Advertisement

ನಮ್ಮಸರ್ಕಾರ ಬಂದರೂ ನಮ್ಮ ಸರ್ಕಾರ ಇದೆ ಎಂಬ ಭಾವನೆ ನಮಗಿಲ್ಲ: ಮತ್ತೆ ಕಿಡಿಕಾರಿದ ಯೋಗೇಶ್ವರ್

04:55 PM Jul 04, 2021 | Team Udayavani |

ಮೈಸೂರು: ನಮ್ಮ‌ಸರ್ಕಾರ ಬಂದರೂ ನಮ್ಮ ಸರ್ಕಾರ ಇದೆ ಎಂಬ ಭಾವನೆ ನಮಗಿಲ್ಲ. ನಮ್ಮ ಸರ್ಕಾರದಲ್ಲಿ ವಿಪಕ್ಷದವರ ಕೈ ಮೇಲಾಗ್ತಿದೆ. ಜಿಪಂ, ತಾಪಂ ಮೀಸಲಾತಿ ಸರ್ಕಾರ ಮಾಡಬೇಕು. ಆದರೆ ಕುಮಾರಸ್ವಾಮಿ ಹೇಳಿದಂತೆ ಮೀಸಲಾತಿ ಮಾಡಿದ್ದಾರೆ. ಅನುಕೂಲ‌ ಬಂದಂತೆ ಮೀಸಲಾತಿ ಹಂಚಿಕೆ‌ ಮಾಡಿದ್ದಾರೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಸಿಎಂ‌ ವಿರುದ್ದ ಬಹಿರಂಗ ಅಸಮಧಾನ ತೋಡಿಕೊಂಡರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವೇದನಾಶೀಲ, ಆಲೋಚನೆಯುಳ್ಳ ಸಿಎಂ ಹುದ್ದೆ ಎನ್ನುವುದು ಅಂಬಾರಿ ಹೊರುವ ಆನೆ ಇದ್ದಂತೆ. ತೂಕದ ಜೊತೆ ಆನೆ ಸೂಕ್ತ. ಸಿಎಂ ಹುದ್ದೆ ವೈಭವ, ಪ್ರತಿಷ್ಠೆಗೆ ಅಲ್ಲ. ರಾಜ್ಯದ ಜನರ ಆಶೋತ್ತರಗಳನ್ನು ಈಡೇರಿಸುವಂತಿರಬೇಕು. ಬದಲಾವಣೆ ಜಗದ ನಿಯಮ. ಅರ್ಜುನ, ಅಭಿಮನ್ಯು ಕೆಲ ವರ್ಷ ಅಂಬಾರಿ ಹೊತ್ತ. ಅಪ್ಪ ಹೊತ್ತನೆಂದು ಮರಿ ಆನೆಗೆ ಅಂಬಾರಿ ಹೊರಿಸಲಾಗುವುದಿಲ್ಲ ಎಂದು ಸಚಿವ ಸಿ.ಪಿ. ಯೋಗೇಶ್ವರ್ ಮತ್ತೆ ಬಿಎಸ್ ವೈ ಕುಟುಂಬದ ವಿರುದ್ದ ಕುಟುಕಿದರು.

ಇದನ್ನೂ ಓದಿ:ಸಿದ್ದರಾಮಯ್ಯರನ್ನ ಸೋಲಿಸೋಕೆ ನಮ್ಮ ಮನೆಯಲ್ಲೇ ಕಾರ್ಯ ತಂತ್ರ ನಡೆದಿತ್ತು : ಶ್ರೀನಿವಾಸಪ್ರಸಾದ್

ನನ್ನ ಹಣೆ ಬರಹ, ಏನ್ ಮಾಡುವುದು ದೇವಾಲಯದ ಗೋಪುರದ ಕಾರಂಜಿ ತರಹ ಆಗಿದ್ದೀನಿ. ವೈಯುಕ್ತಿಕವಾಗಿ ವಿಚಾರ ಇದ್ದರೆ ರುಜುವಾತು ಮಾಡಬೇಕು. ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ವಿಜಯೇಂದ್ರಗೆ ಸರ್ಕಾರದಲ್ಲಿ ಯಾವುದೇ ಅಧಿಕೃತ ಹುದ್ದೆ‌ಇಲ್ಲ. ನಮಗಾಗುವ ಚಿತ್ರಹಿಂಸೆ ಯಾರಿಗೆ ಹೇಳುವುದು ಎಂದು ಬೇಸರ ತೋಡಿಕೊಂಡರು.

ಶ್ರೀರಾಮುಲು ಪಿಎ ವಿರುದ್ಧ ದೂರು ವಿಚಾರವಾಗಿ ಮಾತನಾಡಿದ ಅವರು,  ಅಂಗೈ ಹುಣ್ಣಿಗೆ ಕನ್ನಡಿ ಯಾಕೆ? ಕರೆದು ಹೆಳಬಹುದಿತ್ತು. ದೂರು ಕೊಡುವಂತಹ ಅಗತ್ಯವಿರಲಿಲ್ಲ‌ ಎಂದರು.

Advertisement

ಶಾಸಕ ರಮೇಶ್ ಜಾರಕಿಹೊಳಿ ಷಡ್ಯಂತ್ರಕ್ಕೆ ಬಲಿ ಆಗಿರುವುದು ನಿಜ‌. ಆದರೂ ಅವರಿಗೆ ನ್ಯಾಯ ಕೊಡುವಲ್ಲಿ ದುರುದ್ದೇಶದಿಂದ ತಡವಾಗುತ್ತಿದೆ ಎಂದು ರಮೇಶ್ ಜಾರಕಿಹೊಳಿ ಪರ ಸಿ.ಪಿ.ಯೋಗೇಶ್ವರ್ ಬ್ಯಾಟಿಂಗ್ ಮಾಡಿದರು

Advertisement

Udayavani is now on Telegram. Click here to join our channel and stay updated with the latest news.

Next