Advertisement

ಶ್ರೀಗಂಧ ನೀತಿ ಜಾರಿಗೆ ಕರಡು ಸಿದ್ದಪಡಿಸಲು ಸಚಿವ ಉಮೇಶ್‌ ಕತ್ತಿ ಸೂಚನೆ

09:27 PM Sep 02, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ನೂತನ ಶ್ರೀಗಂಧದ ನೀತಿ ಜಾರಿಗೆ ತರಲು ಕರಡು ಸಿದ್ದಪಡಿಸುವಂತೆ ಅರಣ್ಯ ಸಚಿವ ಉಮೇಶ್‌ ಕತ್ತಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ವಿಧಾನಸೌಧದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಸಚಿವರು, ರಾಜ್ಯದಲ್ಲಿ ಶ್ರೀಗಂಧದ ಉತ್ಪಾದನೆ ಕಡಿಮೆ ಯಾಗಿದ್ದು, ಅರಣ್ಯ ಪ್ರದೇಶದಲ್ಲಿಯೂ ಶ್ರೀಗಂಧ ಕಡಿಮೆಯಾಗುತ್ತಿದೆ. ಹೀಗಾಗಿ ರೈತರು ಶ್ರೀಗಂಧವನ್ನು ಮುಕ್ತವಾಗಿ ಬೆಳೆಯಲು ಅವಕಾಶ ದೊರೆಯುವಂತೆ ರೈತ ಸ್ನೇಹಿಯಾದ ಶ್ರೀಗಂಧ ನೀತಿ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ರಾಜ್ಯದಲ್ಲಿ ಈಗಿರುವ ನಿಯಮಗಳ ಪ್ರಕಾರ ರೈತರ ಹೊಲದಲ್ಲಿ ಶ್ರೀಗಂಧ ಬೆಳೆದರೂ, ಅನುಮತಿ ಪಡೆದು ಅದನ್ನು ಕಡಿಯಲು ಕನಿಷ್ಠ 45 ದಿನಗಳ ವ್ಯಯವಾಗುತ್ತಿದೆ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರೈತ ಸ್ನೇಹಿಯಾಗಿ ಹೊಸ ಶ್ರೀಗಂಧ ನೀತಿ ಜಾರಿ ಮಾಡಲು ಅಗತ್ಯ ಕಾನೂನು ತಿದ್ದುಪಡಿಗೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸಚಿವ ಉಮೇಶ್‌ ಕತ್ತಿ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ಬ್ಯಾಡ್ಮಿಂಟನ್‌: ಪ್ರಮೋದ್‌ ಭಗತ್‌ ಸೆಮಿಫೈನಲ್‌ ಪ್ರವೇಶ

ಅಲ್ಲದೇ ರಾಜ್ಯದಲ್ಲಿ ಬಿದಿರು ಬೆಳೆಯಲು ಅಗತ್ಯ ಖಾಲಿ ಇರುವ ಪ್ರದೇಶವನ್ನು ಗುರುತಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಷ್ಟ್ರೀಯ ಬಾಂಬು ಮಿಷನ್‌ ಅಡಿಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಬಾಂಬು ಬೆಳೆಯಲು, ಬಾಗಲಕೋಟೆ ತೋಟಗಾರಿಕಾ ವಿವಿ ಹಾಗೂ ಅರಣ್ಯ ಕಾಲೇಜ್‌ ಜೊತೆ ಚರ್ಚಿಸಿ ಸೂಕ್ತ ವರದಿ ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next