Advertisement

ಲಕ್ಕಿ ನಂಬರ್‌ ಕಾರಿಗೆ ಭಾವಿ ಸಚಿವರ ಡಿಮ್ಯಾಂಡ್‌

11:06 PM Feb 05, 2020 | Lakshmi GovindaRaj |

ಬೆಂಗಳೂರು: ಸಚಿವಗಿರಿ ಪಕ್ಕಾ ಆಗುತ್ತಿದ್ದಂತೆ ಲಕ್ಕಿ ನಂಬರ್‌ ಕಾರು ಪಡೆಯಲು ನೂತನ ಸಚಿವರಾಗಲಿರುವ ಶಾಸಕರು ಬೇಡಿಕೆ ಇಟ್ಟಿದ್ದಾರೆ. ನೂತನ ಸಚಿವರಿಗಾಗಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ 20 ಹೊಸ ಕಾರು ಖರೀದಿಸಿದ್ದು ಕುಮಾರಕೃಪ ಅತಿಥಿ ಗೃಹ ಆವರಣದಲ್ಲಿ ನಿಲ್ಲಿಸಿದೆ. ಬುಧವಾರ ಬೆಳಗ್ಗೆ ನಾರಾಯಣಗೌಡ ಸೇರಿದಂತೆ ಹಲವು ಶಾಸಕರು ಕುಮಾರಕೃಪ ಅತಿಥಿ ಗೃಹಕ್ಕೆ ಆಗಮಿಸಿ ಇಂತಹದ್ದೇ ನಂಬರ್‌ ಕಾರು ತಮಗೆ ಬೇಕು ಎಂದು “ಬುಕ್ಕಿಂಗ್‌’ ಮಾಡಿಸಿ ಹೋಗಿದ್ದಾರೆ.

Advertisement

ಕೆಎ43 ಜಿಎ-999, ಕೆಎ 43 ಜಿಎ-8910, ಕೆಎ43 ಜಿಎ009, ಕೆಎ 05 ಜಿಎ-9, ಕೆಎ 05 ಜಿಎ 4999 ಸಂಖ್ಯೆಯ ಕಾರುಗಳಿಗೆ ಡಿಮ್ಯಾಂಡ್‌ ಹೆಚ್ಚಾಗಿದೆ. ಎಸ್‌.ಟಿ.ಸೋಮಶೇಖರ್‌, ಆನಂದ್‌ ಸಿಂಗ್‌, ಗೋಪಾಲಯ್ಯ ಸಂಖ್ಯಾಶಾಸ್ತ್ರದ ಪ್ರಕಾರ ತಮ್ಮ ಜಾತಕಕ್ಕೆ ಒಪ್ಪುವ ಸಂಖ್ಯೆ ಜ್ಯೋತಿಷಿಗಳ ಬಳಿ ಸಲಹೆ ಪಡೆದು ಕಾರಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next