Advertisement

ಕಲಾವಿದರ ಮಾಸಾಶನ ಹಣ ಶೀಘ್ರ ಬಿಡುಗಡೆಗೆ ಕ್ರಮ: ಸುನೀಲ್ ಕುಮಾರ್

07:16 PM Nov 22, 2021 | Team Udayavani |

ಬೆಂಗಳೂರು: ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರು ಇಂದು ಅಧಿಕಾರಗಳ ಜೊತೆ ಸಭೆ ನಡೆಸಿ ಕಡತಗಳ ಪರಿಶೀಲನೆ ನಡೆಸಿದರು.

Advertisement

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಲ್ಲಿ ವಿಲೇವಾರಿ ಆಗಿದ್ದ ಕಡತಗಳ ಕುರಿತು ಮಾಹಿತಿ ಪಡೆದರು. ಮಾತ್ರವಲ್ಲದೆ ಕಡತವನ್ನು ವಿಲೇವಾರಿ ಮಾಡದೆ ಹಾಗೆ ಇಟ್ಟುಕೊಂಡಿದ್ದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದರು. 120 ಅಧಿಕಾರಗಳು ಇಂದಿನ ಸಭೆಗೆ ಹಾಜರಾಗಿದ್ದರು. ಮೂರು ತಂಡಗಳಾಗಿ ಅಧಿಕಾರಿಗಳನ್ನು ವಿಭಾಗಿಸಿ ಸಭೆ ನಡೆಸಿದ ಸಚಿವರು ಪ್ರಮುಖ ಸಲಹೆ ಸೂಚನೆಗಳನ್ನು ನೀಡಿದರು. ಕಲಾವಿದರ ಮಾಸಾಶನ ಹಣ ಆರ್ಥಿಕ ಇಲಾಖೆಯಲ್ಲಿ 14 ಕೋಟಿ ಬಾಕಿ ಇದ್ದು ಕೂಡಲೆ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡದರು.

ಎಲ್ಲಾ ಕಡತಗಳು ತುರ್ತಾಗಿ ವಿಲೇವಾರಿ ಆಗುವ ಜೊತೆಗೆ ಇಲಾಖೆಯಿಂದ ಇಲಾಖೆಗೆ ಕಡತಗಳು ಒಂದು ವಾರದೊಳಗೆ ಹೋಗಿ ಕೆಲಸ ಆಗುವಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಇನ್ನು ಕಾರ್ಯಕ್ರಮಗಳಿಗೆ ಆರ್ಥಿಕ ಸಹಾಯ ನೀಡೊದು, ಟ್ರಸ್ಟ್ , ರಂಗಾಯಣಕ್ಕೆ ಆರ್ಥಿಕ ಸಹಾಯ ಇದೆಲ್ಲವೂ ಸರಿಯಾದ ಸಮಯಕ್ಕೆ ಬಿಡುಗಡೆ ಆಗುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಎಚ್ಚರಿಕೆ ರೂಪದ ಸೂಚನೆ ನೀಡಿದ್ದಾರೆ.

ಟ್ರಸ್ಟ್ ಬೈಲಾದಲ್ಲಿ ಏಕರೂಪತೆ ತರುವ ನಿಟ್ಟಿನಲ್ಲಿ ಸಚಿವರು ಕ್ರಮ ಕೈಗೊಂಡಿದ್ದು, ಪಾರದರ್ಶಕ ಹೆಜ್ಜೆ ಇಟ್ಟಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಬುಕಿಂಗ್  ಮಾಡಲು ಇನ್ನು ಮುಂದೆ ಆನ್ ಲೈನ್ ಸಿಸ್ಟಮ್ ಅಳವಡಿಸಲು ತೀರ್ಮಾನ ಮಾಡಲಾಗಿದೆ. ಜೊತೆಗೆ ರವೀಂದ್ರ ಕಲಾಕ್ಷೇತ್ರ ನವೀಕರಣ ಮಾಡಲು ಸಚಿವರು ತೀರ್ಮಾನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next