Advertisement

ಮೀರಾರೋಡ್‌ ಮಹಾಲಿಂಗೇಶ್ವರ ದೇವಾಲಯ: ಮಹಾ ಶಿವರಾತ್ರಿ 

01:10 PM Mar 12, 2019 | Team Udayavani |

ಮುಂಬಯಿ: ಮೀರಾರೋಡ್‌ ಪೂರ್ವದ ಮೀರಾ ಗಾಂವ್‌ ಸೊಸೈಟಿಯ ಆವರಣ ದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಾ. 4 ರಂದು ಮಹಾ ಶಿವಾರಾತ್ರಿ ಆಚರಣೆಯು ವಿವಿಧ ಪೂಜಾ ವಿಧಿ-ವಿಧಾನಗಳೊಂದಿಗೆ ಅದ್ದೂರಿಯಾಗಿ  ನೆರವೇರಿತು.

Advertisement

ಬೆಳಿಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ಸಾಣೂರು ಸಾಂತಿಂಜ ಜನಾರ್ದನ ಭಟ್‌ ಅವರು ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಿ, ಮಹಾ ಶಿವಾರಾತ್ರಿ ವೇಳೆ ಉಪವಾಸ,  ಧ್ಯಾನ, ಸಾಮಾಜಿಕ ಸೌಹಾರ್ದತೆಯ  ಮೂಲಕ ಶಿವಾಲಯಗಳಲ್ಲಿ ಪೂಜೆ ಸಲ್ಲಿಸಬೇಕು. ಲೋಕದ ಜನರ ಕಷÒಗಳನ್ನು ನುಂಗಿಕೊಂಡ ವಿಷ ಕಂಠ ಸಮಸ್ತ ಭಕ್ತಾದಿಗಳಿಗೆ ಸುಖವನ್ನು ಬಯಸಿದ. ಉಪವಾಸ ಜಾಗರಣೆಯ ಮೂಲಕ ಶಿವನನ್ನು ಆರಾಧಿಸುವ ಮಹಾಶಿವ ಆಚರಣೆ ತಮಗೆಲ್ಲ ಸನ್ಮಾಂಗಲವನ್ನುಂಟು ಮಾಡಲೆಂದು ಹಾರೈಸಿದರು.

ಸಾಣೂರು ಮಾಧವ ಭಟ್‌ ಅವರ ನೇತೃತ್ವದಲ್ಲಿ ಬೆಳಿಗ್ಗೆ ರುದ್ರಾಭಿಷೇಕ,  ಮಹಾಪೂಜೆ ನೆರವೇರಿತು. ಸಂಜೆ  ಶ್ರೀ  ವಿಟuಲ ಭಜನ ಮಂಡಳಿ ಮೀರಾ ರೋಡ್‌, ಶ್ರೀ ಹನುಮಾನ್‌ ಭಜನ ಮಂಡಳಿ ದಹಿಸರ್‌  ಮತ್ತು ಶ್ರೀ  ಲಕ್ಷೀನಾರಾಯಣ ಭಜನ ಮಂಡಳಿ ಮೀರಾರೋಡ್‌ ಇದರ ಸದಸ್ಯರಿಂದ ದಾಸರ ಕೀರ್ತನೆಯೊಂದಿಗೆ ಶಿವನನ್ನು ಸ್ತುತಿಸಲಾಯಿತು. ಪರಿವಾರ ದೇವ ರಾದ ಶ್ರೀ ಗಣಪತಿ, ಶ್ರೀ ದುರ್ಗಾಮಾತೆ, ನವಗ್ರಹಗಳಿಗೆ ಹಾಗೂ ಶ್ರೀ  ಕ್ಷೇತ್ರದ ಶ್ರೀ  ಮಹಾಲಿಂಗೇಶ್ವರ ದೇವರಿಗೆ ವಿಶೇಷ ಶ್ರೀ ರಂಗ ಪೂಜೆ ನಡೆಯಿತು.

ಗೌರಿಶಂಕರ ಕಾರಿಂಜ, ದೇವರಾಜ್‌ ಭಟ್‌,  ರಾಘವೇಂದ್ರ ಉಪಾಧ್ಯಾಯ,  ಅನಂತ ಭಟ್‌, ಶ್ರೀಶ ಭಟ್‌, ವಾಸುದೇವ ಭಟ್‌, ಶ್ರೀವತ್ಸ ಭಟ್‌ ಇವರು  ಸಹಕರಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಶಿಮಂತೂರು ಮಜಲಗುತ್ತು ರಂಜನ್‌ ಬಾಬಾ ಶೆಟ್ಟಿ, ಟ್ರಸ್ಟಿಗಳಾದ ಕೃಷ್ಣ ಜಿ. ಶೆಟ್ಟಿ. ಸುಂದರ ಶೆಟ್ಟಿಗಾರ್‌, ಅನಿಲ್‌ ಶೆಟ್ಟಿ,  ಪ್ರಸನ್ನ ಶೆಟ್ಟಿ ಕುರ್ಕಾಲ…, ಪ್ರಸನ್ನ ಶೆಟ್ಟಿ ಬೋಳ,  ಮತ್ತಿತರರು ಸಹಕರಿಸಿದರು. ವಿವಿಧ ಸಂಘ ಸಂಸ್ಥೆಗಳ  ಪ್ರತಿನಿಧಿಗಳು,  ತುಳು 
ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿದರು. 

ಚಿತ್ರ-ವರದಿ: ರಮೇಶ್‌ ಅಮೀನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next