Advertisement

ಒಲಿಂಪಿಕ್ಸ್‌ ಬೆಳ್ಳಿ ವಿಜೇತೆ ಮೀರಾಬಾಯಿಗೆ ಉ.ಪ್ರ.ದಿಂದ 1.50 ಕೋ.ರೂ.

09:34 PM Dec 26, 2021 | Team Udayavani |

ಲಕ್ನೋ: ಈ ಬಾರಿ ಟೋಕ್ಯೊದಲ್ಲಿ ನಡೆದ ಒಲಿಂಪಿಕ್ಸ್‌ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರು. ಅವರನ್ನು ಮಣಿಪುರ ಸರ್ಕಾರ ಈಗಾಗಲೇ 1 ಕೋಟಿ ರೂ. ನೀಡಿ ಗೌರವಿಸಿದೆ.

Advertisement

ಇದೀಗ ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರಪ್ರದೇಶ ಸರ್ಕಾರ 1.50 ಕೋಟಿ ರೂ. ನೀಡಿ ಚಾನುವನ್ನು ಗೌರವಿಸಿದ್ದಾರೆ. ಮೊದಲೇ ಉ.ಪ್ರ. ಸರ್ಕಾರ ಒಲಿಂಪಿಕ್ಸ್‌ ಪದಕ ವಿಜೇತರಿಗೆ ಭಾರೀ ಬಹುಮಾನ ನೀಡುವುದಾಗಿ ಘೋಷಿಸಿತ್ತು. ಅದರಂತೆಯೇ ಅವರು ನಡೆದುಕೊಂಡಿದ್ದಾರೆ.

ಇದರಿಂದ ಸ್ವತಃ ಮೀರಾಬಾಯಿ ಖುಷಿಪಟ್ಟಿದ್ದಾರೆ. ನಮಗೆ ಮುಂಚೆ ಎಂದೂ ಇಂತಹ ಗೌರವ ಸಿಕ್ಕಿರಲಿಲ್ಲ. ಇದೀಗ ಎಲ್ಲ ರಾಜ್ಯಗಳೂ ಗುರ್ತಿಸುತ್ತಿರುವುದಕ್ಕೆ ಬಹಳ ಸಂತೋಷವಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next