Advertisement

Watch Video: ಇದೊಳ್ಳೆ ಉಪಾಯ…ಪರಿಸರ ಸ್ನೇಹಿ ಬಿದಿರಿನ ವಾಶ್‌ ಬೇಸಿನ್‌ ಹೇಗಿದೆ ನೋಡಿ…

11:35 AM Aug 11, 2023 | Team Udayavani |

ನವದೆಹಲಿ: ನಾಗಾಲ್ಯಾಂಡ್‌ ಸಚಿವ ತೆಮ್ಜೆನ್‌ ಇಮ್ನಾ ಸಾಮಾಜಿಕ ಜಾಲತಾಣದಲ್ಲಿ ವೈವಿಧ್ಯಮಯ ವಿಡಿಯೋಗಳನ್ನು ಶೇರ್‌ ಮಾಡುವ ಮೂಲಕ ಸಕ್ರಿಯರಾಗಿದ್ದು, ಇದೀಗ ತಮ್ಮ ರಾಜ್ಯದಲ್ಲಿನ  ಹಳ್ಳಿಗಳಲ್ಲಿ ಜನರು ಬಿದಿರನ್ನು ಬಳಸಿ ಪರಿಸರ ಸ್ನೇಹಿ ವಾಶ್‌ ಬೇಸಿನ್‌ ತಯಾರಿಸಿರುವ ಕುರಿತು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Advertisement

ಇದನ್ನೂ ಓದಿ:600 Million Instagram Followers ಪಡೆದ ರೊನಾಲ್ಡೊ: ಇಲ್ಲಿದೆ ಟಾಪ್ 6 ಆಟಗಾರರ ಪಟ್ಟಿ

ಪರಿಸರದಲ್ಲಿ ದೊರಕುವ ವಸ್ತುಗಳನ್ನೇ ಬಳಸಿಕೊಂಡು ತುಂಬಾ ಕೌಶಲ್ಯಯುತವಾಗಿ ತಯಾರಿಸಿರುವ ಈ ವಾಶ್‌ ಬೇಸಿನ್‌ ಬಗ್ಗೆ ಇಮ್ನಾ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

“ಇದು ಬಿದಿರನ್ನು ಬಳಸಿ ಕಂಡು ಹಿಡಿದಿರುವ ನೂತನ ವಾಶ್‌ ಬೇಸಿನ್‌ , ಶೇ.100ರಷ್ಟು ನೈಸರ್ಗಿಕವಾಗಿದೆ. ಇದರ ಬಳಕೆಯಿಂದ ಪರಿಹಾರಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ. ನಾಗಾಲ್ಯಾಂಡ್‌ ಜನರು ತಮ್ಮ ಹಳ್ಳಿಗಳಲ್ಲಿ ಇಂತಹ ಪರಿಸರ ಸ್ನೇಹಿ ವಾಶ್‌ ಬೇಸಿನ್‌ ಗಳನ್ನು ತಯಾರಿಸಿ ಬಳಸುತ್ತಿದ್ದಾರೆ. ಪರ್ವತ ಪ್ರದೇಶದಿಂದ ಹರಿದು ಬರುವ ನೀರನ್ನು ಬಿದಿರಿನ ಮೂಲಕ ಹಾಯಿಸಿ ಅದಕ್ಕೆ ರಂಧ್ರಗಳನ್ನು ಕೊರೆದು ತಮಗೆ ಅಗತ್ಯವಿದ್ದಾಗ ರಂಧ್ರಕ್ಕೆ ಸಿಕ್ಕಿಸಿದ ಮರದ ತಂಡುಗಳನ್ನು ಹೊರತೆಗೆದು ಕೈ, ಕಾಲುಗಳನ್ನು ತೊಳೆದುಕೊಳ್ಳಬಹುದಾಗಿದೆ. ನಂತರ ಪುನಃ ಮರದ ಚೂಪಾದ ತುಂಡನ್ನು ರಂಧ್ರವನ್ನು ಮುಚ್ಚುತ್ತಾರೆ” ಎಂಬುದಾಗಿ ಇಮ್ನಾ ತಮ್ಮ ಟ್ವೀಟ್‌ ನಲ್ಲಿ ಉಲ್ಲೇಖಿಸಿದ್ದಾರೆ.

Advertisement

ಇಂತಹ ಉಪಾಯವನ್ನು ಎಲ್ಲೆಡೆ ಅನುಸರಿಸಿದರೆ ಇದರಿಂದ ಪರಿಸರಕ್ಕೆ ಬಹಳಷ್ಟು ಸಹಕಾರಿಯಾಗಲಿದೆ ಎಂದು ತೆಮ್ಜೆನ್‌ ಇಮ್ನಾ ಟ್ವೀಟ್‌ ನಲ್ಲಿ ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣ X ನಲ್ಲಿ ವೈರಲ್‌ ಆಗಿದ್ದು, ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next