Advertisement

ಹಿಂದೂಗಳಿಗೆ ಅಲ್ಪಸಂಖ್ಯಾಕ ಸ್ಥಾನಮಾನ: ಕಾಲಾವಕಾಶ

12:38 AM May 11, 2022 | Team Udayavani |

ಹೊಸದಿಲ್ಲಿ: ಹಿಂದೂಗಳಿಗೆ ಅಲ್ಪ ಸಂಖ್ಯಾಕ ಸ್ಥಾನಮಾನ ನೀಡುವ ಕುರಿತಾಗಿ ಎಲ್ಲ ರಾಜ್ಯಗ ಳೊಂದಿಗೆ ಸಮಾಲೋಚನೆ ನಡೆಸಿ ತನಗೆ ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌, ಕೇಂದ್ರ ಸರಕಾರಕ್ಕೆ ಸೂಚಿಸಿದೆ.

Advertisement

ಕೆಲವು ರಾಜ್ಯಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ರುವ ಹಿಂದೂಗಳಿಗೆ ಅಲ್ಪಸಂಖ್ಯಾಕರ ಸ್ಥಾನಮಾನ ನೀಡಬೇಕೆಂದ ಮನವಿ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ಸಂಬಂಧಿಸಿದಂತೆ, ಮೇ 9ರಂದು ಕೇಂದ್ರ ಸರಕಾರ ತನ್ನ ಎರಡನೇ ಅಫಿಡವಿಟ್‌ ಸಲ್ಲಿಸಿದೆ.

ಅದರಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾಕರೆಂಬ ಸ್ಥಾನಮಾನವನ್ನು ಆಯಾ ರಾಜ್ಯಗಳ ಜನಸಂಖ್ಯಾ ವರದಿಯನ್ನು ಆಧರಿಸಿ ನೀಡುವ ಅಧಿಕಾರ ತನಗಿದ್ದು ಈ ಕುರಿತಂತೆ ಎಲ್ಲ ರಾಜ್ಯಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಕೇಂದ್ರ ಸರಕಾರ, ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಮೂರು ತಿಂಗಳ ಗಡುವನ್ನು ನೀಡಿದೆ.

ಈ ಹಿಂದೆ, ಇದೇ ಪ್ರಕರಣಕ್ಕೆ ಸಂಬಂಧಿ ಸಿದಂತೆ ಕೇಂದ್ರ ಸರಕಾರ ಸಲ್ಲಿಸಿದ್ದ ಮೊದಲ ಅಫಿಡವಿಟ್‌ನಲ್ಲಿ, ಹಿಂದೂಗಳಿಗೆ ಅಲ್ಪ ಸಂಖ್ಯಾಕರ ಸ್ಥಾನಮಾನ ನೀಡುವ ವಿಚಾರ ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದು. ತಮ್ಮ ರಾಜ್ಯಗಳಲ್ಲಿನ ಜನಸಂಖ್ಯೆಯ ಅಂಕಿ- ಅಂಶಗಳನ್ನು ಆಧರಿಸಿ ರಾಜ್ಯ ಸರಕಾರಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ಈ ಕುರಿತಂತೆ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next