Advertisement

ಮೋದಿ ಫೋಬಿಯಾ ಕ್ಲಬ್‌ಗೆ ನಖ್ವಿ ಚಾಟಿ

09:26 AM May 13, 2020 | Team Udayavani |

ಹೊಸದಿಲ್ಲಿ: ಭಾರತದಲ್ಲಿ ಅಲ್ಪಸಂಖ್ಯಾಕರು ದಿನದಿಂದ ದಿನಕ್ಕೆ ಪ್ರಗತಿ ಕಾಣುತ್ತಿದ್ದಾರೆ. ನರೇಂದ್ರ ಮೋದಿ ಸರಕಾರ‌ ಕೂಡ ಯಾವುದೇ ತಾರತಮ್ಯ ಮಾಡದೆ, ಸಮಗ್ರ ಕಲ್ಯಾಣಕ್ಕೆ ಆದ್ಯತೆ ನೀಡುತ್ತಲೇ ಬಂದಿದೆ. ಹೀಗಿದ್ದರೂ ಇಸ್ಲಾಮೋಫೋಬಿಯಾ ಆರೋಪ ಇಂದು ದೇಶವನ್ನು ಕೆಣಕಲು ಯತ್ನಿಸುತ್ತಿದೆ ಎಂದು ಕೇಂದ್ರ ಸಚಿವ ಮುಖ್ತಾರ್‌ ಅಬ್ಟಾಸ್‌ ನಖ್ವಿ ವಿಷಾದಿಸಿದ್ದಾರೆ. ಮೋದಿ ಫೋಬಿಯಾ ಕ್ಲಬ್‌ಗ ಕೇಂದ್ರ ಸರಕಾರ‌ದ ಜನಪ್ರಿಯತೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಭಾರತದಲ್ಲಿ ಅಸಹಿಷ್ಣುತೆ, ಕೋಮುವಾದ, ತಾರತಮ್ಯಗಳಿವೆಯೆಂದು ಆರೋಪಿಸಿ, ಕೆಟ್ಟ ಅಭಿಯಾನ ನಡೆಸಲಾಗುತ್ತಿದೆ. ಮಾನಸಿಕ ದಿವಾಳಿತನದ ಕಾರಣಕ್ಕಾಗಿ ಇಂಥ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಆದರೆ, ಕ್ಲಬ್‌ನ ಈ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ನಖ್ವಿ ತಮ್ಮ ಬ್ಲಾಗ್‌ನಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next