ಮೈಸೂರು: ವರುಣಾ ಕ್ಷೇತ್ರದವರಕೂಡು ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಜಿÇÉಾ ಉಸ್ತುವಾರಿ ಸಚಿವಎಸ್. ಟಿ.ಸೋಮಶೇಖರ್ ಭೇಟಿ ನೀಡಿಪರಿಶೀಲನೆ ನಡೆಸಿದರು.
ಭಯಬೇಡ:ಪುರುಷ ಹಾಗೂ ಮಹಿಳಾಕೋವಿಡ್ ಸೋಂಕಿತರ ಬ್ಲಾಕ್‌ಗಳಿಗೆಭೇಟಿ ನೀಡಿ ಅವರ ಜತೆ ಚರ್ಚೆ ನಡೆಸಿ,ಔಷಧ ಊಟೋಪಚಾರ ಸೇರಿ ಚಿಕಿತ್ಸೆವ್ಯವಸ್ಥೆಗಳ ಬಗ್ಗೆ ಖುದ್ದು ಸೋಂಕಿತರಿಂದಮಾಹಿತಿ ಪಡೆದರು. ಯಾವುದೇ ಕಾರಣಕ್ಕೂ ಭಯ ಬೇಡ. ಧೈರ್ಯ ದಿಂದಎದುರಿಸಿ ದರೆ ರೋಗವನ್ನು ಅರ್ಧ ವಾಸಿಮಾಡಿ ಕೊಂಡಂತೆ ಆಗಲಿದೆ.
ಸರ್ಕಾರಸಹ ನಿಮ್ಮ ಜತೆಗಿದೆ ಎಂದರು.ಸುದ್ದಿಗಾರರೊಂದಿಗೆ ಮಾತನಾಡಿದಸಚಿವರು, ಪುರುಷರು ಮಹಿಳೆಯರುಸೇರಿದಂತೆ ಒಟ್ಟು 4 ಕಡೆ ಸೋಂಕಿತರಿಗೆವ್ಯವಸ್ಥೆ ಮಾಡಲಾಗಿದೆ. ಎಲ್ಲ ಕಡೆಯೂಖುದ್ದು ಭೇಟಿ ಕೊಟ್ಟಿದ್ದು ಉತ್ತಮಪ್ರತಿಕ್ರಿಯೆ ಬಂದಿದೆ ಎಂದು ತಿಳಿಸಿದರು.
ಮನರಂಜನೆಗೂ ಕೊರತೆ ಇಲ್ಲ: ಔಷಧವಿತರಣೆ, ಆಕ್ಸಿಜನ್ ವ್ಯವಸ್ಥೆ ಸೇರಿಎಲ್ಲವನ್ನೂ ನೋಡಲ್ ಅಧಿಕಾರಿಗಳುನೋಡಿಕೊಳ್ಳುತ್ತಿದ್ದಾರೆ. ಇನ್ನು ಸಂಜೆವೇಳೆ ವಾಯುವಿಹಾರ, ಡಾನ್ಸ್ ಇತ್ಯಾದಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕಮನರಂಜನಾತ್ಮಕವಾಗಿಯೂ ಇಲ್ಲಿ ಸದಾಚಟುವಟಿಕೆಯಿಂದ ಇದ್ದಾರೆಂದರು.
ಜಿಪಂ ಸದಸ್ಯೆ ಮಂಗಳಾ, ಜಿಪಂಸಿಇಒ ಯೋಗೀಶ್, ತಹಶೀಲ್ದಾರ್‌ರಕ್ಷಿತ್ ಮತ್ತಿತರರಿದ್ದರು.