Advertisement

ಜಿಲ್ಲೆಯ ಸಮಗ್ರ ಅಭಿವೃದಿ ನನ್ನ ಧ್ಯೇಯ: ಸೋಮಣ್ಣ

04:06 PM Jun 04, 2022 | Team Udayavani |

ಗುಂಡ್ಲುಪೇಟೆ: ದಕ್ಷಿಣ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್‌ ಪರ ತಾಲೂಕಿನ ಹಲವು ಶಾಲಾ-ಕಾಲೇಜು ಸೇರಿದಂತೆ ಪಟ್ಟಣದ ವಿವಿಧೆಡೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮತಯಾಚನೆ ಮಾಡಿದರು. ಇದಕ್ಕೆ ಶಾಸಕ ಸಿ. ಎಸ್‌.ನಿರಂಜನಕುಮಾರ್‌ ಸಾಥ್‌ ನೀಡಿದರು.

Advertisement

ಪಟ್ಟಣದ ನ್ಯಾಯಾಲಯದ ಸಂಕೀರ್ಣದ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ನಮ್ಮದು ಡಬಲ್‌ ಇಂಜಿನ್‌ ಸರ್ಕಾರವಾಗಿದ್ದು, ಎಲ್ಲರಲ್ಲಿ ಒಬ್ಬನಾಗಲು ನನಗೆ ಇಷ್ಟವಿಲ್ಲ. ನನ್ನ ಬದುಕು ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು ಎಂಬ ಆಶಯ ಹೊಂದಿದ್ದೇನೆ. ಇದೇ ಕಾರಣಕ್ಕೆ ಅತ್ಯಂತ ಕ್ರಿಯಾಶೀಲತೆಯಿಂದ ಕೆಲಸ ಮಾಡ್ತೀದ್ದಿನಿ. ಜಿಲ್ಲೆಯ ಸಮಗ್ರ ಅಭಿವೃದ್ಧಿ ನನ್ನ ಧ್ಯೇಯ ಎಂದರು.

ಮೈ.ವಿ.ರವಿಶಂಕರ್‌ ತುಂಬಾ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದು, ಎಲ್ಲರ ಕಷ್ಟಗಳಿಗೆ ಸ್ಪಂದಿಸುತ್ತಾರೆ. ಕಳೆದ ವಿಧಾನ ಪರಿಷತ್‌ ಚುನಾವಣೆಯಲ್ಲಿಅತ್ಯಲ್ಪ ಮತಗಳ ಅಂತರದಿಂದ ಸೋಲುಂಡಿದ್ದು, ಈ ಬಾರಿ ಗೆಲ್ಲುತ್ತಾರೆ. ಚುನಾವಣೆ ಯನ್ನು ನಮ್ಮಸ್ವಂತದ್ದು ಎಂದು ತಿಳಿದು ಕೆಲಸ ಮಾಡಿ. ಮೊದಲ ಆದ್ಯತೆ ಮತ ನೀಡಿ ಎಂದು ವಕೀಲರಿಗೆ ಮನವಿ ಮಾಡಿದರು.

ಪಟ್ಟಣದ ಜೆಎಸ್‌ಎಸ್‌ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಚಿವರು, ಸರ್ಕಾರ ಮಾಡಲಾಗದ ಕೆಲಸವನ್ನು ಸಿದ್ಧಗಂಗಾ, ಸುತ್ತೂರು ಮತ್ತು ಆದಿ ಚುಂಚನಗಿರಿ ಮಠಗಳು ಮಾಡುತ್ತಿವೆ. ಸಮಾಜದಲ್ಲಿ ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದು, ಸಮಾಜದಲ್ಲಿ ಪ್ರತಿಯೊಬ್ಬರು ಉತ್ತಮ ವ್ಯಕ್ತಿಗಳಾಗಬೇಕೆಂದು ಅಂತಃ ಕರಣದಿಂದ ಕಲಿಸುವ ರೀತಿ ಅನನ್ಯ. ಆದ್ದರಿಂದ ಶಿಕ್ಷಕ ಬಂಧುಗಳು ಬಿಜೆಪಿ ಅಭ್ಯರ್ಥಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಹಲವೆಡೆ ಪ್ರಚಾರ: ಹಂಗಳ ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿ ಶಾಲೆ, ಪಟ್ಟಣದ ದೊಡ್ಡಹುಂಡಿ ಭೋಗಪ್ಪ ಸರಕಾರಿ ಪದವಿ ಪೂರ್ವ ಕಾಲೇಜು, ಬಾಲಕಿಯರ ಕಾಲೇಜು, ಶ್ರೀ ಮದ್ದಾನೇಶ್ವರ ವಿದ್ಯಾಸಂಸ್ಥೆ, ಸರ್ಕಾರಿಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಚಿವರುಮೈ.ವಿ.ರವಿಶಂಕರ್‌ ಪರ ಮತಯಾಚನೆ ಮಾಡಿದರು.

Advertisement

ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ ಅಧ್ಯಕ್ಷ ಫ‌ಣೀಶ್‌, ಹಿರಿಯ ವಕೀಲ ಬಿ.ಶಿವಣ್ಣ, ಬಿಜೆಪಿ ಹಿರಿಯ ರೈತ ಮುಖಂಡ ಅಮ್ಮನಪುರ ಮಲ್ಲೇಶ್‌, ಬಿಜೆಪಿ ಮಂಡಲ ಅಧ್ಯಕ್ಷ ಡಿ.ಪಿ.ಜಗದೀಶ್‌, ಹಿರಿಯ ಮುಖಂಡ ಎಸ್‌.ಪಿ.ಸುರೇಶ್‌, ಅಖಿಲ ಭಾರತ ವೀರಶೈವ ಮಹಾಸಭಾ ಮಾಜಿ ಜಿಲ್ಲಾಧ್ಯಕ್ಷ ಕೊಡಸೋಗೆಶಿವಬಸಪ್ಪ, ಪ್ರಾಂಶುಪಾಲ ಮರಿಸ್ವಾಮಪ್ಪ,ಹಂಗಳ ಕರ್ನಾಟಕ ಪಬ್ಲಿಕ್‌ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಕುಮಾರ್‌,ಗ್ರಾಪಂ ಸದಸ್ಯ ಎಚ್‌.ಎಂ.ನಂದೀಶ್‌, ಪುರಸಭೆಸದಸ್ಯ ಕಿರಣ್‌, ಬಿಜೆಪಿ ಯುವ ಮೋರ್ಚಾಜಿಲ್ಲಾಧ್ಯಕ್ಷ ಎಂ.ಪ್ರಣಯ್‌ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next