Advertisement
ಸಸ್ಯಾಹಾರ ಸೇವಿಸುವ ತೆಳ್ಳಗಿನ ಮಹಿಳೆ, ಮಾಂಸಾಹಾರ ಸೇವಿಸಿ ದಪ್ಪಗಾಗಿರುವ ಮಹಿಳೆಯ ಚಿತ್ರವನ್ನು ತೋರಿಸಿ ಸಸ್ಯಾಹಾರವೇ ಒಳ್ಳೆಯದು ಎಂಬ ಸಂದೇಶ ಬರುವಂತೆ ಟ್ವೀಟ್ ಮಾಡಲಾಗಿತ್ತು. ಇದಕ್ಕೆ ಟ್ವೀಟಿಗರೊಬ್ಬರು, ‘ಸಸ್ಯಾಹಾರವೋ, ಮಾಂಸಾಹಾರವೋ ಅವರವರ ಹುಟ್ಟಿನಿಂದ ಬಂದಿರುತ್ತದೆ. ಆಹಾರದ ಉತ್ಪಾದನೆ ಮತ್ತು ಇತರ ವಿಚಾರಗಳ ಬಗ್ಗೆ ಆರೋಗ್ಯ ಇಲಾಖೆ ಗಮನಹರಿಸಲಿ’ ಎಂದು ಹೇಳಿದ್ದರೆ, ಮತ್ತೂಬ್ಬರು ಸರಕಾರದ ಟ್ವೀಟ್ ‘ದಪ್ಪಗಾಗುವ’ ಎಂಬ ವಿಚಾರಕ್ಕೇ ಅವಮಾನದ ಸಂಗತಿ ಎಂದರೆ, ಇನ್ನೊಬ್ಬರು ‘ಮೊಟ್ಟೆ ಯಾವಾಗ ಅನಾರೋಗ್ಯಕರ ಆಹಾರವಾಯಿತು’ ಎಂದು ಪ್ರಶ್ನಿಸಿದ್ದಾರೆ. ಇದಲ್ಲದೆ ಅದಕ್ಕೆ ಬಳಸಲಾಗಿರುವ ಫೋಟೋ ಕೂಡ ಬೆಲಾರಸ್ ಮೂಲದ ವೆಬ್‌ಸೈಟ್‌ನದ್ದಾಗಿದೆ ಎಂಬ ಅಂಶವೂ ಬಯಲಾಗಿದೆ. ಟ್ವೀಟಿಗರಿಂದ ತರಾಟೆಗೆ ಒಳಗಾದ ಬಳಿಕ ಸಚಿವಾಲಯ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿದೆ.