Advertisement

ನೀವು ಉಳಿಯುತ್ತಿರೋ ಇಲ್ಲವೋ ನಾನಂತೂ ಉಳಿಯಬೇಕು: ಸಚಿವ ಉಮೇಶ್ ಕತ್ತಿ

03:29 PM May 09, 2021 | Team Udayavani |

ಬನಹಟ್ಟಿ: ಕೋವಿಡ್‌ ಮೂರನೇ ಅಲೆ ಬರುತ್ತಿದೆ. ನೀವು ಉಳಿಯುತ್ತಿರೋ ಇಲ್ಲವೋ, ನಾನಂತೂ ಉಳಿಯಬೇಕೆಂದು ಸಚಿವ ಉಮೇಶ ಕತ್ತಿ ಹಾಸ್ಯ ಚಟಾಕಿ ಹಾರಿಸಿದರು.

Advertisement

ರಬಕವಿ-ಬನಹಟ್ಟಿ ನಗರಸಭೆ ಸಭಾಭವನದಲ್ಲಿ ನಡೆದ ಸರಕಾರಿ ಹಾಗೂ ಖಾಸಗಿ ವೈದ್ಯರ ಸಭೆಯಲ್ಲಿ ವೈದ್ಯ ರವಿ ಜಮಖಂಡಿ ಆಕ್ಸಿಜನ್‌ ಸಾಂದ್ರಕ ಯಂತ್ರಗಳನ್ನು ಸರ್ಕಾರ ಹೆಚ್ಚು ನೀಡಬೇಕೆಂದು ಒತ್ತಾಯಿಸಿದಾಗ ಈ ರೀತಿ ಉತ್ತರಿಸಿದ ಸಚಿವರು, ಮೂರನೇ ಅಲೆ ಬಂದ ಮೇಲೆ ನೋಡೋಣ ಎಂದರು. ಆಗ ವೈದ್ಯರು ಆವಾಗ ನಾವು ಉಳಿದರೆ ನೋಡೋಣ ಎಂದಾಗ; ನೀವು ಉಳಿಯುತ್ತಿರೋ ಇಲ್ಲವೋ, ನಾನಂತೂ ಉಳಿಯಬೇಕು ಎಂದರು ಕತ್ತಿ.

ರೆಮ್‌ಡೆಸಿವಿಯರ್‌ ಬಗ್ಗೆ ಯಾವುದೇ ಆತಂಕ ಬೇಡ, ಕೋವಿಡ್‌ಗೆ ಅದು ರಾಮಬಾಣವಲ್ಲ. ಆದರೆ, ಜನರಿಗೆ ಅದು ಕೊಟ್ಟರೆ ಗುಣವಾಗುತ್ತದೆ ಎಂಬ ನಂಬಿಕೆ ಇದೆ. ಈ ಬಗ್ಗೆ ಜಾಗೃತಿ ಮೂಡಿಸಿ, ಅದು ಇಲ್ಲದೆಯೂ ರೋಗಿ ಬದುಕಬಲ್ಲ ಎಂಬ ವಿಶ್ವಾಸ ಮೂಡಿಸಬೇಕು. ಜಿಲ್ಲೆಯಾದ್ಯಂತ ಆಕ್ಸಿಜನ್‌ ಕೊರತೆ ಇಲ್ಲ. ಆದರೆ, ಆಕ್ಸಿಜನ್‌ ಬೆಡ್‌ಗಳ ಸಮಸ್ಯೆ ಉಂಟಾಗುತ್ತಿದೆ. ಬೆಡ್‌ಗಳ ಸಮಸ್ಯೆ ಇದ್ದು, ಗುಣಮುಖರಾದವರು ಮನೆಯಲ್ಲಿ ವಿಶ್ರಾಂತಿ ಪಡೆಯಬೇಕು. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು. ಸೋಮವಾರದಿಂದ ಕಟ್ಟುನಿಟ್ಟಾಗಿ ಲಾಕ್‌ಡೌನ್‌ ಜಾರಿಗೆ ತರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಯಲ್ಲಿ ಆಕ್ಸಿಜನ್‌ ಇದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅದರ ಬಗ್ಗೆ ಎಸ್‌ಪಿ ಅವರು ಹೆಚ್ಚಿನ ಮುತುವರ್ಜಿ ವಹಿಸಬೇಕು. ಪಾಸಿಟಿವ್‌ ಕೇಸ್‌ ಬಂದವರನ್ನು ಮನೆಯಲ್ಲೇ ಇರಲು ಬಿಡದೆ, ಅವರನ್ನು ಸ್ಥಳೀಯ ಕೋವಿಡ್‌ ಕೇರ್‌ ಸೆಂಟರ್‌ಗೆ ಸೇರಿಸಲು ಪ್ರಯತ್ನಿಸಬೇಕು. ಅಲ್ಲಿ ಆರೋಗ್ಯವಂತರಾಗಿ ನೆಗೆಟಿವ್‌ ಬಂದ ನಂತರ ಮನೆಗೆ ತೆರಳಲು ಅವಕಾಶ ನೀಡಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next