Advertisement

ಪಧಾನಿಗಳ ಕೃಷಿ ಕ್ರಾಂತಿಗೆ ಸಚಿವರ ಅಭಿನಂದನೆ

09:18 AM Aug 10, 2020 | Suhan S |

ಮೈಸೂರು: ಕೋವಿಡ್‌ -19, ಮಳೆ, ನೆರೆ ಸಹಿತ ಅನೇಕ ಸಂಕಷ್ಟಗಳಿಂದ ಬಳಲುತ್ತಿರುವ ರೈತರಿಗೆ ಆರ್ಥಿಕ ನೆರವು ನೀಡುವ ಸಂಬಂಧ 1 ಲಕ್ಷ ಕೋಟಿ ರೂ. ಕೃಷಿ ಮೂಲಸೌಕರ್ಯ ನಿಧಿಗೆ ಭಾನುವಾರ ಪ್ರಧಾನ ಮಂತ್ರಿಗಳು ಚಾಲನೆ ನೀಡಿದ್ದು, ಈ ಮೂಲಕ ದೇಶದಲ್ಲಿಯೇ ಕೃಷಿ ಕ್ರಾಂತಿಗೆ ಮುಂದಾಗಿದ್ದಾರೆ.

Advertisement

ರೈತರ ಬಗೆಗೆ ಕಾಳಜಿ ಹೊಂದಿರುವ ಪ್ರಧಾನಿಗಳಿಗೆ ಅಭಿನಂದನೆಯನ್ನು ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಮೂಲಕ 8.5 ಕೋಟಿ ರೈತರಿಗೆ 17,000 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ. ಈ ಹಣ ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆಯಾಗಿದೆ. ಈಗ ಒದಗಿಸಲಾಗಿರುವ ನಿಧಿಯಿಂದ ಮುಂದಿನ 10 ವರ್ಷಗಳ ಅವಧಿಗೆ ರೈತರಿಗೆ ಸಾಲ ಸೇರಿದಂತೆ ಕೃಷಿ ವಲಯದ ಮೂಲ ಸೌಲಭ್ಯದ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲು ಯೋಜನೆಯು ರೈತರ ಪಾಲಿಗೆ ಸುವರ್ಣ ಯುಗವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಸನ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಅದರ ಕಾರ್ಯವೈಖರಿಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಇದಕ್ಕೆ ನಾನು ಪ್ರಧಾನಿ ಗೆ ಧನ್ಯವಾದ ಅರ್ಪಿಸುತ್ತೇನೆ. ಪ್ರಧಾನಿ ಈ ನಡೆ ಸಹಕಾರ ಸಂಘಗಳ ಪಾಲಿಗೆ ಉತ್ಸಾಹವನ್ನು ತುಂಬುವುದರ ಜೊತೆಗೆ ಸ್ಪೂರ್ತಿಯೊಂದಿಗೆ ಕಾರ್ಯನಿರ್ವಹಣೆ ಮಾಡಲು ಸಹಕಾರಿಯಾಗುತ್ತದೆ. ಕೇಂದ್ರದಂತೆ ರಾಜ್ಯ ಸರ್ಕಾರವೂ ಅನೇಕ ಕ್ರಮ ಕೈಗೊಂಡಿದ್ದು, ಈಗಾಗಲೇ ರಾಜ್ಯದ 162 ಎಪಿಎಂಸಿಗಳಲ್ಲಿ ಬೇಡಿಕೆ ಸಲ್ಲಿಸಿದ ಎಲ್ಲ ಕಡೆ ಕೋಲ್ಡ್ ಸ್ಟೋರೇಜ್‌ಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಭರ್ಜರಿ ಗಿಫ್ಟ್ ಪ್ರಧಾನ ಮಂತ್ರಿ ಕಿಸಾನ್‌ ಯೋಜನೆಯಡಿ ರಾಜ್ಯದ ರೈತರಿ ಗೂ ಸಿಎಂ ಭರ್ಜರಿ ಗಿಫ್ಟ್ ನೀಡಿದ್ದು, 52.50 ಲಕ್ಷ ರೈತರ ಖಾತೆಗಳಿಗೆ 1049 ಕೋಟಿ ರೂ.ಗಳನ್ನು ಮೊದಲ ಕಂತಿನಲ್ಲಿ ಜಮಾ ಮಾಡಿದ್ದಾರೆ. ರೈತರಿಗೆ ಆರ್ಥಿಕಭದ್ರತೆಗೆ ಯೋಜನೆ ಪರಿಣಾಮಕಾರಿಯಾಗಿದೆ. ರೈತರಿಗೋಸ್ಕರ ಈ ಸರ್ಕಾರ ಇದೆ ಎಂಬುದನ್ನು ತೋರಿಸಿದ್ದಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next