Advertisement

ಕೋವಿಡ್‌ ಆಸ್ಪತ್ರೆಗಳಿಗೆ ಸಚಿವ ಸುಧಾಕರ್‌ ದಿಢೀರ್‌ ಭೇಟಿ, ಪರಿಶೀಲನೆ

08:45 PM Jul 05, 2020 | Sriram |

ಬೆಂಗಳೂರು : ಸಾವ೯ಜನಿಕವಾಗಿ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಅವರು ಭಾನುವಾರ ಜಯನಗರ ಸಾವ೯ಜನಿಕ ಆಸ್ಪತ್ರೆ ಮತ್ತು ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆಗ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಯಾವುದೇ ಸೂಚನೆ ನೀಡದೆ ಸಚಿವರು ದಿಢೀರ್‌ ಭೇಟಿ ನೀಡಿ ರೋಗಿಗಳ ದಾಖಲು ವ್ಯವಸ್ಥೆ, ಟೆಸ್ಟ್‌ಗಳ ಪ್ರಮಾಣ, ಐಸಿಯು ಮತ್ತು ಇತರೆ ವಾಡು೯ಗಳಲ್ಲಿ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ, ಊಟ, ಪಿಪಿಇ ಕಿಟ್‌ ಹಾಗೂ ಇತರೆ ಉಪಕರಣಗಳ ಗುಣಮಟ್ಟ, ತಜ್ಞರು, ವೈದ್ಯರು ಮತ್ತು ಸಿಬ್ಬಂದಿಗಳ ಬಗ್ಗೆ ಮಾಹಿತಿ ಪಡೆದರು.

ಐಸಿಯು ಮತ್ತು ಇತರೆ ವಾಡು೯ಗಳಲ್ಲಿರುವ ರೋಗಿಗಳ ಜತೆ ಸಂವಾದ ನಡೆಸಿದ ಸಚಿವರು ಚಿಕಿತ್ಸೆ ಗುಣಮಟ್ಟ ಮತ್ತು ನೀಡುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ನೇರವಾಗಿ ಮಾಹಿತಿ ಪಡೆದರು. ಜಯನಗರ ಆಸ್ಪತ್ರೆಯಲ್ಲಿ ನಿಗದಿತ ಸಂಖ್ಯೆ ತಜ್ಞರು ಇಲ್ಲದಿರುವುದು, ಟೆಸ್ಟ್‌ಗಳ ಮಾಹಿತಿ ಸರಿಯಾಗಿ ನಿವ೯ಹಣೆ ಮಾಡದಿರುವುದು, ಹೊರಗೆ ರೋಗಿಗಳು ಕಾಯುತ್ತಿದ್ದರೂ ದಾಖಲು ಮಾಡದಿರುವುದಕ್ಕೆ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇನ್ನು ಮುಂದೆ ಸತತವಾಗಿ ಕೋವಿಡ್‌ ಆಸ್ಪತ್ರೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸುವುದನ್ನು ಮುಂದುವರಿಸಿ ರೋಗಿಗಳಿಂದ ನೇರವಾಗಿ ಮಾಹಿತಿ ಪಡೆಯುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಚಿವರು ಲೋಪಗಳಿದ್ದಲ್ಲಿ ಸಹಿಸಲು ಸಾಧ್ಯವೇ ಇಲ್ಲ ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next