ಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ದೇವರಾಜು ಅರಸು ವಸತಿ ಯೋಜನೆಯಡಿ ವಿಧವೆಯರು ಮತ್ತು ವಿಶೇಷ ಚೇತನರ ವರ್ಗದ ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರಾತಿ ಮತ್ತು ಕಾಮಗಾರಿ ಆದೇಶ ಪತ್ರ ವಿತರಿಸಿ ಮಾತನಾಡಿದರು.
Advertisement
ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ವಿವಿಧ ವಸತಿ ಯೋಜನೆಯಡಿಯಲ್ಲಿ 3.17 ಸಾವಿರ ಕೊಟುಂಬಗಳಿಗೆ ಸೂರು ಕಲ್ಪಿಸಲಾಗಿದೆ. ಕಳೆದ ವರ್ಷ ಪ್ರವಾಹದಲ್ಲಿ ಮನೆ ಕಳೆದುಕೊಂಡು ಕುಟುಂಬಗಳಿಗೆ 2.150 ಕೋಟಿ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗಿದೆ. ಹಿಂದನ ಸರ್ಕಾರದಲ್ಲಿ ಓಟ್ ಬ್ಯಾಂಕ್ ಗಾಗಿ 16 ಲಕ್ಷ ಫಲಾನುಭವಿಗಳಿಗೆ ಸುಳ್ಳಿನ ಹಕ್ಕುಪತ್ರಗಳನ್ನು ನೀಡಿ ಗಿಮಿಕ್ ಮಾಡಲಾಗಿತ್ತು. ಈ ಸಮಸ್ಯೆಗಳಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇದರ ಬಗ್ಗೆ ತನಿಖೆ ನಡೆಸುತ್ತಾರೆ ಎಂದು ಕೊಂಡಿದ್ದೆವು ಆದರೆ ಕುಮಾರಸ್ವಾಮಿ ಈ ಜೇನುಗೂಡಿಗೆ ಕೈಯಾಕಬೇಕಲ್ಲಾ ಎಂಬ ಕಾರಣಕ್ಕೆ ಗುಮ್ಮನ ಹಾಗೆ ಕುಳಿತು ಬಿಟ್ಟರ, ನಾನು ವಸತಿ ಸಚಿವನಾದ ನಂತರ ಬೋಗಸ್ ಹಕ್ಕು ಪತ್ರಗಳನ್ನು ಪತ್ತೆ ಹಚ್ಚಿ ಅವುಗಳಿಗೆ ತಾರ್ಕಿಕ ಅಂತ್ಯ ನೀಡಲು ಸತತ 2 ವರ್ಷಗಳು ಬೇಕಾಯಿತು. ಬಿಜೆಪಿ ಸರ್ಕಾರ ಬಂದ ಮೇಲೆ ಮನೆ ನಿಡುತ್ತಿಲ್ಲಾ ಎಂಬ ಆರೋಪಗಳು ಬಂದಿದ್ದವು, ಇದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದ ತಕ್ಷಣ 6 ಲಕ್ಷ ಮನೆಗಳನ್ನು ಮಂಜೂರು ಮಾಡಲು ಕ್ಯಾಬಿನೆಟ್ ಒಪ್ಪಿಗೆ ಪಡೆಯಲು ಸೂಚಿಸಿದ ಹಿನ್ನೆಲೆಯಲ್ಲಿ 9 ಸಾವಿರ ಕೋಟಿ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ನ್ಯಾಯ ಎಂದು ಬಂದರೆ ಸುಪ್ರಿಂ ಕೋರ್ಟ್ನ ನ್ಯಾಯಾಧೀಶರ ತೀರ್ಮಾನವೇ ಅಂತಿಮವಾಗಿರುತ್ತದೆ, ಅದೇರೀತಿ ಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳ ತೀರ್ಮಾನವೇ ಅಂತಿಮವಾಗಿರುತ್ತದೆ ಆದ್ದರಿಂದ ಈ ನೆಲದ ನಿರ್ಗತಿಕ, ಬಡ ಅಸಾಹಯಕ, ಕೂಲಿ ಕಾರ್ಮಿಕರಿಗೆ ಏನಾದರೂ ನ್ಯಾಯ ಸಿಗಬೇಕಾದರೆ ಅದು ನಿಮ್ಮಿಂದ ಮಾತ್ರ ಸಾಧ್ಯ ಆದ್ದರಿಂದ ನೀವೂ ಆಯ್ಕೆಮಾಡುವಾಗ ಯೋಗ್ಯರನ್ನು ಆಯ್ಕೆ ಮಾಡಿ ದೇವರು ನಿಮ್ಮನ್ನು ಕಾಪಾಡುತ್ತಾನೆ, ಮೇಲ್ಮಟ್ಟದಲ್ಲಿ ಜಿಲ್ಲಾಧಿಕಾರಿ ಹಾಗೂ ತಳ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಮನಸ್ಸು ಮಾಡಿದರೆ ಈ ದೇಶದ ಸಾಕಷ್ಟು ಬಡತನ ನಿರ್ಮೂಲನೆ ಮಾಡಲು ಸಾಧ್ಯ ಎಂದರು. ಸಂಸದ ಪ್ರತಾಪ್ಸಿಂಹ ಮಾತನಾಡಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಸೂರು ಇರಬೇಕು ಎಂಬುದು ನರೇಂದ್ರ ಮೋದಿಜೀಯವರ ಚಿಂತನೆ ಈ ಚಿಂತನೆಯನ್ನು ಶ್ರದ್ದೇಯಿಂದ ರಾಜ್ಯಮಟ್ಟದಲ್ಲಿ ಸಾಕಾರಗೊಳಿಸುತ್ತಿರುವವರು ವಸತಿ ಸಚಿವ ಸೋಮಣ್ಣನವರು, 24 ದಿನಗಳಲ್ಲಿ ಅತ್ಯುತ್ತಮ ದಸರಾ ಆಚರಿಸಿ ಚಾಮುಂಡಿಬೆಟ್ಟಕ್ಕೆ ಹೊಸ ರೂಪನೀಡಿದರು. ಹುಣಸೂರಿನ ಮದ್ಯಭಾಗದಲ್ಲಿ ಹರಿಯುವ ಲಕ್ಷಣ ತೀರ್ಥ ನದಿಯ ಸ್ವಚ್ಛತೆಗೆ ಮುಂದಾಗಿ 31 ಕೋಟಿ ರೂಗಳ ಚರಂಡಿ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ಪಿರಿಯಾಪಟ್ಟಣಕ್ಕೆ 1611 ಮನೆಗಳ ಮಂಜೂರು ಮಾಡಿಕೊಟ್ಟಿರುವುದರ ಹಿಂದೆ ಶಾಸಕ ಕೆ.ಮಹದೇವ್ ಶ್ರಮ ಹೆಚ್ಚಿದೆ ಬಡವರ ದೀನದಲಿತರ ಪರ ಕಾಳಿಜಿಯುಳ್ಳ ಶಾಸಕರಾಗಿದ್ದಾರೆ ಎಂದರು.
Related Articles
Advertisement
ಈ ಸಂದರ್ಭದಲ್ಲಿ ವಸತಿ ಯೋಜನೆ ಎಂಡಿ ಪರುಶುರಾಮ್ ಗೌಡ, ಜಿ.ಪಂ.ಸಿಇಒ ಯೋಗೇಶ್, ಇಒ ಸಿ.ಆರ್.ಕೃಷ್ಣಕುಮಾರ್, ತಹಸೀಲ್ದಾರ್ ಕೆ.ಚಂದ್ರಮೌಳಿ, ಎಂಡಿಸಿಸಿ ಸದಸ್ಯ ಸಿ.ಎನ್.ರವಿ, ಟಿಎಪಿಸಿ ಎಂಎಸ್ ಅಧ್ಯಕ್ಷ ತಿಮ್ಮೇಗೌಡ, ಮುಖಂಡರಾದ ಆರ್.ಟಿ.ಸತೀಶ್, ಟಿ.ಈರಯ್ಯ, ರಂಗಸ್ವಾಮಿ, ರಾಮು, ಅಣ್ಣಯ್ಯಶೆಟ್ಟಿ, ಸೇರಿದಂತೆ ಮತ್ತಿತರರು ಹಾಜರಿದ್ದರು.
16ಪಿವೈಪಿ01, 001 :ಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ದೇವರಾಜು ಅರಸು ವಸತಿ ಯೋಜನೆಯಡಿ ವಿಧವೆಯರು ಮತ್ತು ವಿಶೇಷ ಚೇತನರ ವರ್ಗದ ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರಾತಿ ಮತ್ತು ಕಾಮಗಾರಿ ಆದೇಶ ಪತ್ರವನ್ನು ವಸತಿ ಸಚಿವ ವಿ.ಸೋಮಣ್ಣ ವಿತರಿಸಿ ಮಾತನಾಡಿದರು.