Advertisement

ಹೊಳಲ್ಕೆರೆ ಮಿನಿ ವಿಧಾನಸೌಧ ಲಾಕ್‌ಡೌನ್‌

08:18 PM Aug 28, 2020 | Suhan S |

ಹೊಳಲ್ಕೆರೆ: ತಾಲೂಕು ಕಚೇರಿ ಸಿಬ್ಬಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಗುರುವಾರ ಪಟ್ಟಣದ ಮಿನಿ ವಿಧಾನಸೌಧವನ್ನು ಗುರುವಾರ ಸೀಲ್‌ಡೌನ್‌ ಮಾಡಲಾಯಿತು.

Advertisement

ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ, ಭೂಮಾಪನ ಇಲಾಖೆ ಕಚೇರಿ, ಉಪ ಖಜಾನೆ ಸೇರಿದಂತೆ ಎಲ್ಲಾ ಕಚೇರಿಗಳು ಇಂದುಕಾರ್ಯನಿರ್ವ ಹಿಸಲಿಲ್ಲ. ಕೆಲಸ ಕಾರ್ಯಗಳಿಗೆ ಆಗಮಿಸಿದ್ದ ಸಾರ್ವಜನಿಕರು ನಿರಾಸೆ ಯಿಂದ ಮರಳಿದರು. ಮಿನಿ ವಿಧಾನಸೌಧವನ್ನು ಸೀಲ್‌ಡೌನ್‌ ಮಾಡಲಾಗಿದೆ. ಕಚೇರಿಗಳನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡಿಸಲಾಗಿದೆ. ಶುಕ್ರವಾರ ಎಂದಿನಂತೆ ಕಚೇರಿ ಕೆಲಸ ನಡೆಯಲಿದೆ ಎಂದು ತಹಶೀಲ್ದಾರ್‌ ಕೆ. ನಾಗರಾಜ್‌ ತಿಳಿಸಿದರು. ತಾಲೂಕಿನಲ್ಲಿ 256 ಕೋವಿಡ್ ಪ್ರಕರಣ ಪತ್ತೆಯಾಗಿವೆ. 81 ಸೋಂಕಿತರಿದ್ದು, ಹೋಂ ಕ್ವಾರಂಟೈನ್‌ನಲ್ಲಿ 19 ಜನರು ಇದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಜಯಸಿಂಹ ಮಾಹಿತಿ ನೀಡಿದರು.

ಮಿನಿ ವಿಧಾನಸೌಧಕ್ಕೆ ಪ್ರತಿನಿತ್ಯ ಸಾವಿರಾರು ಜನರು ಕಚೇರಿ ಕೆಲಸಕ್ಕೆ ಆಗಮಿಸುತ್ತಿದ್ದಾರೆ. ಆದರೂ ಸ್ಯಾನಿಟೈಸರ್‌, ನೀರಿನ ಸೌಲಭ್ಯ ಕಲ್ಪಿಸಿಲ್ಲ. ಮಾಸ್ಕ್ ಧರಿಸದೆ ಬರುವವರ ವಿರುದ್ಧ ಕ್ರಮವಿಲ್ಲ. ಕಚೇರಿಯ ಎಷ್ಟೋ ಸಿಬ್ಬಂದಿ ಮಾಸ್ಕ್ ಇಲ್ಲದೆ ಕೆಲಸ ಮಾಡುತ್ತಿರುವುದರಿಂದ ಕೋವಿಡ್ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಮದು ವಕೀಲ ಎಸ್‌. ವೇದಮೂರ್ತಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next