, ಆದರೆ ನಾಗರಮೂರ್ತಿಯ ಮೇಲೆ ನಿಜವಾದ ಸರ್ಪದ ಮುಖದ ಮೇಲೆ ಕೂದಲು ಇರುವಂತೆ ಕಲ್ಲಿನ ಸರ್ಪದ ಮೇಲೂ ಕೂದಲು ಮೂಡಿರುವುದು ಆಶ್ಚರ್ಯ ಮೂಡಿಸಿದೆ.
ಈ ಆಶ್ಚರ್ಯಕರ ಹಾಗೂ ವಿಸ್ಮಯಕಾರಿ ಸಂಗತಿ ನೋಡಲು ಸಹಸ್ರಾರು ಜನರು ಆಗಮಿಸಿ ಕುತೂಹಲ ದಿಂದ ವೀಕ್ಷಿಸುತ್ತಿದ್ದಾರೆ. ಮಹಾಲಯ ಅಮಾವಾಸ್ಯೆಯಂದು ವಿಸ್ಮಯ ಕಾಣಿಸಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.
ಇದೆಲ್ಲ ಹವಾ ಮಲ್ಲಿನಾಥ ಮಹಿಮೆ ಎಂದು ಭಕ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Narrowly Escape: ಕುಸಿದು ಬಿದ್ದ ನೂರು ವರ್ಷ ಹಳೆಯ ಕಟ್ಟಡ… ಓಡಿ ಪಾರಾದ ತಾಯಿ, ಮಗು